ಬೆಂಗಳೂರು: ಖಾತೆ ಹಂಚಿಕೆ ಬಳಿಕ ಬಹಿರಂಗವಾಗಿಯೇ ಅಸಮಾಧಾನ ಹಂಚಿಕೊಂಡಿದ್ದ ಸಚಿವ ಆನಂದ್ ಸಿಂಗ್, ಇಂದು ಕುಟುಂಬ ಸಮೇತರಾಗಿ ಸಿಎಂ ನಿವಾಸಕ್ಕೆ ಆಗಮಿಸಿದರು.
ಆರ್.ಟಿ.ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿದ ಆನಂದ್ ಸಿಂಗ್ ಮಾತುಕತೆ ನಡೆಸಿದರು. ಆದರೆ ವರಿಷ್ಠರ ಸಲಹೆ-ಸೂಚನೆ ಪ್ರಕಾರ ಖಾತೆ ಹಂಚಿಕೆಯಾಗಿವೆ ಎಂದು ಸಿಎಂ ಹೇಳಿದ್ದಾರೆ ಎನ್ನಲಾಗಿದೆ. ನಂತರ ಸಿಎಂ ನಿವಾಸದಿಂದ ಹೊರ ಬಂದ ಆನಂದ್ ಸಿಂಗ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸದೇ ಹೊರಟು ಹೋದರು.
ಇದನ್ನೂ ಓದಿ:ಸರ್ಕಾರಿ ಕಾರ್ಯಕ್ರಮ ನಿರೂಪಕರು, ಗಾಯಕರ ಬದಲಾವಣೆಗೆ ಒತ್ತಾಯಿಸಿ ಸಿಎಂ ಮನೆ ಮುಂದೆ ಪ್ರತಿಭಟನೆ
ಖಾತೆ ಹಂಚಿಕೆ ಬಳಿಕ ಸಚಿವ ಆನಂದ್ ಸಿಂಗ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ನಾನು ಕೇಳಿದ ಸಚಿವ ಸ್ಥಾನ ಸಿಗದಿದ್ದರೆ ಶಾಸಕನಾಗಿಯೇ ಉಳಿಯುತ್ತೇನೆ ಎಂದು ಶನಿವಾರ ಹೇಳಿದ್ದರು.
ಆನಂದ್ ಸಿಂಗ್ ಭೇಟಿಯ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಆನಂದ್ ಸಿಂಗ್ ತಮ್ಮ ಭಾವನೆಗಳನ್ನು ಹೇಳಿಕೊಂಡಿದ್ದಾರೆ. ಅವರನ್ನು ನಾನೇ ಕರೆದು ಮಾತನಾಡಿದ್ದೇನೆ. ಅವರ ಭಾವನೆ ಗೌರವಿಸುವುದಾಗಿ ತಿಳಿಸಿದ್ದೇನೆ’ ಎಂದಿದ್ದಾರೆ.