Advertisement

ಸರ್ಕಾರಿ ಜಮೀನು ಲಪಟಾಯಿಸಿದ ಮಾಜಿ ಶಾಸಕರಿಂದ ನೀತಿ ಪಾಠ ಕಲಿಯಬೇಕಿಲ್ಲ ಸಚಿವ ಡಾ.ಕೆ.ಸುಧಾಕರ್

06:21 PM Jul 23, 2022 | Team Udayavani |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 3 ತಲೆಮಾರಿನ ರಿಪಬ್ಲಿಕ್ ಯಾರು ನಡೆಸಿದ್ದಾರೆ ಎಂಬುದು ಜಿಲ್ಲೆಯ ಜನರಿಗೆ ಅರಿವಿದೆ ಯಾರನ್ನು 10 ವರ್ಷ ಮನೆಯಲ್ಲಿ ಕೂರಿಸಿದ್ದಾರೆ ಎಂಬುದನ್ನು ಆತ್ಮಲೋಕನ ಮಾಡಿಕೊಂಡು ಇನ್ನಾದರೂ ಸ್ವಲ್ಪ ಬುದ್ದಿ ಕಲಿತುಕೊಳ್ಳಿ ಇದೇ ಅಹಂಕಾರ ಮುಂದುವರೆದರೆ ಮತ್ತೊಮ್ಮೆ ಜನ ಮನೆಗೆ ಕಳುಹಿಸುವುದು ಖಾತ್ರಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಜಿ ಶಾಸಕ ಡಾ.ಎಂಸಿ ಸುಧಾಕರ್ ವಿರುದ್ದ ಹರಿಹಾಯ್ದರು.

Advertisement

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ವತಿಯಿಂದ ರೈತರಿಗೆ ಎರಡು ದಿನಗಳ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು .ನಾನು ಎಲ್ಲಾದರೂ ಹೋಗಲಿ ಎಂದು ಸುಮ್ಮನೇ ಬಿಟ್ಟಿದ್ದೆ ಇಷ್ಟು ವರ್ಷ ಸೈಲೆಂಟ್ ಆಗಿ ಇದೀಗಾ ಮಾಜಿ ಶಾಸಕ ಎಂಸಿ ಸುಧಾಕರ್ ಅವರು ನನ್ನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಎಲ್ಲಾ ಕೇಸುಗಳಲ್ಲಿ ಅವರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಚಿಂತಾಮಣಿ ತಾಲೂಕಿನಲ್ಲಿ ದೇವಸ್ಥಾನಗಳು ಬಿಟ್ಟಿಲ್ಲ, ಸರ್ಕಾರಿ ಆಸ್ತಿ ಬಿಟ್ಟಿಲ್ಲ, ಸರ್ಕಾರಿ ಆಸ್ತಿಯಲ್ಲಿ ನಿವೇಶನ ಮಾಡಿ ಮಾರಾಟ ಮಾಡಿದ್ದೀರಿ ನಿಮ್ಮಂತವರಿಂದ ನಾನು ನೀತಿಪಾಠ ಕಲಿಯಬೇಕಿಲ್ಲ. ಯಾವ ಮುಖ ಇಟ್ಟುಕೊಂಡು ನನ್ನ ಬಗ್ಗೆ ಮಾತನಾಡಿದ್ದೀರಿ. ನಾನಾಗಲೀ ನನ್ನ ಕುಟುಂಬವಾಗಲಿ ನನ್ನ ರಾಜಕೀಯ ಜೀವನದಲ್ಲಿ ಸರ್ಕಾರಿ ಆಸ್ತಿಯನ್ನಾಗಲಿ ಅಥವಾ ಸರ್ಕಾರಿ ಜಮೀನಾಗಲೀ ಒಂಡು ಇಂಚು ಇಲ್ಲಿವರೆಗೆ ಮಾಡಿಕೊಂಡಿದ್ದರೆ ತೋರಿಸುವುದಕ್ಕೆ ಹೇಳಿ ಎಂದು ಸವಾಲು ಹಾಕಿದ ಸಚಿವರು ನಿಮ್ಮದೆಲ್ಲಾ ಜಾತಕವನ್ನು ಬಯಲಿಗೆ ಎಳೆಯುತ್ತೇನೆ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next