ಹುಬ್ಬಳ್ಳಿ : ಎಲ್ಲಾ ವ್ಯವಸ್ಥೆಗಳನ್ನು ಸಿದ್ದಪಡಿಸಿಕೊಂಡು ಕಾಲೇಜುಗಳನ್ನು ಆರಂಭಿಸಲಾಗಿದೆ. ಹಿಂದೆ ಕೋವಿಡ್ ಭೀತಿಯ ನಡುವೆಯೇ ಹೊಟೇಲ್ ಉದ್ಯಮ ಆರಂಭವಾಗಿತ್ತು. ಮೊದಲು ಹೊಟೇಲ್ ಕಡೆ ಜನ ಬರುತ್ತಿರಲಿಲ್ಲ. ಈಗ ನಿಧಾನವಾಗಿ ಜನರು ಹೊಟೇಲ್ ನತ್ತ ಬರುತ್ತಿದ್ದಾರೆ. ಇವತ್ತು ಕಾಲೇಜು ಆರಂಭವಾಗಿದೆ ಒಂದಿಷ್ಟು ಪ್ರಾರಂಭಿಕ ಭಯ ಸಾಮಾನ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಕೋವಿಡ್ ಸಮಯದಲ್ಲೇ ಹೊಟೇಲ್ ಆರಂಭಕ್ಕೆ ಅನುಮತಿ ಕೊಟ್ಟಾಗ, ಜನರಲ್ಲಿ ಕೋವಿಡ್ ಭೀತಿಯಿತ್ತು. ಅದರಿಂದ ಜನ ಹೊಟೇಲ್ ನತ್ತ ಬರುತ್ತಿರಲಿಲ್ಲ. ಈಗ ನಿಧಾನಕ್ಕೆ ಮುಂಜಾಗ್ರತೆ ವಹಿಸಿ ಜನ ಭೀತಿ ಬಿಟ್ಟು ಹೋಟೇಲ್ ಗಳಿಗೆ ಆಗಮಿಸುತ್ತಿದ್ದಾರೆ. ಇಂದು ಕಾಲೇಜು ಪ್ರಾರಂಭವಾಗಿದೆ ಕೋವಿಡ್ ದಿಂದ ವಿದ್ಯಾರ್ಥಿಗಳಲ್ಲಿ ಒಂದಿಷ್ಟು ಭೀತಿ ಇರುವುದು ಸಾಮಾನ್ಯ. ವಿದ್ಯಾರ್ಥಿಗಳು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ ಕಾಲೇಜಿಗೆ ಯಾವುದೇ ಭೀತಿಯಿಲ್ಲದೆ ಆಗಮಿಸಬೇಕೆಂದು ಹೇಳಿದರು.
ಇದನ್ನೂ ಓದಿ :ಚಾರ್ಜ್ ಶೀಟ್ ಹಾಕಿದ ತಕ್ಷಣ ಅಪರಾಧಿ ಆಗುವುದಿಲ್ಲ, ಸಂಪತ್ ರಾಜ್ ಆರೋಪಿಯಷ್ಟೆ : ಸಿದ್ದರಾಮಯ್ಯ
ಸಚಿವ ಸಂಪುಟ ವಿಸ್ತರಣೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸಂಪುಟ ವಿಸ್ತರಣೆಯ ವಿಷಯ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಿಗೆ ಇರಬಹುದು.ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ ಹಾಗೂ ವರಿಷ್ಠರು ನಿರ್ಧರಿಸುತ್ತಾರೆ. ಉಪ ಚುನಾವಣೆ ಹಾಗೂ ವಿಧಾನ ಪರಿಷತ್ತು ಚುನಾವಣೆ ಗೆದ್ದಿದ್ದೇವೆ. ಇನ್ನು ಮುಂದೆ ಎಲ್ಲವೂ ಸುಲಲಿತವಾಗಿ ನಡೆಯುತ್ತದೆ. ಮಸ್ಕಿ ಕ್ಷೇತ್ರದ ಅಭ್ಯರ್ಥಿಯ ನಿರ್ಧಾರ ಪಕ್ಷ ತೀರ್ಮಾನ ಕೈಗೊಳ್ಳಲಿ ಎಂದರು.