ವಾಂತಿ ಮಾಡಿಕೊಂಡಿದ್ದಾರೆ.
Advertisement
ನಂತರ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಆರೋಗ್ಯವಾಗಿದ್ದಾರೆ.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗ್ರಾಮದಲ್ಲಿನ ನೂರಾರು ಜನ ಸಹ ಉಪ್ಪಿಟ್ಟು ಸೇವಿಸಿದ್ದು, ಯಾರ ಆರೋಗ್ಯದಲ್ಲೂ ಏರುಪೇರು ಕಂಡು ಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಉಪ್ಪಿಟ್ಟು ಪರಿಶೀಲಿಸಿದ್ದಾರೆ. ಕರಡಿಕೊಪ್ಪ ಗ್ರಾಮದಲ್ಲಿ ಕಾರ್ಯಕ್ರಮ ಮುಗಿದ ಮೇಲೆ ಉಪ್ಪಿಟ್ಟು ಸೇವಿಸಿದೆ. ಎರಡನೇ ತುತ್ತು ಸೇವಿಸುವಾಗ ವಿಷ ಎನಿಸಿ ಉಗುಳಿದೆ. ಉಪ್ಪಿಟ್ಟನ್ನು ಪಕ್ಕಕ್ಕೆ ಸರಿಸಿದೆ ಅದೇ ಪ್ಲೇಟ್‌ನಲ್ಲಿದ್ದ ಆಹಾರವನ್ನು ಸೇವಿಸಿ ಗನ್‌ಮ್ಯಾನ್ ಸೇರಿ ಮೂವರು ವಾಂತಿ ಮಾಡಿಕೊಂಡರು. ಈಗ ಎಲ್ಲರೂ ಆರೋಗ್ಯವಾಗಿದ್ದೇವೆ. ಯಾರ ಮೇಲೂ ಅನುಮಾನವಿಲ್ಲ. ವೈದ್ಯರ ವರದಿ ಬಂದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಸಿ.ಎಸ್. ಶಿವಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.