Advertisement

ಹಾಲಿನ ಆಮದಿಗೆ ಅವಕಾಶ ನೀಡದಂತೆ ಸಚಿವರ ಮನವಿ

10:39 PM Oct 08, 2019 | Lakshmi GovindaRaju |

ಬೆಂಗಳೂರು: “ಮುಕ್ತ ವ್ಯಾಪಾರ ಒಪ್ಪಂದದ ಪ್ರಕಾರ ಆರ್‌ಸಿಇಪಿ ಅಡಿಯಲ್ಲಿ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದರಿಂದ ದೇಶದ ಹೈನುಗಾರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್‌ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್‌ ಗೋಯಲ್‌ ಅವರಿಗೆ ಪತ್ರ ಬರೆದಿದ್ದಾರೆ.

Advertisement

ಸೆಪ್ಟೆಂಬರ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಆಗ್ನೇಯ ಏಷಿಯಾ ರಾಷ್ಟ್ರಗಳ (ಆಸಿಯಾನ್‌) 7ನೇ ಶೃಂಗ ಸಭೆಯಲ್ಲಿ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಪ್ರಸ್ತಾಪ ವಾಗಿದೆ. ನಮ್ಮ ದೇಶದಲ್ಲಿ ಆಸ್ಟ್ರೇಲಿಯಾ, ನ್ಯೂಜಿ ಲೆಂಡ್‌ ಹಾಗೂ ಯೂರೋಪ್‌ ಮಾದರಿಯ ಹೈನುಗಾರಿಕೆ ವ್ಯವಸ್ಥೆಯಿಲ್ಲ. ಭಾರತದಲ್ಲಿ ಕೃಷಿಕರು ಹಾಗೂ ಭೂ ರಹಿತ ಕಾರ್ಮಿಕರು ಹೈನುಗಾರಿಕೆಯನ್ನು ಆದಾಯದ ಮೂಲವಾಗಿ ಮಾಡಿಕೊಂಡಿದ್ದಾರೆ.

ಭಾರತದಲ್ಲಿ ಹಾಲು ಹಾಗೂ ಅದರಿಂದ ತಯಾರಾಗುವ ಉತ್ಪನ್ನಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ನ್ಯೂಜಿಲೆಂಡ್‌ನ‌ಲ್ಲಿ ಉತ್ಪತ್ತಿಯಾಗುವ ಶೇ.93 ರಷ್ಟು ಹಾಲು ಹಾಗೂ ಅದರ ಉಪ ಉತ್ಪನ್ನಗಳನ್ನು ಭಾರತಕ್ಕೆ ರಪು¤ ಮಾಡುವ ಸಾಧ್ಯತೆ ಇದೆ. ಭಾರತ ನ್ಯೂಜಿಲೆಂಡ್‌ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡರೆ ಮುಂದಿನ ದಿನಗಳಲ್ಲಿ ಯುರೋಪ್‌ ಹಾಗೂ ಅಮೆರಿಕ ದೇಶಗಳಿಗೂ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಸಂದರ್ಭ ಎದುರಾಗಬಹುದು.

ಆಗ ವಿದೇಶಗಳಿಂದ ಕಡಿಮೆ ಬೆಲೆಗೆ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದರಿಂದ ದೇಶ ಹಾಗೂ ಕರ್ನಾಟಕದ ಹೈನುಗಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಆರ್‌ಸಿಇಪಿ ಮೂಲಕ ಹಾಲಿನ ಆಮದು ಮಾಡಿಕೊಳ್ಳುವ ವಿಷಯದಲ್ಲಿ ಮುತುವರ್ಜಿವಹಿಸಿ ನೀತಿ ರೂಪಿಸಬೇಕು ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next