ಗಂಗಾವತಿ: ಗಂಗಾವತಿ ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಶೀಘ್ರ ನೂತನ ಮಾಸ್ಟರ್ ಪ್ಲಾನ್ ಬಿಡುಗಡೆ ಮಾಡಲಿದ್ದು ಅದಕ್ಕೂ ಪೂರ್ವದಲ್ಲಿ ಪ್ರಾಧಿಕಾರ ಮತ್ತು ಎರಡೂ ಜಿಲ್ಲೆಗಳ ಪ್ರಮುಖ ಅಧಿಕಾರಿಗಳ ಸಭೆ ನಡೆಸಿ ನೀತಿ ನಿರೂಪಣೆ ತಯಾರಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು .
ಅವರು ತಾಲ್ಲೂಕಿನ ಮುಕ್ಕುಂಪಿ ಹತ್ತಿರ ಸುದ್ದಿಗಾರರ ಜತೆ ಮಾತನಾಡಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆಯ ಸಂದರ್ಭದಲ್ಲಿ ಆನೆಗೊಂದಿ ಭಾಗದಲ್ಲಿ ಸ್ಮಾರಕ ಗಳಿಲ್ಲದಿದ್ದರೂ ಆನೆಗೊಂದಿ ಭಾಗದ 15 ಹಳ್ಳಿಗಳನ್ನು ಸೇರ್ಪಡೆ ಮಾಡಿದ್ದು ಅವೈಜ್ಞಾನಿಕವಾಗಿದೆ. ಆನೆಗೊಂದಿ ಭಾಗದಲ್ಲಿ ರಾಜ್ಯ ಪುರಾತತ್ವ ಇಲಾಖೆ ಮತ್ತು ರಾಷ್ಟ್ರೀಯ ಸರ್ವೇಕ್ಷಣಾ ಇಲಾಖೆಯಲ್ಲಿ ಗುರುತಿಸಲ್ಪಟ್ಟ ಒಂದೂ ಸಹ ಸ್ಮಾರಕಗಳೆಲ್ಲಾ ಎಂದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ಹಕ್ಕಿನಲ್ಲಿ ಸ್ಪಷ್ಟಪಡಿಸಿದ್ದಾರೆ .ಆದರೂ ಆದರೂ ಪ್ರಾಧಿಕಾರ ಅವೆಜ್ಞಾನಿಕವಾಗಿ ಆನೆಗೊಂದಿ ಭಾಗವನ್ನು ಗ್ರೀನ್ ಹೊಸಪೇಟೆ ಕಮಲಾಪುರ ಭಾಗವನ್ನ ಕಮರ್ಷಿಯಲ್ ಝೋನ್ ಎಂದು ಪರಿಗಣಿಸಿ ಆನೆಗೊಂದಿ ಭಾಗದಲ್ಲಿ ವ್ಯಾಪಾರ ವಹಿವಾಟಿಗೆ ಅಡ್ಡಿ ಮಾಡಿದೆ .ಆನೆಗೊಂದಿ ಭಾಗದ ಆನೆಗುಂದಿ ಮಲ್ಲಾಪುರ ಸಣಾಪುರ ಸಂಗಾಪೂರ ಭಾಗದ ಗ್ರಾಮಗಳಲ್ಲಿ ಮನೆ ನಿರ್ಮಿಸಲು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಪ್ರಾಧಿಕಾರದ ನಿಯಮಗಳು ಅಡ್ಡಿಯಾಗಿವೆ ಇಲ್ಲಿ 9+11 ಆಸ್ತಿಯ ಪ್ರಮಾಣ ಪತ್ರ ಕೊಡಲು ಸಹ ಗ್ರಾಮ ಪಂಚಾಯಿತಿಗಳಿಗೆ ಬಹಳ ತೊಂದರೆಯಾಗಿದೆ ಮತ್ತು ಇಲ್ಲಿಯ ಆಸ್ತಿಗಳನ್ನು ಖರೀದಿ ಮಾಡಲು ಮತ್ತು ನೋಂದಣಿ ಮಾಡಲು ಪ್ರಾಧಿಕಾರದ ನಿಯಮಗಳು ಅಡ್ಡಿಯಾಗುತ್ತಿವೆ ಎಂದರು.
ಪ್ರಾಧಿಕಾರ ಪ್ರತಿ ವರ್ಷ ಅನುದಾನವನ್ನು ಹೆಚ್ಚಾಗಿ ಹಂಪಿ ಬಾಯಿಗೆ ಮೀಸಲಿಡುತ್ತಿದೆ ಆನೆಗೊಂದಿ ಭಾಗ ಪ್ರಾಧಿಕಾರ ವ್ಯಾಪ್ತಿಯಲ್ಲಿದ್ದರೂ ಸಹ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ . ಕಳೆದ ವಾರ ಆನೆಗೊಂದಿ ಭಾಗದ ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳು,ವ್ಯಾಪಾರ ವಹಿವಾಟು ನಡೆಸುವವರು ಪಕ್ಷಾತೀತವಾಗಿ ಎಲ್ಲರೂ ಶಾಸಕರಾದ ಪರಣ್ಣ ಮುನವಳ್ಳಿ ಹಾಗೂ ತಮ್ಮ ನೇತೃತ್ವದಲ್ಲಿ ಬೆಂಗಳೂರಿಗೆ ಆಗಮಿಸಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ ಕೂಡಲೇ ಹೊಸ ಮಾಸ್ಟರ್ ಪ್ಲಾನ್ ಬಿಡುಗಡೆ ಮಾಡಬೇಕು. ಸರಳೀಕರಣದ ನಿಯಮಗಳನ್ನು ಜಾರಿ ಮಾಡಿ ಪ್ರತ್ಯೇಕ ಕಿಷ್ಕಿಂದ ಪ್ರಾಧಿಕಾರ ರಚನೆ ಮಾಡಬೇಕು , ಆನೆಗೊಂದಿ ಭಾಗದ ಜನರಿಗೆ 9+11 ಆಸ್ತಿ ಪ್ರಮಾಣಪತ್ರ ವಿತರಣೆಗೆ ಅಡ್ಡಿ ಇರುವ ಕಾನೂನನ್ನು ತಿದ್ದುಪಡಿ ಮಾಡಬೇಕು . ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗವನ್ನು ಕೈಬಿಡಬೇಕೆಂದು ಮನವಿ ಮಾಡಿದರು .
ಇದಕ್ಕೆ ಮುಖ್ಯಮಂತ್ರಿಯವರು ಸ್ಪಂದಿಸಿ ಕೂಡಲೇ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಪ್ರಾಧಿಕಾರದ ಅಧಿಕಾರಿಗಳಿಗೆ ಮಾತನಾಡಿ ನೂತನ ಮಾಸ್ಟರ್ ಪ್ಲಾನ್ ಬರುವ ತನಕ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸೂಚನೆ ನೀಡಿದ್ದಾರೆ .ಈ ಹಿನ್ನೆಲೆಯಲ್ಲಿ ಶೀಘ್ರವೇ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಮತ್ತು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಪ್ರಾಧಿಕಾರದ ನಿಯಮಗಳು ಮತ್ತು ಇರುವಂತಹ ಗೊಂದಲಗಳ ಬಗ್ಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ ದಡೇಸುಗೂರು ಬಸವರಾಜ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್, ಸಿದ್ದರಾಮಸ್ವಾಮಿ ಸೇರಿ ಅನೇಕರಿದ್ದರು