Advertisement

B.Y ರಾಘವೇಂದ್ರ ಅವರಿಂದ ಸಚಿವೆ ನಿರ್ಮಲಾ ಭೇಟಿ-  ಗೋಡಂಬಿ ಉದ್ಯಮಕ್ಕೆ ನೆರವಿಗೆ ಮನವಿ

11:29 PM Aug 10, 2023 | Team Udayavani |

ಬೈಂದೂರು/ಕುಂದಾಪುರ: ಕರಾವಳಿ ಕರ್ನಾಟಕವು ಗೋಡಂಬಿ ಸಂಸ್ಕರಣ ಉದ್ದಿಮೆಗಳ ಕೇಂದ್ರ ಮಾತ್ರವಲ್ಲದೆ ಗ್ರಾಮೀಣ ಆರ್ಥಿಕತೆಯ ಅವಿಭಾಜ್ಯ ಅಂಗವೂ ಆಗಿದೆ. ಹಾಗಾಗಿ ಗೋಡಂಬಿ ಸಂಸ್ಕರಣ ಉದ್ಯಮದ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಸಂಸದ ಬಿ.ವೈ. ರಾಘವೇಂದ್ರ ಗುರು ವಾರ ಹೊಸದಿಲ್ಲಿಯಲ್ಲಿ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ಉದ್ಯಮದಲ್ಲಿ 1.50 ಲಕ್ಷಕ್ಕೂ ಮಿಕ್ಕಿ ಮಹಿಳೆಯರು ಕೆಲಸ ಮಾಡು ತ್ತಿದ್ದು, ಇವರ ಕುಟುಂಬಗಳಿಗೆ ಇದೇ ಆದರೆ ಪ್ರಸ್ತುತ ಗೋಡಂಬಿ ಸಂಸ್ಕರಣ ಘಟಕಗಗಳಿಗೆ ಕೊರೊನಾ ಹಾಗೂ ಕೊರೊನಾನಂತರದ ಅವಧಿಯ ಎರಡೆ ರಡು ರೀತಿಯ ಸಾಲಗಳನ್ನು ಮರು ಪಾವತಿಸಲು ಸಮಸ್ಯೆಯಾಗಿದೆ. ತಾವು ಮಧ್ಯಪ್ರವೇಶಿಸಿ, ಇಎಂಐ ಭಾರ ಕಡಿಮೆ ಮಾಡಬೇಕು ಎಂದು ಕೋರಿದರು.

ಏನೆಲ್ಲ ಬೇಡಿಕೆ ಸಲ್ಲಿಕೆ?
ವರ್ಕಿಂಗ್‌ ಕ್ಯಾಪಿಟಲ್‌ ಟರ್ಮ್ ಲೋನ್‌ ಸಾಲದ ಮರುಪಾವತಿ ಕನಿಷ್ಠ 18 ತಿಂಗಳು ಅಮಾನತು (ಮೊರಟೋರಿಯಂ) ಗೊಳಿಸಿ ಮತ್ತು ಅದಕ್ಕೆ ಅನುಗುಣವಾಗಿ ಮರುಪಾವತಿ ಅವ ಧಿ ವಿಸ್ತರಿಸಿ, ಗ್ಯಾರಂಟಿಡ್‌ ಎಮರ್ಜೆನ್ಸಿ ಕ್ರೆಡಿಟ್‌ ಲೈನ್‌ (ಜಿಇಸಿಎಲ್‌) ಇಎಂಐ ಪಾವತಿ ಮುಕ್ತಾಯ ಹಂತದವರೆಗೆ, ಕೊರೊನಾ ಅನಂತರದ ಗ್ಯಾರಂಟಿಡ್‌ ಎಮರ್ಜೆನ್ಸಿ ಕ್ರೆಡಿಟ್‌ ಲೈನ್‌ ವಿಸ್ತರಣೆ ಸಾಲದ ಇಎಂಐ ಅಮಾನತುಗೊಳಿಸಿ, ಅದರ ಮರು ಪಾವತಿ ಅವ ಧಿ ವಿಸ್ತರಿಸಿ, ನಿ ಧಿಯ ಬಡ್ಡಿ ಅವ ಧಿಯ ಸಾಲ (ಎಫ್‌ಐಟಿಎಲ್‌) ಒದಗಿಸುವಂತೆ ಕೋರಿದರು. ಅದೇ ರೀತಿ ವರ್ಕಿಂಗ್‌ ಕ್ಯಾಪಿಟಲ್‌ ಟರ್ಮ್ ಸಾಲ ಹಾಗೂ ಕೋವಿಡ್‌ ಸಾಲದ ಮೇಲಿನ ಬಡ್ಡಿದರ ಇಳಿಕೆಗೂ ಒತ್ತಾಯಿಸಿದರು.

ಆಮದು ಸಂಕಷ್ಟ
ವಿಯೆಟ್ನಾಂನಿಂದ ಕಡಿಮೆ ಗುಣಮಟ್ಟದ ಕಚ್ಚಾ ಗೋಡಂಬಿಯನ್ನು ಆಮದು ಮಾಡಿಕೊಳ್ಳುತ್ತಿರುವುದ ರರಿಂದ ಇಲ್ಲಿನ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಜುಲೈಯಲ್ಲಿ ಉಡುಪಿಗೆ ಭೇಟಿ ನೀಡಿದ್ದ ಸಚಿವೆ ನಿರ್ಮಲಾಗೆ ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘವು ಮನವಿ ಸಲ್ಲಿಸಿದ್ದ ಬಗ್ಗೆಯೂ ಸಂಸದರು ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next