Advertisement

ಕಲಂ371(ಜೆ) 2020 ರ ಸುತ್ತೋಲೆ  ಶೀಘ್ರ ರದ್ದು: ಸಚಿವ ಬಿ ಶ್ರೀರಾಮುಲು

11:42 AM Feb 01, 2022 | Team Udayavani |

ಗಂಗಾವತಿ : ನೇಮಕಾತಿ ಸಂದರ್ಭದಲ್ಲಿ ಕಲಂ 371(ಜೆ) ಅನುಷ್ಠಾನ ಕುರಿತು 2020ರ ಸುತ್ತೋಲೆಯ ಹಿನ್ನೆಲೆಯಲ್ಲಿ  ಮೇರಿಟ್ ಇದ್ದರೂ ಅದನ್ನು ಕಲ್ಯಾಣ ಕರ್ನಾಟಕಕ್ಕೆ ಸೀಮಿತಗೊಳಿಸುತ್ತಿರುವುದನ್ನು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳು ವಿರೋಧಿಸುತ್ತಿದ್ದು ಮೇರೀಟ್ ಇಡೀ ರಾಜ್ಯಕ್ಕೆ ಅನ್ವಯಿಸಿ ಕಲಂ 371(ಜೆ) ಮೀಸಲಾತಿ ಪಡೆಯುವವರಿಗೆ ಅದನ್ನು ಪ್ರತೇಕ ನೀಡುವಂತೆ ಮನವಿ ಬಂದಿದ್ದು ಫೆ.12 ರಂದು ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ಕುರಿತು 2020 ಸುತ್ತೋಲೆ ಪುನಹ ಪರಿಶೀಲಿಸಿ ರದ್ದುಪಡಿಸಲಾಗುತ್ತದೆ ಎಂದು ಕಲಂ 371(ಜೆ) ಅನುಷ್ಠಾನ ಸಮಿತಿಯ ಸಚಿವ ಸಂಪುಟದ  ಉಪ ಸಮಿತಿ ಅಧ್ಯಕ್ಷ ಹಾಗೂ ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ .

Advertisement

ಅವರು ಉದಯವಾಣಿ ಜತೆ ಮಾತನಾಡಿ ,ನೇಮಕಾತಿ ಸಂದರ್ಭದಲ್ಲಿ ಸಾಮಾನ್ಯ ವರ್ಗದಲ್ಲಿ ನೇಮಕಾತಿ ಆಗುವವರಿಗೆ ಕಲಂ371(ಜೆ) ಅನ್ವಯಿಸಬಾರದು. ಮೀಸಲಾತಿಯಲ್ಲಿರುವವರನ್ನು ಪ್ರತೇಕವಾಗಿ ಪರಿಗಣಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ಪಿಎಸ್‌ಐ ನೇಮಕಾತಿ ಬಗ್ಗೆ ಶೀಘ್ರ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸುವುದಾಗಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next