Advertisement
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಾಂಗ್ರೆಸಿಗರಿಗೆ ಎಲ್ಲ ಧರ್ಮದ ಬಗ್ಗೆ ಗೌರವ ಇದೆ. ಅವಕಾಶ ಸಿಕ್ಕಿದಾಗ ನಾನು ಕೂಡ ಅಯೋಧ್ಯೆಗೆ ಹೋಗುತ್ತೇನೆ ಎಂದರು.
ರಾಮ ಮಂದಿರ ಲೋಕಾರ್ಪಣೆಗೆ ಹೋಗದಿರುವ ಕಾಂಗ್ರೆಸ್ ನಿರ್ಧಾರದಿಂದ ಮುಂದೆ ಅದು ಪಶ್ಚಾತ್ತಾಪ ಪಡಲಿದೆ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಪಶ್ಚಾತ್ತಾಪ ಎಂದು ಹೇಳಲು ಯಡಿಯೂರಪ್ಪ ಯಾರು? ಅವರು ಹೇಳುವುದು ಜನರ ತೀರ್ಮಾನವಾ? ನಮ್ಮ ಭವಿಷ್ಯ ತೀರ್ಮಾನಿಸುವುದು ರಾಜ್ಯದ ಜನರು. ಯಡಿಯೂರಪ್ಪ ಅಥವಾ ನಳಿನ್ ಕುಮಾರ್ ಕಟೀಲು ಅಲ್ಲ, ಮತದಾರರು ಹೇಳುತ್ತಾರೆ ಎಂದರು.
Related Articles
ಲೋಕಸಭಾ ಅಭ್ಯರ್ಥಿ ಆಯ್ಕೆ ಕೆಲಸ ನನಗೆ ಕೊಟ್ಟಿದ್ದಾರೆ. ರಣದೀಪ್ ಸಿಂಗ್ ಸುಜೇìವಾಲಾ ಹಾಗೂ ಬೇರೆ ಮುಖಂಡರು ಕರಾವಳಿ ಭಾಗದಲ್ಲಿ ಓಡಾಡಿ ಎಂದಿದ್ದಾರೆ. ದಕ್ಷಿಣ ಕನ್ನಡ ಅಭ್ಯರ್ಥಿ ಬಗ್ಗೆ ಕೆಲವು ವಿಚಾರ ಕಳುಹಿಸಿದ್ದೇನೆ, ಅಭ್ಯರ್ಥಿಗಳ ಕುರಿತು ಈ ಭಾಗದ ಮುಖಂಡರ ಜತೆ ಮತ್ತೆ ಚರ್ಚಿಸಿ ಮಾಹಿತಿ ಕಲೆ ಹಾಕುತ್ತೇನೆ. ಕಾಂಗ್ರೆಸ್‌ಗೆ ಕರಾವಳಿಯಲ್ಲಿ ಬಲ ಇಲ್ಲದಿದ್ದರೂ ನಾವು ಮತ್ತೆ ವಿಶ್ವಾಸ ಪಡೆಯಲು ಮತ್ತೆ ಕರಾವಳಿಗೆ ಬರುತ್ತಿದ್ದೇವೆ ಎಂದರು.
Advertisement
ನಳಿನ್ ರಾಜೀನಾಮೆ ನೀಡಲಿನಾವು ಗ್ಯಾರಂಟಿ ಕೊಡ್ತೀವಿ ಎಂದಾಗ ರಾಜ್ಯದ ಜನರು ಅಧಿಕಾರ ಕೊಟ್ಟರು. ಸಂಸದ ನಳಿನ್ ಕುಮಾರ್ ಕಟೀಲು ಅವರು ಚರಂಡಿ, ಕಾಲುವೆ ನೋಡಬೇಡಿ, ಹೊಡಿಬಡಿ ಎಂದರು. ಅವತ್ತು ನನ್ನ ರಾಜೀನಾಮೆ ಕೇಳಿದ್ದರು, ಮಾನ ಮರ್ಯಾದೆ ಇದ್ದರೆ ಅವರು ರಾಜೀನಾಮೆ ಕೊಡಲಿ ಎಂದು ಸಚಿವ ಮಧು ಬಂಗಾರಪ್ಪ ಆಗ್ರಹಿಸಿದರು. ರಾಜ್ಯದಲ್ಲಿ ಬಿಜೆಪಿ ಸೋಲಿಗೆ ನಳಿನ್ ಕುಮಾರ್ ಕಟೀಲು ಕಾರಣ, ಬಂಗಾರಪ್ಪ ಕೊಟ್ಟ ಭಿಕ್ಷೆಯಲ್ಲಿ ನಳಿನ್ ಕುಮಾರ್ ಕಟೀಲು ಅಧಿಕಾರ ಪಡೆದಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದಂತೆ ಸಾವಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದರು. ನಳಿನ್ ಸೋಲಿಸಲು ಶ್ರಮಿಸುವೆ
ನಳಿನ್ ಅವರು ಇಲ್ಲಿ ಹಿಂದುತ್ವ ಮತ್ತು ಭಾವನಾತ್ಮಕವಾಗಿ ಗೆದ್ದಿದ್ದಾರೆ. ಅವರು ಮಾಡಿದ ಅಭಿವೃದ್ಧಿ ತೋರಿಸಿ, ಮೋದಿ ಹೆಸರು ಬಿಟ್ಟು ಬೇರೆ ಏನು ಮಾಡಿದ್ದಾರೆ? ಅವರು ಪ್ರಗತಿ ತೋರಿಸಿ ಅಧಿಕಾರಕ್ಕೆ ಬಂದಿಲ್ಲ. ನಳಿನ್‌ಗೆ ಮತ್ತೆ ಟಿಕೆಟ್ ನೀಡೇಕು. ಆಗ ಇಲ್ಲಿಗೆ ನಾನೇ ಬರುತ್ತೇನೆ. ಅವರು ಇಲ್ಲಿ ಸೋಲಬೇಕು. ಅವರಿಗೆ ಚುನಾವಣೆಯಲ್ಲಿ ಏನು ಮಾಡಬೇಕೋ ನಾನು ಇಲ್ಲಿ ಮಾಡುತ್ತೇನೆ. ನಾನು ಕೂಡ ಅದರ ಸೂತ್ರಧಾರ ಆಗುತ್ತೇನೆ ಎಂದರು.