Advertisement

 ಸಮಸ್ಯೆಗೆ ಅಧಿಕಾರಿಗಳೇ ಕಾರಣ: ಪಾಟೀಲ

09:02 PM Mar 21, 2021 | Team Udayavani |

ಹಿರೇಕೆರೂರು: ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಗ್ರಾಪಂ ಅಭಿವೃದ್ಧಿ ಅಧಿ ಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ಗ್ರಾಮಗಳಲ್ಲಿ ಸಮಸ್ಯೆಗಳೇ ಇರುವುದಿಲ್ಲ. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ಜಿಲ್ಲಾ ಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಖುದ್ದಾಗಿ ಆಲಿಸುವುದರಿಂದ ಸ್ಥಳೀಯ ಅ ಧಿಕಾರಿಗಳನ್ನು ಎಚ್ಚರಿಸಿ ಕೆಳ ಹಂತದ ಆಡಳಿತವನ್ನು ಚುರುಕುಗೊಳಿಸಲು ಸಾಧ್ಯವಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

Advertisement

ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ಜಿಲ್ಲಾ  ಧಿಕಾರಿಗಳ ನಡಿಗೆ ಹಳ್ಳಿಗಳ ಕಡೆಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಫಲಾನುಭವಿಗಳಿಗೆ ಮಂಜೂರಾತಿ ಪ್ರಮಾಣ ಪತ್ರ ಹಾಗೂ ಉದ್ಯೋಗ ಖಾತ್ರಿಯಡಿ ಜಾಬ್‌ ಕಾರ್ಡ್‌ ವಿತರಿಸಿ ಮಾತನಾಡಿದರು. ಗ್ರಾಮಮಟ್ಟದ ಅಧಿ ಕಾರಿಗಳು ಸರಿಯಾಗಿ ಕೆಲಸ ಮಾಡದ ಕಾರಣ ವಿಕಲಚೇತನರು, ವೃದ್ಧರು, ವಿಧವಾ ವೇತನಕ್ಕೆ ಗ್ರಾಮ ವಾಸ್ತವ್ಯದಲ್ಲಿ ಅರ್ಜಿ ಸಲ್ಲಿಸುವಂತಾಗಿದೆ. ಗ್ರಾಮ ಲೆಕ್ಕಾಧಿ  ಕಾರಿಗಳು, ಗ್ರಾಪಂ ಪಿಡಿಒಗಳು ಸರಿಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿದರೆ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಕೃಷಿ ಸಚಿವನಾದ ಮೇಲೆ ಕಳೆದ ನ.16 ರಿಂದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಆರಂಭ ಮಾಡಿದೆ. ಸರ್ಕಾರ ಹಾಗೂ ಕೃಷಿ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ, ರೈತರ ಹೊಲಕ್ಕೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಸ್ತವ್ಯ ಮಾಡಿ ರೈತರೊಂದಿಗೆ ಕಾಲ ಕಳೆದಿದ್ದೇನೆ ಎಂದರು.

ರೈತರು ಬಹುಬೆಳೆ ಪದ್ಧತಿ ಅನುಸರಿಸಬೇಕು. ಕೋಲಾರ ರೈತರ ಮಾದರಿಯಲ್ಲಿ ಕೃಷಿ ಬೆಳೆ ಪದ್ಧತಿ ಅಳವಡಿಸಿಕೊಂಡರೆ ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳಬಹುದು. ತಾವು ಏಕ ಬೆಳೆ ಪದ್ಧತಿಗೆ ಬದ್ಧರಾಗಿದ್ದೀರಿ. ತಾವು ಇಚ್ಛಿಸಿದಲ್ಲಿ ತಿಂಗಳಿಗೆ 50 ಜನ ರೈತರನ್ನು ಕೋಲಾರ ಕೃಷಿ ಪದ್ಧತಿ ಅಧ್ಯಯನಕ್ಕೆ ಕಳುಹಿಸಿಕೊಡಲು ನಾನು ಸಿದ್ಧವಾಗಿದ್ದೇನೆ ಎಂದು ಹೇಳಿದರು.

