ಬೆಂಗಳೂರು : ಜುಲೈ 22-ಆಗಸ್ಟ್ 13ರ ವರೆಗೂ ಸಂಸದ ಕಲಾಪ ನಡೆಯಿತು. ಕೋವಿಡ್, ದೇಶದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕಿತ್ತು. ಕಾಂಗ್ರೆಸ್ ನವರು ಸಂಸತ್ ಅಧಿವೇಶನ ನಡೆಯಲು ಬಡದೆ ಹೊರ ನಡೆದಿದ್ದಾರೆ. ಇದನ್ನ ನಾನು ಖಂಡಿಸ್ತೇನೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾರಜೋಳ, ಹಲವು ವರ್ಷದ ಹಳೆಯ ಪಕ್ಷ ಸಂಸತ್‌ನಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಅಂತ ಗೊತ್ತಿಲ್ಲ. ಕಾಂಗ್ರೆಸ್ ನವರು ಕುಟುಂಬದ ಹಾಗೂ ಮನೆತನದ ಹಿನ್ನೆಲೆ ಉಳ್ಳವರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಆಡಳಿತ ನಡೆಸುತ್ತಿರುವವರು. ಲಜ್ಜೆಗೆಟ್ಟು ಆಡಳಿತ ನಡೆಸಲು ಬಿಡದವರು ನೀವು ಎಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ : ತಾಲಿಬಾನ್ ಉಗ್ರರಿಗೆ ಸಡ್ಡು ಹೊಡೆದು ಪಡೆ ಕಟ್ಟಿದ್ದ ಮಹಿಳಾ ಗವರ್ನರ್ ಸಲೀಮಾ ಸೆರೆ!
ಬಿಜೆಪಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಹಿಂದುಳಿದ, ಮಹಿಳೆಯರಿಗೆ, ಸಾಮಾಜಿಕ ನ್ಯಾಯ ಪರ ನಿಂತಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಜಿ ನೇತೃತ್ವದ ಪಕ್ಷ ದೇಶದುದ್ದಕ್ಕೂ ಹಿಂದುಳಿದವರನ್ನ ಮುಂದೆ ತರಲು ಮುಂದಾಗಿದ್ದಾರೆ. ಇದನ್ನ ದೇಶದ ಜನ ಸ್ವಾಗತಿಸುತ್ತಿದ್ದಾರೆ. ಕಾಂಗ್ರೆಸ್ ನವರು ಬೂಟಾಡಿಕೆ ಮಾತನ್ನು ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಆದರೇ, ಸಾಮಾಜಿಕ ನ್ಯಾಯಕ್ಕೆ ಅನ್ಯಾಯ ಮಾಡಿದ್ದಾರೆ. ನರೇಂದ್ರ ಮೋದಿ ಸರ್ಕಾರ ಕೆಳ ವರ್ಗದವರಿಗೆ, ಹಿಂದುಳಿದವರಿಗೆ ಹಾಗೂ ಶೋಶಿತರ ಪರವಾಗಿದೆ. ರಾಜ್ಯ ಸರ್ಕಾರ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಧೀನ ದಲಿತರ ಕಲ್ಯಾಣದ ಪರವಾಗಿಅಡಲಾಗುತ್ತಿದೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಬಡವರ, ರೈತರ ಮಕ್ಕಳ ಪರವಾಗಿ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ : ಕೋವಿಡ್ 19 : ಕಳೆದ 24 ಗಂಟೆಯಲ್ಲಿ 35, 178 ಹೊಸ ಕೋವಿಡ್ ಪ್ರಕರಣಗಳು ಪತ್ತೆ..!