Advertisement

ಗಂಗಿಮಡಿ ರಸ್ತೆಗೆ ಪಿಳ್ಳಿ ಹೆಸರು ನಾಮಕರಣ

04:38 PM Feb 15, 2021 | Team Udayavani |

ಗದಗ: ಸದಾನಂದ ಪಿಳ್ಳಿ ಅವರು ಸತತ ನಾಲ್ಕು ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದು ಸಾಮಾನ್ಯ ಮಾತಲ್ಲ. ಅವರಿಗೆ ರಾಜಕೀಯವಾಗಿ ಇನ್ನಷ್ಟು ಅವಕಾಶಗಳು ಸಿಗುವ ಮುನ್ನವೇ ಇಹ ಲೋಕ ತ್ಯಜಿಸಿರುವುದು ನೋವಿನ ಸಂಗತಿ. ಆದರೆ, ಅವರ ಶ್ರೀಮತಿ ಸುರೇಖಾ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇದ್ದರೆ, ಪಕ್ಷದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಭರವಸೆ ನೀಡಿದರು.

Advertisement

ಇಲ್ಲಿನ ಶಾಪುರಪೇಟೆಯಲ್ಲಿ ಸದಾನಂದ ಪಿಳ್ಳೆ ಅಭಿಮಾನಿಗಳ ಬಳಗದಿಂದ ಆಯೋಜಿಸಿದ್ದ ಸದಾನಂದ ಪಿಳ್ಳಿ ಸಂಸ್ಮರಣಾ ಸಮಾರಂಭದಲ್ಲಿ ಪ್ರೊ| ಚಂದ್ರಶೇಖ ರ ವಸ್ತ್ರದ ಸಂಪಾದಿಸಿದ “ಸಾರ್ಥಕ ಬದುಕಿನ ಸದಾನಂದ’ ಸಂಸ್ಮರಣಾ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮುನ್ಸಿಪಲ್‌ ಕಾಯ್ದೆಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದ ಅವರು, ನಗರಸಭೆ ಕಲಾಪಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುವ ಮೂಲಕ ಆಡಳಿತ ಪಕ್ಷವನ್ನು ಎಚ್ಚರಿಸುತ್ತಿದ್ದರು. ನಗರಸಭೆಯಲ್ಲಿ ಅವರ ವಾದ ಮಂಡನೆಗಳು ಮೆಚ್ಚುವಂಥವು. ಅವಳಿ ನಗರದ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಿದ್ದಾರೆ. ನಗರಸಭೆ ಸದಸ್ಯರಾಗಿದ್ದ ಸದಾನಂದ ಪಿಳ್ಳಿ ಅವರು ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿರಿಸಿದ್ದರು.  ಸದಾನಂದ ಪಿಳ್ಳಿ ಅವರ ಸ್ಮರಣಾರ್ಥ ಗಂಗಿಮಡಿ ಪ್ರದೇಶದ ರಸ್ತೆಯೊಂದಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಈ ಕುರಿತು ಸರಕಾರದಿಂದ ಅಧಿಕೃತ ಆದೇಶ ಬಂದಿದ್ದು, ಮಾರ್ಚ್‌ 7ರಂದು ನಡೆಯುವ ಪುಣ್ಯತಿಥಿ ದಿನ ರಸ್ತೆಯನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಸಾರ್ಥಕ ಬದುಕಿನ ಸದಾನಂದ ಕೃತಿಯ ಸಂಪಾದಕ ಪ್ರೊ. ಚಂದ್ರಶೇಖರ ವಸ್ತ್ರದ ಮಾತನಾಡಿ, ಸದಾನಂದ  ಪಿಳ್ಳಿ ಅವರು ಅವಿಭಕ್ತ ಕುಟಂಬ ಹೊಂದಿದ್ದರೂ, ಕುಟುಂಬದ ಬಗ್ಗೆ ಎಳ್ಳಷ್ಟು ಚಿಂತಿಸದೇ ತಮ್ಮ ಜೀವನವನ್ನು ಸಮಾಜ ಸೇವೆಗೆ ಸಮರ್ಪಿಸಿಕೊಂಡಿದ್ದರು. ಕಡು ಕಷ್ಟದ ದಿನಗಳಲ್ಲಿಯೂ ಸೇವಾ ಮನೋಭಾವ ಹೊಂದಿದವರು. ಮಾಜಿ ಸಚಿವ ಎಸ್‌.ಎಸ್‌. ಪಾಟೀಲ ಅವರಿಂದ 5 ಲಕ್ಷ ರೂ. ಸಾಲ ಪಡೆದು, ಆರಂಭಿಸಿದ ವ್ಯವಹಾರದಿಂದ ಅವರ ಕುಟುಂಬ ಆರ್ಥಿಕವಾಗಿ ಸಬಲವಾಯಿತು. ಹೀಗಾಗಿ, ಸದಾನಂದ ಪಿಳ್ಳಿ ಅವರಿಗೆ ಸೇವೆ ಮಾಡಲು ಮತ್ತಷ್ಟು ಅವಕಾಶ ದೊರೆಯಿತು ಎಂದು ಸ್ಮರಿಸಿದರು.

ಬಳಗಾನೂರ ಚಿಕೇನಕೊಪ್ಪದ ಶಿವಶಾಂತವೀರ ಶರಣರು, ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಳಕಪ್ಪ ಬಂಡಿ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಮಾಜಿ ಸಚಿವ ಎಸ್‌. ಎಸ್‌.ಪಾಟೀಲ, ಮಾಜಿ ಶಾಸಕ ಡಿ.ಆರ್‌.ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ,  ಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಬಿಜೆಪಿ ಮುಖಂಡ ಎಂ.ಎಸ್‌.ಕರಿಗೌಡರ, ದ್ರಾûಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್‌ ಬನ್ಸಾಲಿ, ನಗರಸಭೆ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ ವೇದಿಕೆ ಮೇಲೆ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next