Advertisement

3 ತಿಂಗಳ ಬಡ್ಡಿ ರಹಿತ ಇಎಂಐ ಘೋಷಿಸಿದ ಇಂಧನ ಸಚಿವ

06:02 PM Jul 10, 2020 | Suhan S |

ಮುಂಬಯಿ, ಜು. 9: ಜೂನ್‌ನಲ್ಲಿ ಸ್ವೀಕರಿಸಿದ ವಿದ್ಯುತ್‌ ಬಿಲ್‌ ಪಾವತಿಸಲು 2 ಕೋಟಿ ಬಳಕೆದಾರರಿಗೆ ಸಹಕಾರಿಯಾಗುವಂತೆ ರಾಜ್ಯ ಇಂಧನ ಸಚಿವ ನಿತಿನ್‌ ರಾವುತ್‌ ಅವರು 3 ತಿಂಗಳ ಕಾಲ ಬಡ್ಡಿ ಇಲ್ಲದ ಇಎಂಐ ಅನ್ನು ಘೋಷಿಸಿದ್ದಾರೆ.

Advertisement

ಸಾವಿರಾರು ಗ್ರಾಹಕರು ಹೆಚ್ಚಿನ ಬಿಲ್‌ ಪಡೆದಿದ್ದಾರೆಂದು ಹೇಳಿಕೆ ಬಂದ ಕೆಲವು ದಿನಗಳ ಹಿಂದೆ ಸಚಿವರು ತ್ವರಿತ ಪಾವತಿ ಗಾಗಿ ಶೇ. 2ರಷ್ಟು ರಿಯಾಯಿತಿ ರೂಪದಲ್ಲಿ ಪರಿಹಾ ರವನ್ನು ನೀಡಿದರು. ಗ್ರಾಹಕರ ಗುಂಪುಗಳು ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಯೋಜಿ ಸುತ್ತಿರುವ ಬೆನ್ನಲ್ಲೇ ಶೂನ್ಯ-ಬಡ್ಡಿ ದರದಲ್ಲಿ ಇಎಂಐ ಘೋಷಿಸಿ ಗ್ರಾಹಕರಿಗೆ ಪರಿಹಾರ ನೀಡಿದ್ದಾರೆ. ಎಂಎಸ್‌ಇಡಿಸಿಎಲ್‌ ಜನಸಂಪರ್ಕ ಅಧಿಕಾರಿ ಮಮತಾ ಪಾಂಡೆ ಅವರು ಮಾತನಾಡಿ, ಭಾಂಡೂಪ್‌, ಮುಲುಂಡ್‌, ಥಾಣೆ, ನವಿಮುಂಬಯಿ, ಕಾಮೋಟೆ ಮತ್ತು ರಾಯ್‌ಗಢದಲ್ಲಿ 10.5 ಲಕ್ಷ ಗ್ರಾಹಕರು ಈಗಾಗಲೇ ಜೂನ್‌ನಲ್ಲಿ ಸ್ವೀಕರಿಸಿದ ಬಿಲ್‌ಗ‌ಳ ಬಗ್ಗೆ ದೂರುಗಳನ್ನು ಸಲ್ಲಿಸಿದ್ದು, ಅವರ ಸಮಸ್ಯೆಗಳನ್ನು ಸಹಾಯ ಕೇಂದ್ರಗಳಲ್ಲಿ ಪರಿಹರಿಸಲಾಗಿದೆ ಎಂದರು.

ನಾವು ಜೂನ್‌ ತಿಂಗಳಿಗೆ 300 ಕೋಟಿ ರೂ. ವಿದ್ಯುತ್‌ ಬಿಲ್‌ಗ‌ಳನ್ನು ಸಂಗ್ರಹಿಸಿದ್ದೇವೆ, ಇದರಲ್ಲಿ ಅನುಕೂಲಕರ ಇಎಂಐ ಸೌಲಭ್ಯವಿದೆ ಎಂದು ಅವರು ಹೇಳಿದರು.

ಎಂಎಸ್‌ಇಡಿಸಿಎಲ್‌ ಮುಖ್ಯ ವಕ್ತಾರ ಅನಿಲ್‌ ಕಾಂಬ್ಳೆ ಅವರು ಮಾತನಾಡಿ, ಇಎಂಐಗಳಿಗೆ ಯಾವುದೇ ಬಡ್ಡಿ ವಿಧಿಸದಂತೆ ಸಚಿವ ರಾವುತ್‌ ಅವರು ಈಗಾಗಲೇ ನಿರ್ದೇಶನಗಳನ್ನು ನೀಡಿದ್ದರು. ಗ್ರಾಹಕರು ಲಾಭ ಪಡೆಯಲು ನಿಗದಿತ ಗಡುವಿನ ಮೊದಲು ನಿರ್ದಿಷ್ಟ ತಿಂಗಳ ಬಿಲ್‌ ಜತೆಗೆ ಇಎಂಐ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇಲ್ಲದಿದ್ದರೆ ಅವರು ವಿಳಂಬವಾದ ಪಾವತಿಗೆ ದಂಡ ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಟಾಟಾ ಪವರ್‌ ಇಎಂಐ ಮತ್ತು ಬಡ್ಡಿದರಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಎಂಇಆರ್‌ಸಿ ಮಾರ್ಗಸೂಚಿಗಳಿಗೆ ಅನುಸಾರವಾಗಿ ಬಡ್ಡಿ ವಿಧಿಸಲಾಗುತ್ತಿದೆ ಎಂದು ಅದಾನಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸುಂಕದ ಆದೇಶವು ಮೊದಲ ಮೂರು ತಿಂಗಳವರೆಗೆ ಇಎಂಐ ಪಾವತಿಗಳ ಮೇಲೆ ಗರಿಷ್ಠ ಶೇ. 12 ರಷ್ಟು ಬಡ್ಡಿಯನ್ನು ಅನುಮತಿಸುತ್ತದೆ. ಖಾಸಗಿ ವಿತರಣಾ ಕಂಪನಿಗಳನ್ನೂ ಸರಕಾರ ಬೆಂಬಲಿಸಬೇಕು ಮತ್ತು ಸಬ್ಸಿಡಿ ನೀಡಬೇಕಾಗಿದೆ ಎಂದು ಪೆಂಡ್ಸೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next