Advertisement

‘ಮಿನಿ ವಿಧಾನಸೌಧ’ಗಳನ್ನು ‘ತಾಲೂಕು ಆಡಳಿತ ಸೌಧ’ಎಂದು ಬದಲಾಯಿಸಲು ಸರಕಾರದ ಚಿಂತನೆ

06:37 PM Nov 16, 2021 | Team Udayavani |

ಬೆಂಗಳೂರು : ತಾಲೂಕು ಕೇಂದ್ರಗಳಲ್ಲಿರುವ “ಮಿನಿ ವಿಧಾನಸೌಧ’ಗಳ ಹೆಸರನ್ನು “ತಾಲೂಕು ಆಡಳಿತ ಸೌಧ’ಗಳೆಂದು ಬದಲಿಸಲು ಸರ್ಕಾರ ನಿರ್ಧರಿಸಿದೆ.

Advertisement

ರಾಜ್ಯದ ಎಲ್ಲಾ ತಾಲೂಕುಗಳಲ್ಲಿರುವ ಮಿನಿ ವಿಧಾನಸೌಧ ಎಂಬ ತಾಲೂಕು ಆಡಳಿತ ಕಛೇರಿಗಳನ್ನು ರಾಜ್ಯದ ಭಾಷಾ ನೀತಿಗೆ ಒಳಪಡುವಂತೆ ಹಾಗೂ ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿರುವುದರಿಂದ ನಾಡು-ನುಡಿ ಸಂಸ್ಕೃತಿಗೆ ಪೂರಕವಾಗಿ “ತಾಲೂಕು ಆಡಳಿತ ಸೌಧ’ ಎಂದು ಬದಲಿಸುವುದು ಸೂಕ್ತವೆಂದು ಸರ್ಕಾರ ಹೇಳಿದೆ.

ಪ್ರಸ್ತುತ ಬಳಕೆಯಲ್ಲಿರುವ ಮಿನಿ ಎಂಬ ಪದ ಆಂಗ್ಲಭಾಷೆಯದ್ದಾಗಿದ್ದು, ತಾಲೂಕು ಮಟ್ಟದ ಆಡಳಿತ ಕಟ್ಟಡಗಳಲ್ಲಿ ಯಾವುದೇ ಕಲಾಪಗಳನ್ನಾಗಲಿ ಕಾಯ್ದೆ-ಕಾನೂನುಗಳನ್ನಾಗಲಿ ರೂಪಿಸುವ ಶಕ್ತಿ ಕೇಂದ್ರಗಳಲ್ಲದ ಕಾರಣ “ಮಿನಿ ವಿಧಾನಸೌಧ’ ಎಂಬುದರ ಬದಲಿಗೆ ತಾಲೂಕು ಆಡಳಿತ ಸೌಧ ಎಂದು ಬದಲಿಸುವುದು ಅರ್ಥಪೂರ್ಣವಾಗಿರುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸಾರ್ವಜನಿಕರು ಮತ್ತು ಗಣ್ಯ ವ್ಯಕ್ತಿಗಳ ಕೋರಿಕೆಯನ್ನು ಸರ್ಕಾರ ಪರಿಗಣಿಸಿದೆ.

ಆದ್ದರಿಂದ ರಾಜ್ಯದ ಎಲ್ಲಾ ತಾಲೂಕುಗಳಲ್ಲಿನ “ಮಿನಿ ವಿಧಾನಸೌಧ’ ಎಂಬ ನಾಮಾಂಕಿತದ ಬದಲು “ತಾಲೂಕು ಆಡಳಿತ ಸೌಧ’ ಎಂದು ನಾಮಾಂಕಿತಗೊಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಸೂಚನೆ ನೀಡಿ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಇದನ್ನೂ ಓದಿ : ದೇಶದ ಗ್ರೀನರ್‌ ಎಕಾನಮಿಯ ಸಂಶೋಧನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿ: ನಿತಿನ್‌ ಗಡ್ಕರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next