ಮೈಸೂರು: ಚುನಾವಣೆಯಲ್ಲಿ ಜನರ ಬಳಿ ಹೋಗಲು ಯಾವುದೇ ಅಭಿವೃದಿಟಛಿ ಪರ ಅಜೆಂಡಾ ಹೊಂದಿಲ್ಲದ ಬಿಜೆಪಿ ನಾಯಕರು, ಕರ್ನಾಟಕಕ್ಕೆ ಬೆಂಕಿ ಹಚ್ಚಿ ರಾಜಕೀಯ ಲಾಭ ಪಡೆಯುವ ಸಲುವಾಗಿಯೇ ಅನಂತಕುಮಾರ್ ಹೆಗಡೆ ಅವರನ್ನು ಮಂತ್ರಿ ಮಾಡಿಕೊಂಡಿದ್ದಾರೆಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಅಜೆಂಡಾವನ್ನೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ
ಕಸಿದುಕೊಂಡು, ಕಳೆದ 6 ತಿಂಗಳಲ್ಲಿ ಚಾಣಾಕ್ಷತನ ತೋರಿದ್ದಾರೆ. ಹೀಗಾಗಿ ಬಿಜೆಪಿಯವರಿಗೆ ಹೇಳಿಕೊಳ್ಳಲು
ಯಾವುದೇ ಗಂಭೀರ ವಿಷಯವಿಲ್ಲ.
ವೀರಶೈವ-ಲಿಂಗಾಯತ ವಿಚಾರದಲ್ಲೂ ಮುಜುಗರ ಪಡುತ್ತಿದ್ದಾರೆ. ಅಭಿವೃದಿಟಛಿ ವಿಚಾರದಲ್ಲೂ ಬಿಜೆಪಿ ಸೋತಿದೆ. ಬಿಜೆಪಿಗೆ ಈಗ ಹೇಳಿಕೊಳ್ಳಲು ಏನೂ ವಿಷಯವಿಲ್ಲ. ಹೀಗಾಗಿ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ತುಷ್ಟೀಕರಣವನ್ನು ಹೆಚ್ಚು ಮಾಡುತ್ತಾರೆ. ಅನಂತ ಕುಮಾರ್ ಹೆಗಡೆ ಇದರಲ್ಲಿ ನಿಸ್ಸೀಮರು. ಲೋಕಸಭೆ ಚುನಾವಣೆ 2 ತಿಂಗಳು ಇದೆ ಎನ್ನುವಾಗ ತನಗೆ ಮುಸ್ಲಿಮರ ಮತ ಬೇಡ ಎಂದು ಕೋಮು ಪ್ರಚೋದಕ ಭಾಷಣ ಮಾಡುವ ಅನಂತಕುಮಾರ್ ಹೆಗಡೆಯನ್ನು ಬೆಂಕಿ ಹಚ್ಚಲೆಂದೇ ಮಂತ್ರಿ ಮಾಡಿದ್ದಾರೆ ಎಂದರು.