Advertisement
ಈ ಸಂದರ್ಭದಲ್ಲಿ ಮಾತನಾಡಿದ ಬೀಡಿ ಫೆಡರೇಶನ್ ಅಧ್ಯಕ್ಷ ವಸಂತ ಆಚಾರಿ, ಸಿಐಟಿಯು ಹಲವಾರು ವರ್ಷಗಳಿಂದ ನಡೆಸಿರುವ ಹೋರಾಟದ ಫಲವಾಗಿ ರಾಜ್ಯ ಸರಕಾರ ಕನಿಷ್ಠ ವೇತನ ಕಾಯಿದೆಯ ಸೆ. 5(1)(ಎ) ಅಡಿಯಲ್ಲಿ ನೇಮಿಸಿರುವ ತ್ರಿಪಕ್ಷೀಯ ಸಮಿತಿಯು ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಒಮ್ಮತದ ಕನಿ ಷ್ಠ ಕೂಲಿಯನ್ನು ಪ್ರಕಟಿಸಿದ್ದು, ಅದಕ್ಕೆ ಸಹಿ ಹಾಕಿರುವ ಮಾಲಕರು ಅದನ್ನು ಎ. 1ರಿಂದ ಜಾರಿ ಮಾಡುವುದರ ಬದಲು ಮೀನಮೇಷ ಎಣಿಸುವುದು ಸರಿಯಲ್ಲ ಎಂದರು.
ಫೆಡರೇಶನ್ ಉಪಾಧ್ಯಕ್ಷ ಯು.ಬಿ. ಲೋಕಯ್ಯ ಮಾತನಾಡಿ, ಕನಿ ಷ್ಠ ಕೂಲಿ ಮತ್ತು ತುಟ್ಟಿಭತ್ತೆಯನ್ನು ನೀಡದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದರು. ಬಳಿಕ ಸಹಾಯಕ ಕಾರ್ಮಿಕ ಆಯುಕ್ತರನ್ನು ಭೇಟಿ ಮಾಡಿದ ನಿಯೋಗವು, ಮನವಿಯನ್ನು ನೀಡಿತು. ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ, ಪದ್ಮಾವತಿ ಶೆಟ್ಟಿ, ಬಾಬು ದೇವಾಡಿಗ, ಯು. ಜಯಂತ ನಾಯ್ಕ, ಸದಾಶಿವ ದಾಸ್, ಜಯಂತಿ ಶೆಟ್ಟಿ, ಗಂಗಯ್ಯ ಅಮೀನ್, ಬಾಬು ಪಿಲಾರ್, ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ಸುಂದರ ಕುಂಪಲ, ವಿಲಾಸಿನಿ ತೊಕ್ಕೊಟ್ಟು, ಕೃಷ್ಣಪ್ಪ ಸಾಲ್ಯಾನ್, ಭಾರತಿ ಬೋಳಾರ್, ಜಯಲಕ್ಷ್ಮೀ, ಪದ್ಮನಾಭ, ಪುಷ್ಪ ಶಕ್ತಿನಗರ, ಡಿವೈಎಫ್‌ಐ ನಾಯಕ ಮುನೀರ್ ಉಪಸ್ಥಿತರಿದ್ದರು. ಪದ್ಮಾವತಿ ಶೆಟ್ಟಿ ವಂದಿಸಿದರು. ಕೂಡಲೇ ಪಾವತಿಸಿ
ಎಲ್ಲ ಆಹಾರ ಮತ್ತು ಅಗತ್ಯ ವಸ್ತುಗಳ ಮೇಲೆ ವಿಪರೀತ ಬೆಲೆ ಏರಿಕೆಯಾಗಿದೆ. ಅದನ್ನು ಸರಿದೂಗಿಸಿ ಬದುಕಲು ಬೀಡಿ ಕಾರ್ಮಿಕರಿಗೆ ತುಟ್ಟಿಭತ್ತೆಯನ್ನು ನ್ಯಾಯೋಚಿತವಾಗಿ ಕಾನೂನು ಬದ್ಧವಾಗಿ ಬೀಡಿ ಮಾಲಕರು ಕೂಡಲೇ ನೀಡಬೇಕು.
– ವಸಂತ ಆಚಾರಿ
ಅಧ್ಯಕ್ಷ, ಸಿಐಟಿಯು