ಹೊಸದಿಲ್ಲಿ: 2019ರ ಚುನಾವಣಾ ಸಿದ್ಧತೆ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಈಗ ಕಾರ್ಮಿಕರ ಕಲ್ಯಾಣದತ್ತ ತನ್ನ ಗಮನ ಹರಿಸಿದೆ. ಈ ಹಿನ್ನೆಲೆ ಯಲ್ಲಿ, ದೇಶದ 6 ಕೋಟಿ ಸಂಘಟಿತ ಕಾರ್ಮಿಕರು ಸದ್ಯಕ್ಕೆ ಪಡೆಯುತ್ತಿರುವ ಮಾಸಿಕ 1,000 ರೂ. ಪಿಂಚಣಿಯನ್ನು 3,000 ರೂ.ಗಳಿಗೆ ಏರಿಸಲು, ಕಾರ್ಮಿಕರ ಕನಿಷ್ಟ ಕೂಲಿ ಯನ್ನು 9,900 ರೂ.ಗಳಿಗೆ ನಿಗದಿಗೊಳಿಸುವ ಪ್ರಸ್ತಾವನೆಯನ್ನೂ ಸಿದ್ಧಪಡಿಸಲಾಗಿದೆ. ಇದಕ್ಕಾಗಿ, “ಕನಿಷ್ಟ ಕೂಲಿ ನೀತಿ ಸಂಹಿತೆ’ಗೆ ತಿದ್ದುಪಡಿ ತಂದಿರುವ ಕೇಂದ್ರ ಕಾರ್ಮಿಕ ಇಲಾಖೆ, ಅದನ್ನು ಕೇಂದ್ರ ಸಂಪುಟದ ಅನುಮೋದನೆಗೆ ಕಳುಹಿಸಿದೆ. ಜಾರಿ ಯಿಂದ ಚಾಲಕರು, ಮನೆಗೆಲಸದವರು ಮುಂತಾದವರಿಗೆ ದಿನವೊಂದಕ್ಕೆ ನಿಗದಿತ ಕರ್ತವ್ಯದ ಅವಧಿ, ಪ್ರತಿ ತಿಂಗಳ 7ರೊಳಗೆ ವೇತನ, ವಾರಕ್ಕೊಂದು ದಿನ ರಜೆ ಕಡ್ಡಾಯವಾಗಲಿದೆ. ಇನ್ನು, ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು 1,000 ರೂ.ಗಳಿಗೆ ನಿಗದಿಗೊಳಿಸುವ ಹೊಸ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಇದು ಜಾರಿಯಾದರೆ, ಚಾಲಕರಿಗೆ, ಮನೆಗೆಲಸದವರಿಗೆ, ಕೂಲಿ ಯಾಳುಗಳು ಮುಂತಾದವರಿಗೆ ಅನುಕೂಲವಾಗುತ್ತದೆ.