ಕೋವಿಡ್‌ ಪೂರ್ವದಲ್ಲಿ ವೃದ್ಧಾಶ್ರಮವಾಗಿದ್ದ ಹಳ್ಳಿಗಳು ಕೋವಿಡ್‌ ನಂತರದ ಸಂದರ್ಭದಲ್ಲಿ ಯುವಕರು ಹಳ್ಳಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ ಉತ್ಪಾದನೆ ಹೆಚ್ಚಾಗಿದೆ. ಬಹುಬೆಳೆ ಕೃಷಿ ಪದ್ಧತಿ, ಕುರಿ ಸಾಕಾಣಿಕೆಯಂತಹ ವಿಭಿನ್ನ ಚಟುವಟಿಕೆಯಲ್ಲಿ ತೊಡಗಿಸಿದರೆ ರೈತರು ಸ್ವಾವಲಂಬಿಗಳಾಬಹುದು ಎಂದರು. ಕೋವಿಡ್‌ ಸಂಕಷ್ಟ ಕಾಲದಲ್ಲೂ ಕೃಷಿಗೆ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ವಿಶೇಷವಾಗಿ ಹಿರೇಕೆರೂರು ತಾಲೂಕಿಗೆ ಶೇ.50ರ ಸಬ್ಸಿಡಿ ದರದಲ್ಲಿ 400 ಹಸುಗಳನ್ನು ನೀಡಲಾಗಿದೆ. ಒಂದು ವಾರದಲ್ಲಿ 16 ಸಾವಿರ ತಾಡಪಾಲ್‌ಗ‌ಳನ್ನು ವಿತರಣೆ ಮಾಡಲಾಗುವುದು.

Advertisement

ಹಿರೇಕೆರೂರು ತಾಲೂಕಿನ 400 ಹಸುಗಳನ್ನು ಶೇ.50 ಸಹಾಯಧನದಲ್ಲಿ ವಿತರಣೆ ಮಾಡಲಾಗಿದೆ. ತಾಲೂಕಿನ ಪ್ರತಿ ಹೋಬಳಿಗೆ ಒಂದು ಸಾವಿರ ಸ್ಪಿಂಕ್ಲರ್‌ ನೀಡಲಾಗುವುದು. 15 ದಿನದೊಳಗಾಗಿ ಸ್ಪಿಂಕ್ಲರ್‌ ಪೂರೈಸಲಾಗುವುದು. ಅರ್ಜಿ ಹಾಕಿ ಎಲ್ಲರಿಗೂ ಸ್ಪಿಂಕ್ಲರ್‌ ನೀಡಲಾಗುವುದು ಎಂದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಯು.ಬಿ.ಬಣಕಾರ ಮಾತನಾಡಿ, ನಮ್ಮ ಸರ್ಕಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರೂಪಿಸಿ ತಿಂಗಳಿಗೊಮ್ಮೆ ಜಿಲ್ಲಾ ಧಿಕಾರಿಗಳ ನೇತೃತ್ವದಲ್ಲಿ ಅ ಧಿಕಾರಿಗಳ ತಂಡ ಹಳ್ಳಿಗೆ ಬರುವುದರಿಂದ ಜನರಿಗೆ ಅಧಿ ಕಾರಿಗಳ ಬಗ್ಗೆ ಇರುವ ಭಯ ಹೋಗಲಾಡಿಸಿ ಸಮಸ್ಯೆಗಳನ್ನು ಬಗೆಹರಿಸಲು ಈ ಕಾರ್ಯಕ್ರಮ ಅತ್ಯುತ್ತಮವಾಗಿದೆ ಎಂದರು. ಸಮಾರಂಭದಲ್ಲಿ ಜಿಲ್ಲಾ ಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹಮ್ಮದ ರೋಷನ್‌, ಚನ್ನಳ್ಳಿ ಗ್ರಾಪಂ ಅಧ್ಯಕ್ಷ ಕರಿಬಸಪ್ಪ ಗಿರಿಯಣ್ಣನವರ, ಉಪವಿಭಾಗಾ ಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಶೀಲ್ದಾರ್‌ ಕೆ.ಎ.ಉಮಾ, ಡಿಎಸ್‌ಒ ಕ್ರಾಂತಿ, ಪ್ರೊಬೇಷನರಿ ತಹಶೀಲ್ದಾರ್‌ ಮಹೇಶ, ಗ್ರಾಪಂ ಉಪಾಧ್ಯಕ್ಷೆ ಸುಶೀಲಮ್ಮ ಮಾರವಳ್ಳಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next