ಚಿಕ್ಕಮಗಳೂರು: ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂದು ಸಚಿವ ಸಿ ಟಿ ರವಿ ಅವರು ಕಾಂಗ್ರೆಸ್ ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಕಟಿಬದ್ಧವಾಗಿದೆ. ಹೈದ್ರಾಬಾದ್ ಕರ್ನಾಟಕ ಎಂದೇ ಹೇಳುತ್ತಿರುವ ಕಾಂಗ್ರೆಸ್ಸಿಗರು ಗುಲಾಮಗಿರಿಯ ಮಾನಸಿಕತೆಯಿಂದ ಹೊರಬಂದಿರಲಿಲ್ಲ. ಅದಕ್ಕೆ ಬಿಜೆಪಿ ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟಿದೆ. ಆದರೆ ಸಿದ್ದರಾಮಯ್ಯ ಉರ್ದು ದಿವಸ್ ಆಚರಣೆ ಮಾಡಿ ಬರುತ್ತಾರೆ. ಹಿಂದೂ ದಿವಸ್ಗೆ ವಿರೋಧ ಮಾಡುತ್ತಾರೆ ಇದು ನಾಟಕ ಅಲ್ವಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಗೆ ಕನ್ನಡದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದ ಸಚಿವರು, ಕನ್ನಡದ ಉಳಿವಿಗಾಗಿ ಮಾಡುವ ಎಲ್ಲಾ ಪ್ರಯತ್ನಕ್ಕೂ ನಮ್ಮ ಬೆಂಬಲವಿದೆ. ಆದರೆ ಹೋರಾಟ ಕನ್ನಡದ ಉಳಿವಿಗೋ, ಹಿಂದಿ ದ್ವೇಷಕ್ಕೋ ಪ್ರಶ್ನಿಸಿದರು.
ಇದನ್ನೂ ಓದಿ: ನಮಗೆ ಅಭ್ಯರ್ಥಿ ಲೆಕ್ಕವೇ ಅಲ್ಲ, ಯಾವಾಗ ಚುನಾವಣೆ ಮಾಡಿದರೂ ಗೆಲುವು ನಮ್ಮದೆ: ಈಶ್ವರಪ್ಪ
ಹೋರಾಟವು ಹಿಂದಿ ದ್ವೇಷಕ್ಕೆ ಎನ್ನುವುದಾದರೆ ನಮ್ಮ ಬೆಂಬಲವಿಲ್ಲ. ಹಿಂದಿ ಕಾರಣಕ್ಕೆ ರಾಜ್ಯದಲ್ಲಿ ಒಂದೇ ಒಂದು ಕನ್ನಡ ಶಾಲೆ ಬಂದ್ ಆಗಿಲ್ಲ. ಇಂಗ್ಲೀಷ್ ಕಾರಣಕ್ಕೆ ಸಾವಿರಾರು ಶಾಲೆ ಬಂದ್ ಆಗಿವೆ, ಇದಕ್ಕೆ ಸಾವಿರ ಉದಾಹರಣೆ ಕೊಡುತ್ತೇನೆ. ಇಂಗ್ಲಿಷ್ ಓಕೆ, ಹಿಂದಿ ದ್ವೇಷಿ ನಿಮ್ಮ ಉದ್ದೇಶವಾ ಎಂದರು.