ತುಮಕೂರು: ನಗರದ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ವಿವಿಧ ಕ್ರೀಡೆಗಳ ಮಿನಿ ಸ್ಟೇಡಿಯಂನ ಕಾಮಗಾರಿಯನ್ನು 15ನೇ ವಾರ್ಡ್‌ನ ಕಾರ್ಪೋರೆಟರ್ ಗಿರಿಯಾ ಧನಿಯಕುಮಾರ್ ಹಾಗೂ ಕ್ರೀಡಾಪಟುಗಳು ವೀಕ್ಷಣೆ ನಡೆಸಿ, ಹಲವು ಸಲಹೆ, ಸೂಚನೆಗಳನ್ನು ನೀಡಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಫುಟ್ ಬಾಲ್ ಮತ್ತು ಅಥ್ಲೆಟಿಕ್ ಕ್ರೀಡೆಗಳಿಗೆ ಸೀಮಿತಗೊಳಿಸಿದ ನಂತರ, ಬೇರೆ ಕ್ರೀಡಾಪಟುಗಳ ಅನುಕೂಲಕ್ಕಾಗಿ ಈ ಹಿಂದೆ ಖೋ-ಖೋ, ಕಬಡ್ಡಿ, ವಾಲಿಬಾಲ್ ಕ್ರೀಡೆಗಳು ನಡೆಯುತ್ತಿದ್ದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಪೂರ್ವ ಭಾಗದಲ್ಲಿ ಸುಮಾರು 3.63 ಕೋಟಿ ರೂ.ಗಳಲ್ಲಿ ಹಲವು ಕ್ರೀಡಾ ಅಂಕಣಗಳನ್ನು ಒಳಗೊಂಡ ಮಿನಿ ಸ್ಟೇಡಿಯಂಅನ್ನು ಹೃದಯ ಭಾಗದಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಿಸುತ್ತಿದ್ದು, ಇದರ ವೀಕ್ಷಣೆ ನಡೆಸಲಾಯಿತು.
ಸೌಕರ್ಯ: ಈ ವೇಳೆ ಮಾತನಾಡಿದ ಕಾರ್ಪೊàರೆಟರ್ ಗಿರಿಜಾ ಧನಿಯಕುಮಾರ್, ಸ್ಮಾರ್ಟ್‌ಸಿಟಿ ಅನು ದಾನದ 3.63 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಈ ಮಿನಿ ಕ್ರೀಡಾಂಗಣ ಬಹು ಉಪಯೋಗಿಯಾಗಿದೆ. ಒಂದೇ ಬಾರಿಗೆ ಐದಾರು ಕ್ರೀಡೆಗಳಲ್ಲಿ ಈ ಮೈದಾನದಲ್ಲಿ ಆಡಿಸಬಹುದಾಗಿದೆ. ಈ ಹಿಂದೆ ಕ್ರೀಡಾಕೂಟ ನಡೆದರೆ, ಆಯೋಜಕರೇ ಸ್ಟೇಜ್, ವೀಕ್ಷಕರ ಗ್ಯಾಲರಿ, ಹೊನಲು ಬೆಳಕಿನ ವ್ಯವಸ್ಥೆ ಮಾಡಬೇಕಾಗಿತ್ತು. ಲಕ್ಷಾಂತರ ರೂ.ಗಳ ಖರ್ಚು ತಗಲುತ್ತಿತ್ತು. ಆದರೆ ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್ ಅವರು ಸ್ಮಾರ್ಟ್‌ಸಿಟಿ ಅನುದಾನದಲ್ಲಿ ಸ್ಟೇಜ್, ಗ್ಯಾಲರಿ, ಕ್ರೀಡಾಪಟುಗಳ ಗ್ರೀನ್ ರೂಮ್, ಶೌಚಾಲಯ, ಪೆಡ್‌ಲೈಟ್, ಕ್ರೀಡಾಪಟುಗಳ ಚಲನ ವಲನ ವೀಕ್ಷಣೆಗೆ ಸಿಸಿಟಿವಿ ಕ್ಯಾಮರಾ, ಶೌಚಾಲಯ ಒಳಗೊಂಡಂತೆ ಸುಸಜ್ಜಿತ ಮಿನಿ ಕ್ರೀಡಾಂಗಣ ವನ್ನು ನಿರ್ಮಿಸಿಕೊಟ್ಟಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇವೆ. ಜೊತೆಗೆ ಸ್ಮಾರ್ಟ್‌ಸಿಟಿ ಯವರು ಬಹುಬೇಗ ಕಾಮಗಾರಿ ಮುಗಿಸಿ ಕ್ರೀಡಾಂಗಣವನ್ನು