Advertisement

ಶಿರಾಡಿ ಘಾಟಿ ಇನ್ನೂ ಯೋಜನಾ ಹಂತದಲ್ಲೇ?

12:02 AM Mar 24, 2022 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರು- ಕರಾವಳಿ ನಡುವಿನ ಸಂಪರ್ಕ ಕೊಂಡಿ ಶಿರಾಡಿ ಘಾಟಿ ಅಭಿವೃದ್ಧಿಯು ಇನ್ನೂ ಯೋಜನಾ ವರದಿ ತಯಾರಿಸುವ ಹಂತದಲ್ಲೇ ಇದೆಯೇ?

Advertisement

ಉತ್ತರ- ಸರಕಾರದ ಅಧಿಕೃತ ಮಾಹಿತಿ ಪ್ರಕಾರ “ಹೌದು’! ಕಾಂಗ್ರೆಸ್‌ನ ಮಂಜುನಾಥ್‌ ಭಂಡಾರಿ, ಸುರಂಗ ಮಾರ್ಗ ಯೋಜನೆ ಕಾರ್ಯಗತಗೊಳಿಸಲು ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಕೇಳಿರುವ ಪ್ರಶ್ನೆಗೆ ಬುಧವಾರ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಲಿಖಿತ ಉತ್ತರ ನೀಡಿದ್ದಾರೆ. ಅದರಂತೆ, “ಬೆಂಗಳೂರು- ಶಿರಾಡಿಘಾಟ್‌ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ಯೋಜನಾ ವರದಿ ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, ಇತ್ತೀಚೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಬೆಂಗಳೂರು-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಶಿರಾಡಿ ಘಾಟ್‌ ಅನ್ನು 1,200 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಯೋಜನೆಗೆ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದ್ದರು. ಈ ಮಧ್ಯೆ ಲೋಕೋಪಯೋಗಿ ಸಚಿವ ಲಿಖಿತ ಉತ್ತರ ಗೊಂದಲ ಸೃಷ್ಟಿಸಿದೆ.

ಶಿರಾಡಿ ಘಾಟ್‌ ಬೈಪಾಸ್‌ ರಸ್ತೆಗಾಗಿ 10,145.62 ಕೋಟಿ ಮೊತ್ತಕ್ಕೆ ಸಮಗ್ರ ಯೋಜನಾ ವರದಿಯನ್ನು ಸಲಹೆಗಾರರು ತಯಾರಿಸಿ ರಾಷ್ಟ್ರೀಯ ಹೆದ್ದಾರಿ ವಲಯಕ್ಕೆ ಸಲ್ಲಿಸಿದ್ದರು. ತದನಂತರ ಆ ವರದಿಯನ್ನು ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕನ್ಸಲ್ಟನ್ಸಿ ಸರ್ವಿಸ್‌ ಸಲಹೆಗಾರರೊಂದಿಗೆ ತ್ರಿಪಕ್ಷೀಯ ಒಪ್ಪಂದದಂತೆ ಆ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿತ್ತು.

ಇದನ್ನೂ ಓದಿ:ಸಚಿವ ರಾಮುಲು ಅವರೊಂದಿಗೆ ಖಾಸಗಿ ಬಸ್‌ ಮಾಲಕರ ಒಕ್ಕೂಟದ ಸಭೆ

Advertisement

ಆದರೆ, ಕೇಂದ್ರ ಭೂಸಾರಿಗೆ ಸಚಿವಾಲಯವು ಉದ್ದೇಶಿತ ಈ ಯೋಜನೆಯ ಕಾರ್ಯಸಾಧ್ಯತೆ ಪರಿಶೀಲನೆಗೆ ರಚಿಸಿದ ತಜ್ಞರ ಸಮಿತಿಯು ಯೋಜನಾ ವೆಚ್ಚವು ಸುರಂಗ ಮಾರ್ಗ ಯೋಜನೆಗಿಂತ ಕಡಿಮೆಯಾಗುತ್ತದೆ. ಅಲ್ಲದೆ, ಅರಣ್ಯ ತೆರವುಗೊಳಿಸುವಿಕೆ ಪ್ರಮಾಣವೂ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಜೋಡಣೆ (ಶಿರಾಡಿ ಘಾಟ್‌) ಅಭಿವೃದ್ಧಿಪಡಿಸುವ ಮತ್ತು ಯೋಜನಾ ವರದಿ ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next