Advertisement

Rabkavi Banhatti; ಹಿಪ್ಪರಗಿ ಬ್ಯಾರೇಜ್ ಗೆ ಸಚಿವ ಕೃಷ್ಣ ಭೈರೇಗೌಡ ಭೇಟಿ

08:47 PM Jul 30, 2024 | Team Udayavani |

ರಬಕವಿ-ಬನಹಟ್ಟಿ: ಕಂದಾಯ ಸಚಿವ ಕೃಷ್ಣ ಭೆ„ರೇಗೌಡ ಸಮೀಪದ ಹಿಪ್ಪರಗಿ ಬ್ಯಾರೇಜ್‌ಗೆ ಮಂಗಳವಾರ ಭೇಟಿ ನೀಡಿ ನೀರಿನಮಟ್ಟ ಪರಿಶೀಲಿಸಿದರು.

Advertisement

ಜತೆಗಿದ್ದ ತೇರದಾಳ ಶಾಸಕ ಸಿದ್ದು ಸವದಿ, ಅಥಣಿ ಶಾಸಕ ಲಕ್ಷಣ ಸವದಿ, ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ ಅವರಿಂದ ಮಾಹಿತಿ ಪಡೆದರು.

ಇದಕ್ಕಿಂತ ಮೊದಲು ಹಿಪ್ಪರಗಿ ಗ್ರಾಮದ ನೀರಾವರಿ ಇಲಾಖೆ ಕಾರ್ಯಾಲಯದಲ್ಲಿ ಬಾಗಲಕೋಟೆ-ಬೆಳಗಾವಿ ಜಿಲ್ಲೆಯ ಜನಪ್ರತಿನಿ ಧಿಗಳು, ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಇದೇ ಸಂದರ್ಭದಲ್ಲಿ ಹಳಿಂಗಳಿ, ತಮದಡ್ಡಿ ಗ್ರಾಮಸ್ಥರು ಪುನರ್ವಸತಿಗಾಗಿ ಹಾಗೂ ತೇರದಾಳ ತಾಲ್ಲೂಕಿಗೆ ತಾಲ್ಲೂಕು ಕಾರ್ಯಾಲಯಗಳನ್ನು ನೀಡಬೇಕು ಎಂದು ಆಗ್ರಹಿಸಿ ತೇರದಾಳ ನಾಗರಿಕರು ನೀಡಿದ ಮನವಿಗಳನ್ನು ಸ್ವೀಕರಿಸಿದ ಸಚಿವರು ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ತೇರದಾಳ ಶಾಸಕ ಸಿದ್ದು ಸವದಿ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ಅಥಣಿ ಶಾಸಕ ಲಕ್ಷ್ಮಣ ಸವದಿ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಕಾಂಗ್ರೆಸ್ ಮುಖಂಡರಾದ ಸುಶೀಲಕುಮಾರ ಬೆಳಗಲಿ, ಸಿದ್ದು ಕೊಣ್ಣೂರ ಸೇರಿದಂತೆ ಅನೇಕರು ಇದ್ದರು.

Advertisement

ಇದೇ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ, ಗಲಗಲಿ ಬ್ಯಾರೇಜ್ ದಿಂದಾಗಿ ಈ ಭಾಗದ ರೈತರ ಜಮೀನುಗಳಿಗೆ ತೊಂದರೆಯಾಗಿದೆ. ಆದ್ದರಿಂದ ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಮಟ್ಟದಲ್ಲಿ ನೀರನ್ನು ಬಿಡಲು ಕ್ರಮ ತೆಗೆದುಕೊಳ್ಳಬೇಕು.

ಕ್ಷೇತ್ರದ ಗ್ರಾಮಗಳಾದ ಮುಳಗಡೆ ಗ್ರಾಮಗಳಾದ ಅಸ್ಕಿ, ತಮದಡ್ಡಿ, ಹಳಿಂಗಳಿ, ಕುಲಹಳ್ಳಿ ಮತ್ತು ಮದನಮಟ್ಟಿ ಗ್ರಾಮಗಳ ಪುನರ್ವಸತಿಗಾಗಿ ಆದಷ್ಟು ಬೇಗನೆ ಕ್ರಮ ತೆಗೆದುಕೊಳ್ಳುವಂತೆ ಸಚಿವರಿಗೆ ತಿಳಿಸಲಾಯಿತು ಎಂದರು.

ಈ ಕುರಿತು ಸಚಿವರು ಕೂಡಾ ಅಧಿಕಾರಿಗಳಿಗೆ ಆದಷ್ಟು ಬೇಗನೆ ಈ ಕಾರ್ಯದ ಕುರಿತು ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು.

ಪುನರ್ವಸತಿಯ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಈ ಭಾಗದ ಜನಪ್ರತಿನಿಧಿಗಳು, ಸಂತ್ರಸ್ತರ ಜೊತೆಗೂಡಿ ಸಭೆಯನ್ನು ಮಾಡುವಂತೆ ಸಚಿವರಿಗೆ ತಿಳಿಸಿದರು.

ಈಗಾಗಲೇ ಪುನರ್ವಸತಿಗಾಗಿ ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆಯನ್ನು ಮಾಡಲಾಗಿದ್ದು, ಈ ಕುರಿತು ಆದಷ್ಟು ಬೇಗನೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ ಎಂದು ಸವದಿ ತಿಳಿಸಿದರು.

ಘಟಪ್ರಭಾ ನದಿಯ ನೀರಿನ ಮಟ್ಟ ಕಡಿಮಯಾಗುತ್ತಿದ್ದು, ಕೃಷ್ಣಾ ನದಿಯ ನೀರಿನ ಮಟ್ಟ ಇನ್ನೂ ಒಂದು ವಾರಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಇರಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next