ಬಿಟ್ಟುಕೊಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಉನ್ನತ ಹುದ್ದೆ: ವಿವೇಕಾನಂದ ಕ್ರೀಡಾಸಂಸ್ಥೆ ಸದಸ್ಯ ಹಾಗೂ ಕ್ರೀಡಾಪಟು ಸುನೀಲ್‌ಕುಮಾರ್ ಮಾತ ನಾಡಿ, ವಿವೇಕಾನಂದ ಕ್ರೀಡಾಸಂಸ್ಥೆ 1979 ರಿಂದಲೂ ನಗರದಲ್ಲಿ ಖೋ-ಖೋ ಕ್ರೀಡೆಯನ್ನು ಬೆಳೆಸುತ್ತಾ ಬಂದಿದೆ. ಇಲ್ಲಿ ಆಟವಾಡಿದ ಸಾವಿರಾರು ವಿದ್ಯಾರ್ಥಿ ಗಳು ಕ್ರೀಡಾಕೋಟಾ ಅಡಿಯಲ್ಲಿ ಸರ್ಕಾರಿ ಹುದ್ದೆಗಳನ್ನು ಪಡೆದಿರುವುದಲ್ಲದೇ ಇಂಜಿನಿಯ ರಿಂಗ್, ಮೆಡಿಕಲ್ ಸೀಟು ಪಡೆದು ಉನ್ನತ ಹುದ್ದೆಗಳಿಗೆ ಹೋಗಿದ್ದಾರೆ. ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟ ಗಳಲ್ಲಿಯೂ ಪಾಲ್ಗೊಂಡು ಜಿಲ್ಲೆಗೆ ಕೀತಿ ತಂದಿದ್ದಾರೆ. ಮೊದಲು ಕ್ರೀಡಾಕೂಟ ನಡೆಸಲು ಸಾಕಷ್ಟು ಖರ್ಚು ಬರುತ್ತಿತ್ತು. ಈಗ ಎಲ್ಲವೂ ಸಿದ್ಧವಿದೆ. ಕ್ರೀಡಾಪಟು ಗಳಷ್ಟೇ ಬಂದರೆ ಸಾಕು. ಇದಕ್ಕಾಗಿ ಶಾಸಕರಿಗೆ, ಕೌನ್ಸಿಲರ್‌ಗಳಿಗೆ, ಇದಕ್ಕೆ ಸಹಕರಿಸಿದ ಕ್ರೀಡಾಪಟುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ವೇಳೆ ವಿವೇಕಾನಂದ ಕ್ರೀಡಾ ಸಂಸ್ಥೆಯ ಸಂಸ್ಥಾಪಕ ಎಸ್.ಡಿ.ರಾಜಶೇಖರ್, ಪತಿಕೋದ್ಯಮಿ ಎಸ್.ನಾಗಣ್ಣ, ಯಂಗ್‌ಚಾಲೆಂಜರ್ನ ಸಂಜಯ್, ಕನ್ನಡ ಸೇನೆಯ ಧನಿಯಕುಮಾರ್, ಕ್ರೀಡಾಪಟು ಗಳಾದ ಪ್ರಿತಮ್,ಉಮೇಶ್,ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್,ಪ್ರಕಾಶ್, ಅಧಿಕಾರಿಗಳಾದ ಎಇಇ ವಿನಯ್‌ರಾಜ್, ಅರ್ಕಿಟೆಕ್ ಜಾವಿಡ್ ದೊಡ್ಡಮನಿ, ಮ್ಯಾನೇಜರ್ ಸಿದ್ದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಿಮ್ ಸಾರ್ವಜನಿಕರಿಗೆ ಮುಕ್ತಗೊಳಿಸಲಿ : ಚಕ್ರವರ್ತಿ ಗೆಳೆಯರ ಬಳಗದ ಪ್ರಕಾಶ್ ಮಾತ ನಾಡಿ, ಕ್ರೀಡಾಂಗಣ ಚನ್ನಾಗಿ ಮೂಡಿಬರುತ್ತಿದೆ. ಆದರೆ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದೆ. ಸಾಧ್ಯವಾದಷ್ಟು ಬೇಗ ಕಾಮಗಾರಿ ಮುಗಿಸಿ ಕೊಟ್ಟರೆ ಕ್ರೀಡಾಪಟುಗಳಿಗೆ ಹೆಚ್ಚಿನ ಅನುಕೂಲ ವಾಗಲಿದೆ. ಜೊತೆಗೆ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಜಿಮ್‌ನ್ನು ಸಾರ್ವ ಜನಿಕರಿಗೆ ಮುಕ್ತಗೊಳಿಸಿದರೆ ಹೆಚ್ಚಿನ ಉಪಯೋಗವಾಗಲಿದೆ ಎಂದರು.