Advertisement

ಕ್ರಿಪ್ಟೋ ಸಮಸ್ಯೆ ಪರಿಹಾರಕ್ಕೆ ಆದ್ಯತೆ ಅಗತ್ಯ: ಸಚಿವೆ Nirmala Sitharaman ಸಲಹೆ

08:16 PM Apr 15, 2023 | Team Udayavani |

ವಾಷಿಂಗ್ಟನ್‌: ಜಿ20 ರಾಷ್ಟ್ರಗಳ ನಡುವಿನ ಪ್ರಮುಖ ಚರ್ಚಾ ವಿಷಯವಾಗಿ ಕ್ರಿಪ್ಟೋ ಆಸ್ತಿ ಮುನ್ನೆಲೆಗೆ ಬಂದಿದ್ದು, ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಶೇಷ ಆದ್ಯತೆ ನೀಡಬೇಕಿದೆ. ಅಲ್ಲದೇ, ಇದರಿಂದ ಆರ್ಥಿಕತೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರದಂತೆ ಗಮನಹರಿಸುವ ಅಗತ್ಯವಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸಲಹೆ ನೀಡಿದ್ದಾರೆ.

Advertisement

ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೇಂದ್ರ ಕಚೇರಿಯಲ್ಲಿ “ಕ್ರಿಪ್ಟೋ ಆಸ್ತಿಗಳ ಅತಿಸೂಕ್ಷ್ಮ ಆರ್ಥಿಕ ಪರಿಣಾಮಗಳು’ ವಿಷಯದ ಕುರಿತು ನಡೆದ ಜಿ20 ಹಣಕಾಸು ಸಚಿವರು ಹಾಗೂ ಕೇಂದ್ರ ಬ್ಯಾಂಕ್‌ ಗವರ್ನರ್‌ಗಳ ಸಭೆಯಲ್ಲಿ ಸಚಿವೆ ಭಾಗಿಯಾಗಿದ್ದರು.

ಈ ವೇಳೆ ಕ್ರಿಪ್ಟೋ ಈಗ ಬಹುದೊಡ್ಡ ಚರ್ಚಾ ವಿಷಯವಸ್ತುವಾಗಿದ್ದು, ಇದರ ನಿಯಂತ್ರಣ ಕ್ರಮಗಳಿಗೆ ಜಿ20 ಸರ್ವಾನುಮತವಿದೆ. ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಪ್ರಮುಖ್ಯ ಆದ್ಯತೆ ನೀಡಿ, ಐಎಂಎಫ್ ಮತ್ತು ಎಫ್ಎಸ್‌ಬಿ ನೀತಿ-ನಿಯಂತ್ರಣಗಳನ್ನು ರೂಪಿಸಿದರೆ ಅದನ್ನು ಜಿ20 ಅಂಗೀಕರಿಸಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next