Advertisement

ಸಹಕಾರಿ ಯೋಜನೆ ಬಡವರಿಗೆ ತಲುಪಿಸಿ: ಸಚಿವ ರಮಾನಾಥ ರೈ

12:29 PM Oct 08, 2017 | Team Udayavani |

ಸುಳ್ಯ: ಸರಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಬಡವರಿಗೆ ತಲುಪಿಸುವವರು ಗ್ರಾಮಕರಣಿಕರು. ಅವರು ಬಡವರಿಗೆ ಯಾವುದೇ ತೊಂದರೆ ನೀಡದೆ ಸಮರ್ಪಕವಾಗಿ ನ್ಯಾಯ ಕೊಡುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ
ಕರೆ ನೀಡಿದರು.

Advertisement

ಸುಳ್ಯದ ಕೆವಿಜಿ ಪುರಭವನದಲ್ಲಿ ಶನಿವಾರ ಜರಗಿದ ವಿವಿಧ ಇಲಾಖೆಗಳ ಸವಲತ್ತು ವಿತರಣೆ ಮತ್ತು ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಗರಿಕ ಸೇವೆ ಕೈಗೊಳ್ಳುವ ಅಭ್ಯರ್ಥಿಗಳು ಹೆಚ್ಚಾಗಿ ಶ್ರೀಮಂತರ ಮಕ್ಕಳು. ಆದರೆ ಗ್ರಾಮ ಕರಣಿಕರು ಹೆಚ್ಚಾಗಿ ಬಡವರ ಮಕ್ಕಳಾಗಿ ಸೇವೆಗೆ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಸರಕಾರದ ವಿವಿಧ ಯೋಜನೆಗಳನ್ನು ಬಡವರಿಗೆ ತಲುಪಿಸುವ ಮೂಲಕ ಬಡವರ ಸೇವೆ ಮಾಡಬೇಕು
ಎಂದರು.

ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ 94ಸಿ ಮತ್ತು 94ಸಿಸಿ ಯೋಜನೆಯ ಮೂಲಕ ಹಕ್ಕುಪತ್ರ ನೀಡುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ. ಜಿಲ್ಲೆಯಲ್ಲಿ 1ಲಕ್ಷಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ ಕುಮ್ಕಿ, ರಸ್ತೆ ಮತ್ತು ನದಿ ಪರಂಬೋಕು ಸ್ಥಳದಲ್ಲಿ ಮನೆ ಕಟ್ಟಿಕೊಂಡವರಿಗೂ ಹಕ್ಕುಪತ್ರ ವಿತರಣೆ ನಡೆಯಲಿದೆ. ಆದರೆ ಯಾವುದೇ ಅಧಿಕಾರಿಗಳು ತಕರಾರು ನಡೆಸಿದರೆ ಅಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next