Advertisement

ಗ್ರಾಮೀಣ ಭಾಗದಲ್ಲಿ ಮಿನಿ ಎಟಿಎಂ ಸಹಕಾರಿ

02:28 PM Jul 26, 2019 | Suhan S |

ಶಿಗ್ಗಾವಿ: ಗ್ರಾಮೀಣ ಭಾಗದ ಜನತೆಗೆ ಹಣಕಾಸಿನ ವಹಿವಾಟಿಗೆ ವೆಬ್‌ಟಾಕ್‌ ಮಿನಿ ಎಟಿಎಂ ಸೇವೆ ಪ್ರಾರಂಭಿಸುವುದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲಕರವಾಗಲಿದೆ ಎಂದು ಪಟ್ಟಣದ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು. ಪಟ್ಟಣದ ರಾಜಶ್ರೀ ಚಲನಚಿತ್ರ ಮಂದಿರದ ಹತ್ತಿರವಿರುವ ಓಂಕಾರೇಶ್ವರ ಆಲೂರ ಅವರ ಮಳಿಗೆಯಲ್ಲಿ ವೆಬಾಟಾಕ್‌ ಮಿನಿ ಎಟಿಎಂ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರಕ್ಕಾಗಲಿ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಬ್ಯಾಂಕಗಳ ಮೂಲಕ ಎಟಿಎಂ ವ್ಯವಸ್ಥೆ ನೀಡಲು ಸಾಧ್ಯವಿಲ್ಲ. ಇಂತಹ ಸಮಸ್ಯೆಗಳನ್ನು ಮನಗಂಡು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸಲು ವಿಭಿನ್ನ ಸೇವೆ ಚಾಲನೆಗೊಳಿಸಲಾಗಿದೆ. ಸಾರ್ವಜನಿಕರ ಸೇವೆ ಜತೆಗೆ ಆರ್ಥಿಕವಾಗಿ ಸಬಲೀಕರಣ ಹೊಂದುವಂತಾಗಲಿ ಎಂದು ಖಾಸಗಿ ಕಂಪನಿಗಳು ಮುಂದೆ ಬಂದಿದ್ದು, ಇದೊಂದು ಉತ್ತಮ ಬೆಳವಣಿಗೆ ಎಂದರು.

Advertisement

ಕ್ಲಸ್ಟರ್‌ ವ್ಯವಸ್ಥಾಪಕ ರಾಘವೇಂದ್ರ ಎಂ. ಮಾತನಾಡಿ, ಇಂದಿನಿಂದ ಶಿಗ್ಗಾವಿ ಪಟ್ಟಣದಲ್ಲಿ ವೆಬ್‌ಕಾಸ್ಟ್‌ ಮಿನಿ ಎಟಿಎಂ ಸೇವೆಯನ್ನು ತಾಲೂಕಿನ ಮಣಕಟ್ಟಿ, ಹಿರೇಬೆಂಡಿಗೇರಿ, ಮುಗಳಿ, ಬೆಳಗಲಿ, ಕೋಣನಕೇರಿ, ಕುನ್ನೂರ ಗ್ರಾಮಗಳಲ್ಲಿ ಪ್ರಾರಂಭ ಮಾಡಿದ್ದು, ಇದರ ಸದುಪಯೋಗವನ್ನು ಹೆಚ್ಚು ಹೆಚ್ಚು ಗ್ರಾಮೀಣ ಪ್ರದೇಶದ ಜನರು ಇದರ ಲಾಭ ಪಡೆದುಕೊಳ್ಳಬೇಕು ಮತ್ತು ಯಾವುದೇ ಬ್ಯಾಂಕಿನ ಡೆಬಿಟ್ ಕಾರ್ಡ್‌ನಿಂದ ಹಣ ಪಡೆದುಕೊಳ್ಳಬಹುದು ಹಾಗೂ ಯಾವುದೇ ಬ್ಯಾಂಕಿನ ಖಾತೆಗೆ ಸುಲಭವಾಗಿ ಹಣ ಜಮೆ ಸಹ ಮಾಡಬುದು ಎಂದು ಹೇಳಿದರು. ಕಂಪನಿ ಸಿಬ್ಬಂದಿ ಶಶಿಕಾಂತ ತಡಸ, ಓಂಕಾರೇಶ್ವರ ಆಲೂರ, ರಾಜಶೇಖರ ಅಂಕಲಕೋಟಿ, ಈರಪ್ಪ ಮಂಟಗಣಿ, ರಂಗನಾಥ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next