Advertisement

ಸೂರ್ಯ ರೈತ ಯೋಜನೆಗೆ ಸಚಿವ ಪಾಟೀಲ್‌ ಚಾಲನೆ

06:20 AM Jan 20, 2018 | Team Udayavani |

ರಾಮನಗರ: ಕನಕಪುರ ತಾಲೂಕು ಹಾರೋ ಬೆಲೆಯಲ್ಲಿ ಶುಕ್ರವಾರ ಸೂರ್ಯ ರೈತ ಯೋಜನೆ ವಿದ್ಯುಕ್ತವಾಗಿ ಲೋಕಾರ್ಪಣೆಯಾಯಿತು. ಯೋಜನೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌. ಕೆ.ಪಾಟೀಲ್‌, ಸೂರ್ಯ ರೈತ ಯೋಜನೆ ರಾಷ್ಟ್ರದಲ್ಲೇ ಮಾದರಿ ಯೋಜನೆ.ಬೇರೆ ರಾಜ್ಯಗಳೂ ಈ ಯೋಜನೆಯನ್ನು ಅನುಕರಿಸಬಹುದಾಗಿದೆ.

Advertisement

ಸೂರ್ಯನ ಬೆಳಕಿನ ಶಕ್ತಿಯನ್ನು ವಿದ್ಯುತ್‌ ಶಕ್ತಿಯನ್ನಾಗಿ ಪರಿವರ್ತಿಸಿ ರೈತರ ಪಂಪ್‌ಸೆಟ್‌ಗೆ ವಿದ್ಯುತ್‌ ಒದಗಿಸುವ ಇದು ಕ್ರಾಂತಿಕಾರಿ ವ್ಯವಸ್ಥೆ. ಹಗಲು ವೇಳೆಯಲ್ಲಿ ರೈತರಿಗೆ ನಿರಂತರ ವಿದ್ಯುತ್‌ ಪೂರೈಸಲಾಗುವುದು. ಅಲ್ಲದೆ, ಹೆಚ್ಚುವರಿ ವಿದ್ಯುತ್‌ನ್ನು ಬೆಸ್ಕಾಂನ ಗ್ರಿಡ್‌ಗೆ ಕೊಟ್ಟು ಲಾಭವನ್ನೂ ಗಳಿಸಬಹುದಾಗಿದ್ದು ಇಂತಹ ಯೋಜನೆ ಇಡೀ ದೇಶದಲ್ಲೇ ವಿಭಿನ್ನ ಎಂದು ಶ್ಲಾ ಸಿದರು.ಕನಕಪುರದಲ್ಲಿ ಪೈಲಟ್‌ ಆಧಾರದಲ್ಲಿ ಸೂರ್ಯ ರೈತ ಯೋಜನೆ ಸ್ಥಾಪನೆಯಾಗಿ ಯಶಸ್ವಿಯಾಗಿದೆ. ಮುಂದೆ ಈ ಯೋಜನೆಯನ್ನು ಗದಗದಲ್ಲಿ ಅನುಷ್ಠಾನಗೊಳಿಸುವಂತೆ ಇಂಧನ ಸಚಿವ ಡಿ.ಕೆ.
ಶಿವಕುಮಾರ್‌ಗೆ ಮನವಿ ಮಾಡಿದರು.

ಕನಸು ಈಡೇರಿದೆ: ಕನಕಪುರ ತಾಲೂಕು ಜನತೆ ತಮ್ಮನ್ನು 6 ಬಾರಿ ಶಾಸಕನನ್ನಾಗಿ ಮಾಡಿದ್ದಾರೆ. ಏನಾದರೂ ಹೊಸತು ಕೊಡಬೇಕು ಎಂದು ತಾವು ಕಂಡಿದ್ದ ಕನಸು ಈಗ ಈಡೇರಿದೆ. ತಮ್ಮ ರಾಜಕೀಯ ಜೀವನ ಸಾರ್ಥಕವಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹರ್ಷ ವ್ಯಕ್ತಪಡಿಸಿದರು

Advertisement

Udayavani is now on Telegram. Click here to join our channel and stay updated with the latest news.

Next