ಶಿರಸಿ: ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಇಬ್ಬರೂ ರಕ್ತ ಸಂಬಂಧಿಗಳು. ಅಳಿಯ ಹಾಗೂ ಮಾವನ ಸಂಬಂಧ.
Advertisement
ಸಚಿವನಾದ ಬಳಿಕ ಪ್ರಥಮ ಬಾರಿಗೆ ಶಿರಸಿಗೆ ಆಗಮಿಸಿದ ಮಧು ಅವರನ್ನು ಅತ್ತೆ ಗೀತಾ ಭೀಮಣ್ಣ ಅವರು ಆರತಿ ಬೆಳಗಿಸಿ, ಸಂಪ್ರದಾಯ ಪ್ರಕಾರ ದೃಷ್ಟಿ ಆಗಬಾರದು ಎಂದು ಹಾನ ಸುಳಿದು ಸ್ವಾಗತಿಸಿಕೊಂಡರು. ಇದಕ್ಕೂ ಮುನ್ನ ಗಿಡಮಾವಿನಕಟ್ಟೆ ಬಳಿ ಮಾವ ಶಾಸಕ ಭೀಮಣ್ಣ ಅರ್ಧಗಂಟೆಗೂ ಅಧಿಕ ಕಾಲ ಕಾದು ಬರ ಮಾಡಿಕೊಂಡರು. ಸಚಿವರಾದ ಬಳಿಕ ಪ್ರಥಮ ಬಾರಿಗೆ ಶಿರಸಿಗೆ ಬಂದು ವಾಸ್ತವ್ಯ ಮಾಡಿ ಸ್ವ ಕ್ಚೇತ್ರ ಸೊರಬಕ್ಕೆ ತೆರಳಿದರು.