Advertisement
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ವೈ.ಎ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಂಚಿಕೆಯಾದ ಜಮೀನು ದುರ್ಬಳಕೆ ಆಗುತ್ತಿದೆ, ವಂಚನೆ ನಡೆಯತ್ತಿದೆ. ಎಸ್ಸಿ, ಎಸ್ಟಿ ಜನಸಂಖ್ಯೆ ಹೆಚ್ಚಿರುವ ಕಡೆ ಕಡಿಮೆ ಭೂಮಿ ಹಂಚಿಕೆ ಆಗಿದೆ. ಜನಸಂಖ್ಯೆ ಕಡಿಮೆ ಇರುವ ಕಡೆ ಹೆಚ್ಚು ಭೂಮಿ ಹಂಚಿಕೆ ಆಗಿದೆ. ಮಂಜೂರಾದ ಜಮೀನು ಹಸ್ತಾಂತರ ಆಗಿರುವುದಿಲ್ಲ. ಇಂತಹ ಅನೇಕ ಸಮಸ್ಯೆಗಳಿವೆ. ಹಾಗಾಗಿ, ಭೂಒಡೆತನ ಯೋಜನೆ ಅನುಷ್ಠಾನಕ್ಕೆ ಹೊಸ ಮಾರ್ಗಸೂಚಿಗಳನ್ನು ತರಲಾಗುವುದು. ಜಮೀನು ದುರ್ಬಳಕೆ ಆಗಿದ್ದರೆ ಅಥವಾ ಅಕ್ರಮವೆಸಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.
ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ-1989ರಡಿ ದಾಖಲಾದ ಪ್ರಕರಣಗಳ ವಿಲೇವಾರಿಗೆ ಕ್ರಮ ಗಳನ್ನು ಕೈಗೊಳ್ಳಲಾಗುತ್ತಿದೆ. 6 ತಿಂಗಳಿಗೊಮ್ಮೆ ಮುಖ್ಯಮಂತ್ರಿ ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ:ಮಠಾಧೀಶರ ಬಗ್ಗೆ ಮಾತನಾಡುವ ಕ್ರಮ ಸರಿಯಲ್ಲ: ಆರ್. ಅಶೋಕ್
Related Articles
Advertisement