Advertisement

ದರ್ಶನ್ ಬಹಳ ಸರಳ ಹಾಗೂ ದೊಡ್ಡ ಹೃದಯ ಹೊಂದಿರುವ ಹುಡುಗ: ಬಿ.ಸಿ ಪಾಟೀಲ್

02:09 PM Jul 16, 2021 | Team Udayavani |

ಬೆಂಗಳೂರು: ”ದರ್ಶನ್ ಬಹಳ ಮುಗ್ದ, ಕೆಳಹಂತದಿಂದ ಈ ಮಟ್ಟಕ್ಕೆ ಬೆಳೆದು ಬಂದಿರುವ ನಟ. ಅವರ ಏಳಿಗೆ ಸಹಿಸಲಾಗದವರು ದುರುದ್ದೇಶದಿಂದ ಇಂತಹ ಕೇಸ್‌ಗಳನ್ನು ಹಾಕುತ್ತಿರಬಹುದು ಎನ್ನುವುದು ನನ್ನ ಭಾವನೆ” ಎಂದು ಕೃಷಿ ಬಿಸಿ ಪಾಟೀಲ್ ಹೇಳಿದ್ದಾರೆ.

Advertisement

ನಟ ದರ್ಶನ್ ಹೋಟೆಲ್ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಇಂದ್ರಜಿತ್ ಲಂಕೇಶ್ ಆರೋಪದ ಕುರಿತು ಮಾತನಾಡಿದ ಪಾಟೀಲ್ ಅವರು, ”ಅಂತಹ ಯಾವುದೇ ಕೆಲಸ ಅವರು ಮಾಡಿಲ್ಲ ಅಂತ ನನಗೆ ಮನವರಿಕೆ ಇದೆ. ದರ್ಶನ್ ಬಹಳ ಸರಳ ಹಾಗೂ ದೊಡ್ಡ ಹೃದಯ ಹೊಂದಿರುವ ಹುಡುಗ. ಆ ರೀತಿ ಯಾವ ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲ ಎನ್ನುವುದು ನನ್ನ ಭಾವನೆ” ಎಂದರು.

ರಾಯಭಾರಿ ಜವಾಬ್ದಾರಿ ಹಿಂತೆಗೆಯುವ ನಿರ್ಧಾರ ಇಲ್ಲ

ನಟ ದರ್ಶನ್ ಅವರು ಕೃಷಿ ಇಲಾಖೆಯ ರಾಯಭಾರಿಯಾಗಿದ್ದಾರೆ. ಈಗ ಹಲ್ಲೆ ಆರೋಪಗಳು ಬಂದಿರುವ ಹಿನ್ನಲೆ ಆ ಸ್ಥಾನದಿಂದ ಕೆಳಗಿಳಿಸಬಹುದು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಸಿ ಪಾಟೀಲ್, ”ಅಂತಹ ಯಾವುದೇ ನಿರ್ಧಾರ ಇಲ್ಲ. ದರ್ಶನ್ ಸಹ ಅಂತಹ ಯಾವ ಕೆಲಸವೂ ಮಾಡಿಲ್ಲ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next