Advertisement
ನಗರ ವ್ಯಾಪ್ತಿಯ ಅಕೇಶ್ವರ ಕಾಲೋನಿ, ಟಿಪ್ಪುನಗರ ಸೇರಿದಂತೆ ಸುತ್ತಮುತ್ತಲಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಅಭಿವೃದ್ಧಿ ಮಾಡುವಲ್ಲಿ ನಮ್ಮ ಸರ್ಕಾರ ಮುಂದಿದೆ.ಅದರಲ್ಲೂ ಕೈಗಲೀಜು ಮಾಡಿಕೊಳ್ಳದೇ, ಸ್ವಾರ್ಥಮಾಡಿಕೊಳ್ಳದೇ ಅಭಿವೃದ್ಧಿ ಮಾಡುತ್ತಿದ್ದೇವೆ. ಅಚ್ಚುಕಟ್ಟಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಯಾರ ಬಳಿಯುಕೈತೋರಿಸಿ ಕೊಳ್ಳುವ ರೀತಿಯಲ್ಲಿ ನಾವು ಯಾವ ಕೆಲಸವನ್ನು ಮಾಡುತ್ತಿಲ್ಲ ಎಂದರು.
Related Articles
Advertisement
ಯಾರಿಗೋ ಜ್ವರ ಬಂದರೇ, ಮತ್ತ್ಯಾರಿಗೋ ಬರೆ ಎಳೆದರಂತೆ. ಜ್ವರ ಬರಿಸಿದವರನ್ನು ಬಿಟ್ಟುಜನರ ಮೇಲೆ ಬರೆ ಎಳೆಯಲು ಆಗುತ್ತದೆಯೇ? ಅವರು, ಲೆಕ್ಕದಲ್ಲಿ ಸಿಗುತ್ತಾರೆಯೇ? ಅಥವಾದಾಖಲೆಯಲ್ಲಿ ಸಿಗುತ್ತಾರೆಯೇ? ಎಂದು ಪ್ರಶ್ನಿಸಿದಅವರು, ನೆರೆಗೆ ಈ ಭಾಗದಲ್ಲಿ ಮೊದಲನಿಂದಲೂಪ್ರತಿನಿಧಿ ಯಾಗಿರುವ ಮಹಾನುಭಾವರು ಕಾರಣರಾಗಿದ್ದಾರೆ ಎಂದು ಹೇಳಿದರು.
ಬಾಡಿಗೆದಾರರಿಗೂ ಪರಿಹಾರ ವ್ಯವಸ್ಥೆ: ಸಚಿವ
ರಾಮನಗರ: ಕಂಡು ಕೇಳರಿಯದ ಮಳೆಯಿಂದ ಸಂತ್ರಸ್ತರ ಪೈಕಿ ಬಾಡಿಗೆ ಮನೆಗಳಲ್ಲಿದ್ದ ಬಾಡಿಗೆದಾರರಿಗೂ ತಕ್ಷಣವೇ 10 ಸಾವಿರ ರೂ. ಪರಿಹಾರ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮಳೆಯಿಂದ ವಾಣಿಜ್ಯ ಕಟ್ಟಡಗಳಿಗೂ ಅಪಾರ ಹಾನಿಯಾಗಿದೆ. ಇವಕ್ಕೂ ಎನ್‌ಡಿಆರ್ ಎಫ್ ಮಾನದಂಡಗಳಡಿ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಮನೆ ಹಾನಿಗೆ ಹಿಂದೆ ಕೇವಲ 2 ಸಾವಿರ ರೂ. ಮನೆ ಸಂಪೂರ್ಣ ಬಿದ್ದರೆ ಕೇವಲ 1 ಲಕ್ಷ ರೂ. ಮಾತ್ರ ಪರಿಹಾರ ಕೊಡಲಾಗುತ್ತಿತ್ತು. ಇದನ್ನು ರಾಜ್ಯ ಬಿಜೆಪಿಸರ್ಕಾರ ಕ್ರಮವಾಗಿ 10 ಸಾವಿರ ರೂ. 5 ಲಕ್ಷ ರೂಪಾಯಿಗಳಿಗೆ ಏರಿಸಿದೆ ಎಂದರು.
ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಕಡಿಮೆ ಎಂಟ್ರಿ ಹಾಗೂ ಎಕ್ಸಿಟ್ ಪಾಯಿಂಟ್ ನೀಡಿರುವ ಕುರಿತುಜನತೆಯಿಂದ ವಿರೋಧದ ಮಾತುಕೇಳಿಬರುತ್ತಿದ್ದು, ಶೀಘ್ರವೇ ಈ ಹೆದ್ದಾರಿಯಲ್ಲಿ ಸಾಧ್ಯವಾದಷ್ಟೂ ಒಳಬರುವ ಹಾಗೂ ಹೊರ ಹೋಗುವ ಪಾಯಿಂಟ್‌ಗಳ ಹೆಚ್ಚಳಮಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ. ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಎರಡು ಹಂತದಲ್ಲಿ ಮಾಡಲಾಗುತ್ತಿದ್ದು, ನಮ್ಮ ಸರ್ಕಾರದಿಂದಲೇ ಇದನ್ನು ಲೋಕಾರ್ಪಣೆ ಮಾಡಲಾಗುತ್ತದೆ.– ಡಾ. ಸಿ.ಎನ್. ಅಶ್ವತ್ಥನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