Advertisement

ಬೆಳಗಾವಿ ನಾಗನೂರು ಮಠಕ್ಕೆ ಸಚಿವ ಪ್ರಹ್ಲಾದ ಜೋಶಿ ಭೇಟಿ

05:05 PM Dec 06, 2020 | Adarsha |

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆ ನಾಗನೂರು ರುದ್ರಾಕ್ಷಿಮಠಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಹಾಗೂ ಅಲ್ಲಮ ಪ್ರಭು ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು.

Advertisement

ವಚನ ಸಾಹಿತ್ಯ ಮತ್ತು ಉಪನಿಷತ್ತುಗಳ ತೌಲನಿಕ ಅಧ್ಯಯನ, ಬಸವಣ್ಣನವರ ವಚನಗಳಲ್ಲಿ ಮಾನವೀಯತೆ, ವಚನಗಳಲ್ಲಿ ತತ್ವ ಮೀಮಾಂಸೆ, ವಚನಗಳಲ್ಲಿ ಧರ್ಮ ಮತ್ತು ನೀತಿ ವಚನ ಸಾಹಿತ್ಯ ಸಂಗ್ರಹ, ಕರ್ತಾರನ ಕಮ್ಮಟ ಮುಂತಾದ ಧಾರ್ಮಿಕ ಕೃತಿಗಳು ಪ್ರಸ್ತುತ ಪ್ರಕಟವಾಗುತ್ತಿರುವ ಮತ್ತು ನಿಂತುಹೋದ ಅಪರೂಪದ ನಿಯತಕಾಲಿಕೆಗಳ ಸಂಚಿಕೆಗಳನ್ನು ಸಂಗ್ರಹಿಸಿ ಮಠದಲ್ಲಿ ಸಂರಕ್ಷಿಸಲಾಗಿದೆ. ಶಿವಾನುಭವ ಪತ್ರಿಕೆಯ 35 ಸಂಪುಟಗಳು ಒಂದೆಡೆ ಲಭ್ಯವಿರುವುದು ಈ ಗ್ರಂಥಾಲಯದಲ್ಲಿ ಮಾತ್ರ. ಹಳೆಯ ಅಪರೂಪದ ಗ್ರಂಥಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಶ್ರೀಗಳು ಸಚಿವ ಪ್ರಹ್ಲಾದ ಜೋಶಿ ಅವರಿಗೆ ತೋರಿಸಿದರು.

ಇದನ್ನೂ ಓದಿ:ಗ್ರಾಮೀಣ ಜನರಿಂದಲೇ ಸಂಸ್ಕೃತಿ ರಕ್ಷಣೆ

1995ರಲ್ಲಿ ಬೆಳಗಾವಿ ನಗರದ ರುದ್ರಾಕ್ಷಿಮಠದ ಆವರಣದಲ್ಲಿ ಡಾ| ಸಿದ್ಧರಾಮ ಸ್ವಾಮೀಜಿ ಅವರಿಂದ ಸ್ಥಾಪನೆಗೊಂಡಿರುವ ವಚನ ಅಧ್ಯಯನ ಕೇಂದ್ರವು ವಚನಗಳ ತಲಸ್ಪರ್ಶಿ ಅಧ್ಯಯನಕ್ಕಾಗಿ ಮೀಸಲಾದ ಸಂಸ್ಥೆ. ಪ್ರಾತಿನಿ ಧಿಕ ವಚನಗಳನ್ನು ಸಂಗ್ರಹಿಸುವುದಷ್ಟೇ ಅಲ್ಲದೆ ಇತರೆ ಭಾಷೆಗೆ ಅನುವಾದಿಸಿ ಪ್ರಕಟಿಸುವ ಕೆಲಸ ಮಾಡುತ್ತಿದೆ ಎಂದು ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಹಾಗೂ ಅಲ್ಲಮ ಪ್ರಭು ಸ್ವಾಮೀಜಿ ಹೇಳಿದರು. ಶಾಸಕರಾದ ಅರವಿಂದ ಬೆಲ್ಲದ, ಕವಟಗಿಮಠ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next