ತುಮಕೂರು: ಕಲ್ಪತರು ನಾಡಿನ ವಿಶಿಷ್ಟ ವಿಧಾನಸಭಾ ಕ್ಷೇತ್ರ ಚಿಕ್ಕನಾಯಕನಹಳ್ಳಿ. ಈ ಕ್ಷೇತ್ರದಿಂದ ರಾಜ್ಯ ಬಿಜೆಪಿ ಸರಕಾರದ ಪ್ರಭಾವಿ ಸಚಿವ ಎಂದು ಬಿಂಬಿತವಾಗಿರುವ ಜೆ.ಸಿ.ಮಾಧುಸ್ವಾಮಿ ಪ್ರತಿನಿಧಿಸುತ್ತಿದ್ದು ಸಹಜವಾಗಿಯೇ ಅಖಾಡ ರಂಗೇರಿದೆ.
ಈ ಮೊದಲು ಒಮ್ಮೆ ಗೆದ್ದರೆ ಈ ಕ್ಷೇತ್ರದಿಂದ ಮತ್ತೆ ಗೆಲ್ಲುವುದಿಲ್ಲ ಎನ್ನುವು ದಾಗಿತ್ತು. ಆದರೆ ಕ್ಷೇತ್ರ ಪುನರ್‌ವಿಂಗಡಣೆ ಅನಂತರ ಹುಳಿಯಾರು, ಬುಕ್ಕಾ ಪಟ್ಟಣ ಹೋಬಳಿ ಸೇರಿದ ಅನಂತರ, ನಡೆದ 2008 ಮತ್ತು 2013ರ ಚುನಾ ವಣೆಯಲ್ಲೂ ಜೆಡಿಎಸ್‌ನಿಂದ ಅಂದಿನ ಶಾಸಕ ಸಿ.ಬಿ.ಸುರೇಶ್ ಬಾಬು ನಿರಂತರ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯ ಹಾಲಿ ಸಚಿವ ಜೆ.ಸಿ.ಮಾಧುಸ್ವಾಮಿ ಗೆಲುವು ಸಾಧಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಕಳೆದ 40 ವರ್ಷ ಬಿಜೆಪಿಯಲ್ಲಿ ಇದ್ದವರು. ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ ಎನ್ನುವ ಅನುಕಂಪವನ್ನು ಅಸ್ತ್ರ ಮಾಡಿಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಅಲ್ಲದೇ ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಸಿಎಂ ಮಾಡಬೇಕು ಎಂದು ಎಲ್ಲ ವರ್ಗದ ಜನ ಮತ ಹಾಕುತ್ತಾರೆ ಎನ್ನುವ ವಿಶ್ವಾಸ ಅವರದ್ದು. ಹಾಗೆಯೇ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಸ್ಪರ್ಧೆಗಿಳಿದಿದ್ದು ಜನರಿಂದ ಅನುಕಂಪ ಇದೆ. ಜನರೇ ಚುನಾವಣೆಗಾಗಿ ಹಣ ನೀಡುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸಿ.ಬಿ.ಸುರೇಶ್ ಬಾಬುರನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಬಾಬಣ್ಣ ಅವರನ್ನು ಸಚಿವ ಮಾಡಬೇಕು ಎನ್ನುವ ಅಭಿಪ್ರಾಯ ಮತದಾರರಲ್ಲಿ ಇದೆ ಎಂದು ತಿಳಿಸಿದ್ದಾರೆ.
ಜೆ.ಸಿ.ಮಾಧುಸ್ವಾಮಿ ಅವರಿಗೆ ಇದು ಕೊನೇ ಚುನಾವಣೆಯಾಗಿದ್ದು, ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂ.,ಗಳ ಅನುದಾನ ತಂದು ಅಭಿವೃದ್ಧಿ ಪಡಿಸಿದ್ದಾರೆ. ನೀರಾವರಿ ಯೋಜನೆಗೆ ಒತ್ತು ನೀಡಿ ಕ್ಷೇತ್ರದ ಕೆರೆಗಳಿಗೆ ನೀರು ಹರಿಸಿದ್ದಾರೆ, ಪಂಚಾಯ ತ್‌ವಾರು ಕೆಲಸ ಮಾಡಿದ್ದಾರೆ, ನಾನು ಮಾಡಿರುವ ಕ್ಷೇತ್ರದ ಅಭಿವೃದ್ಧಿ ಕೆಲಸ ನನ್ನ ಕೈ ಹಿಡಿಯುತ್ತದೆ ಎನ್ನುವ ವಿಶ್ವಾಸ ಅವರದ್ದು.
ಮಾಧುಸ್ವಾಮಿ ಅವರು ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ-ರಾಜ್ಯ ಸರಕಾರ ದಿಂದ ಹೆಚ್ಚು ಅನುದಾನ ತಂದಿರುವುದು ಪ್ಲಸ್ ಆಗಿದ್ದರೆ, ಜನರೊಂದಿಗೆ ಬೆರೆಯುವುದಿಲ್ಲ, ಜನರ ಸಮಸ್ಯೆ ಆಲಿಸುವುದಿಲ್ಲ ಎಂಬ ದೂರುಗಳು ಇವೆ. ಸಿ.ಬಿ.ಸುರೇಶ್ ಬಾಬು ಅವರು ಜನರೊಂದಿಗೆ ಆತ್ಮೀಯವಾಗಿ ಬೆರೆಯು ವುದು, ಜನರ ಸಮಸ್ಯೆ ಆಲಿಸುತ್ತಾರೆ ಎಂಬ ಪ್ಲಸ್ ಪಾಯಿಂಟ್‌ಗಳಿವೆ. ಆದರೆ ಅಭಿವೃದ್ಧಿಗೆ ಒತ್ತು ನೀಡಲ್ಲ, ಗೆದ್ದರೆ ಬೆಂಗಳೂರಿಗೆ ಹೋಗ್ತಾರೆ, ಎಂಬ ಭಾವನೆಗಳಿರುವುದು ಮೈನಸ್. ಕಿರಣ್ ಕುಮಾರ್ ಅವರಿಗೆ ಬಿಜೆಪಿ ಯಿಂದ ಟಿಕೆಟ್ ವಂಚನೆ ಎನ್ನುವ ಅನುಕಂಪ -ಜನರೊಂದಿಗೆ ಬೆರೆಯುವ ಗುಣ ಇದೆ ಎಂಬುದು ಪ್ಲಸ್ ಆಗಬಹುದು. ಆದರೆ ಕಾಂಗ್ರೆಸ್ ಕಾರ್ಯ ಕರ್ತರು ಒಟ್ಟಿಗೆ ಕೆಲಸ ಮಾಡದೇ ಇರುವುದು ಮೈನಸ್ ಆಗಬಹುದು.
~ ಚಿ.ನಿ.ಪುರುಷೋತ್ತಮ್