Advertisement

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

04:50 PM Dec 21, 2024 | Team Udayavani |

ಲ್ಯಾಂಬೆತ್‌: ಕರ್ನಾಟಕದ ದೊಡ್ಡ ಮತ್ತು ಮಧ್ಯಮ ಕೈಗಾ ರಿಕ ಸಚಿವರಾದ ಎಂ.ಬಿ. ಪಾ ಟೀಲ್‌ ಅವರು ಲಂಡನ್‌ನ ಲ್ಯಾಂಬೆತ್‌ ನಲ್ಲಿರುವ ಬಸವೇಶ್ವರ ಪ್ರತಿಮೆಗೆ ಭೇಟಿ ನೀಡಿ ನಮನ ಸಲ್ಲಿಸಿದರು. ಈ ವೇಳೆ ಎಂ.ಬಿ. ಪಾಟೀಲ್‌ ಅವರು ಪ್ರಭು ಹಳ ಕಟ್ಟಿ ಅವರ ಬಗ್ಗೆ ಹಾಗೂ ಜಾಗತಿಕ ಮಟ್ಟದಲ್ಲಿ ವಚನಗಳ ಸಂರಕ್ಷಣೆ, ಪ್ರಕಟನೆ ಹಾಗೂ ಪ್ರಚಾರ ಮಾಡುವಲ್ಲಿ ಅವರ ಸಮರ್ಪಣೆಯನ್ನು ಗುರು ತಿಸಿ ಗೌರವಿಸಿದರು.

Advertisement

ಈ ಕಾರ್ಯಕ್ರಮದಲ್ಲಿ ಲ್ಯಾಂಬೆತ್‌ನ ಮಾಜಿ ಮೇಯರ್‌ ಡಾ| ನೀರಜ್‌ ಪಾಟೀಲ್‌, ಬ್ರಿಟಿಷ್‌-ಭಾರತ ಕನ್ನಡ ಕಮ್ಯುನಿಟಿಯ ಅಭಿಜಿತ್‌ ಸಾಲಿ ಮಠ್ ಅವರ ಸಮ್ಮಾನಕ್ಕೆ ಸಾಕ್ಷಿಯಾಯಿತು.

ಈ ಸಂದರ್ಭದಲ್ಲಿ ಕೈಗಾರಿಕೆಗಳ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್‌, ಕೈಗಾರಿಕ ಕಮಿ ಷನರ್‌ ಗುಜನ್‌ ಕೃಷ್ಣಾ, ಅಶ್ವಿ‌ನಿ ಕುಮಾರ ಸ್ವಾಮಿ, ಇಂಡಿಯನ್‌ ಓಯಸಿಸ್‌ ಕಾಂಗ್ರೆಸ್‌ನ ಮಹಿಳಾ ವಿಭಾಗದ ಅಧ್ಯಕ್ಷೆ ಗುರನಿಂದರ್‌ ರಂಧಾವ, ಎಐ ಪಾಲಿಸಿ ಲ್ಯಾಬ್ಸ್ ನ ಉದಯ್‌ ನಾಗರಾಜ್‌ ಉಪಸ್ಥಿತರಿದ್ದರು.

2025ರ ಎಪ್ರಿಲ್‌ ನಲ್ಲಿ ಜರಗಲಿರುವ ಬಸವೇಶ್ವರ ಜಯಂತಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಆಮಂತ್ರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next