Advertisement

ಕೆಂಪಣ್ಣ ಆಧಾರ ರಹಿತ ಆರೋಪ ಮಾಡಿದ್ದಾರೆ : ಕಾರಜೋಳ

06:09 PM Dec 25, 2022 | Team Udayavani |

ವಿಜಯಪುರ: ಕಾಂಗ್ರೆಸ್ ಪಕ್ಷದ ನಾಯಕರ ಮಾತು ಕೇಳಿ ಆಧಾರ ರಹಿತ ಆರೋಪ ಮಾಡಿರುವ ಗುತ್ತಿಗೆದಾರ ಕೆಂಪಣ್ಣ ಜೈಲು ಸೇರಿದ ಬಗ್ಗೆ ಏನು ಹೇಳಬೇಕು. ಸರ್ಕಾರ ಹಾಗೂ ಸಚಿವರ ವಿರುದ್ಧ ಲಂಚದ ಆರೋಪ ಮಾಡಿದ ಅವರ ಬಳಿ ಅದಕ್ಕೆ ಪೂರಕ ಕನಿಷ್ಠ ದಾಖಲೆಗಳೂ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದರು.

Advertisement

ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಚಿವರು ಪರ್ಸೆಂಟೇಜ್ ಹೆಸರಿನಲ್ಲಿ ಶೇ.40 ರಷ್ಟು ಲಂಚ ಪಡೆಯುತ್ತಾರೆ ಎಂದು ಆರೋಪಿಸಿದ್ದ ಕೆಂಪಣ್ಣ, ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನೂ ಅವರು ಬಹಿರಂಗ ಮಾಡಿಲ್ಲ ಎಂದು ಹರಿಹಾಯ್ದರು.

ಗುತ್ತಿಗೆದಾರರು ಕೂಡ ತೆರಿಗೆ, ಜಿ.ಎಸ್‍ಟಿ, ರಾಜಧನ ಅಂತೆಲ್ಲ ಶೇ.24-25 ರಷ್ಟು ವಿವಿಧ ತೆರಿಗೆ ಪಾವತಿಸಬೇಕು. ಇಂಥ ಸ್ಥಿತಿಯಲ್ಲಿ ಶೇ.40 ರಷ್ಟು ಲಂಚದ ಆರೋಪ ಮಾಡಿದರೆ ಶೇ.60ಕ್ಕಿಂತ ಹೆಚ್ಚು ಹಣ ಇಲ್ಲೇ ಖರ್ಚಾದರೆ ಕೆಲಸ ಮಾಡಲು ಹೇಗೆ ಸಾಧ್ಯ. ಕನಿಷ್ಠ ಇಂಥ ಜ್ಞಾನವಾದರೂ ಬೇಡವೇ ಎಂದು ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next