ಚಿತ್ರದುರ್ಗ: ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಅವರು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಪಳಕಿಹಳ್ಳಿಯಲ್ಲಿ ಶುಕ್ರವಾರ ಗ್ರಾಮ ವಾಸ್ತವ್ಯ ಮಾಡಿದರು. ಸಂಜೆ 7:45ಕ್ಕೆ ಪಳಕಿಹಳ್ಳಿಗೆ ಆಗಮಿಸಿದ ಸಚಿವರಿಗೆ ಗ್ರಾಮಸ್ಥರು ಪೂರ್ಣಕುಂಭ ಸ್ವಾಗತ ಕೋರಿದರು. ಡೊಳ್ಳು ಕುಣಿತ, ಲಂಬಾಣಿ ನೃತ್ಯದೊಂದಿಗೆ ಮೆರವಣಿಗೆ ಮಾಡಲಾಯಿತು. ಜನರತ್ತ ಕೈಬೀಸಿ ಅವರೊಂದಿಗೆ ಮಾತನಾಡುತ್ತ ಸಚಿವರು ಗ್ರಾಮದ ಎಲ್ಲೆಡೆ ಸಂಚರಿಸಿದರು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಆವರಣದಲ್ಲಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.
ಬಹಿರಂಗ ಸಭೆಯಲ್ಲಿ ಪಾಲ್ಗೊಂಡ ನಂತರ ಜಯಪ್ಪ, ಗಿರಿಜಮ್ಮ ದಂಪತಿ ಮನೆಗೆ ತೆರಳಿದ ಸಚಿವರು ಚಪಾತಿ ಪಲ್ಯ, ಮುದ್ದೆ, ಕುಚ್ಚಲ ಅಕ್ಕಿ ಅನ್ನ, ಬೇಳೆ ಸಾರು, ಪಾಯಸ ಸವಿದು ನಿದ್ರೆಗೆ ಜಾರಿದರು. ಶನಿವಾರ ಬೆಳಗ್ಗೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಚಿವರು ಚಾಲನೆ ನೀಡುವರು.