Advertisement
ಬೆಂಗಳೂರಿನಿಂದ ಚಾರ್ಮಾಡಿ ಮೂಲಕ ಮಂಗಳೂರು ಕಡೆ ಪ್ರಯಾಣಿಸುತ್ತಿದ್ದ ಮಿನಿ ಬಸ್ ರಸ್ತೆ ಬಿಟ್ಟು ನದಿ ಬದಿ ಇರುವ ಗುಡ್ಡವನ್ನು ಹತ್ತಿದಾಗ ಖಾಸಗಿ ವಿದ್ಯುತ್ ಲೈನ್ ಕಂಬಕ್ಕೆ ಬಡಿದ ಕಾರಣ ಹೆಚ್ಚಿನ ಅನಾಹುತ ಉಂಟಾಗುವುದು ತಪ್ಪಿದೆ.
Related Articles
ಅಪಘಾತ ಸ್ಥಳವೂ ತೀರ ತಿರುವಾಗಿದೆ. ಬಸ್ ಗುಡ್ಡ ಹತ್ತಿದ ಸ್ಥಳದಲ್ಲಿ ಖಾಸಗಿ ವಿದ್ಯುತ್ ಲೈನ್‌ನ ಕಂಬವಿದ್ದ ಕಾರಣ ಅದಕ್ಕೆ ಬಡಿದು ನಿಂತಿದೆ. ವಿದ್ಯುತ್ ಕಂಬವಿಲ್ಲದಿದ್ದರೆ ಕೆಳಭಾಗದಲ್ಲಿ ಹರಿಯುವ ಮೃತ್ಯುಂಜಯ ನದಿಗೆ ಮಿನಿ ಬಸ್ ಬೀಳುವ ಸಾಧ್ಯತೆ ಇತ್ತು. ರವಿವಾರ ಮಳೆ ಇದ್ದ ಕಾರಣ ನದಿಯಲ್ಲಿ ನೀರಿನ ಹರಿವು ಹೆಚ್ಚಿತ್ತು. ಕಳೆದ ವರ್ಷ ಇದೇ ಸ್ಥಳದಿಂದ ಸುಮಾರು 50 ಮೀ. ಕೆಳಭಾಗದಲ್ಲಿ ರಿಕ್ಷಾ ನದಿಗೆ ಉರುಳಿ ಮಹಿಳೆಯೊಬ್ಬರು ನೀರಲ್ಲಿ ಮುಳುಗಿ ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದರು.
Advertisement