ವಿಟ್ಲ: ಯೋಚನೆ ಯೋಜನೆಗಳನ್ನು ಸಾಕಾರ ಮಾಡುವ ಮನಸ್ಸು ನಮ್ಮಲ್ಲಿರಬೇಕು. ಸ್ವೋದ್ಯೋಗ ಮಾಡಿ ನಮ್ಮ ಕಾಲ ಮೇಲೆ ನಾವು ನಿಲ್ಲು ವಂತಾ ಗಬೇಕು. ಬದಲಾಗುತ್ತಿರುವ ಭಾರತದಲ್ಲಿ ನಮ್ಮ ಪಾತ್ರವನ್ನು ಅರ್ಥ ಮಾಡಿ ಕೊಳ್ಳ ಬೇಕು. ಭಾರತ ಎತ್ತರಕ್ಕೇರಿದೆ. ದಾಸ್ಯದ ಬದುಕಿನ ಮಾನಸಿಕತೆಯನ್ನು ಬದಿಗಿಟ್ಟು ಕ್ರಿಯಾಶೀಲರಾಗಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಇಡ್ಕಿದು ಸೇವಾ ಸಹಕಾರಿ ಸಂಘ, ಅಮೃತ ಸಿಂಚನ ರೈತ ಸೇವಾ ಒಕ್ಕೂಟ, ಇಡ್ಕಿದು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಪಾಲಿ ಟೆಕ್ನಿಕ್ ಕಾಲೇಜು ಪುತ್ತೂರು ಇವರ ಸಹ ಯೋಗದಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘದ ಉರಿಮಜಲು ಕೇಂದ್ರ ಕಚೇರಿಯ ಶತಾಮೃತ ಸಂಕೀರ್ಣದಲ್ಲಿ ನಡೆದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಸಮಾರೋಪ ಉದ್ಘಾಟಿಸಿ ಮಾತನಾಡಿದರು.
ಇಡ್ಕಿದು ಸೇವಾ ಸಹಕಾರಿ ಸಂಘ ದ ಅಧ್ಯಕ್ಷ ಸುಧಾಕರ್ ಶೆಟ್ಟಿ ಬಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾವಲಂಬಿ ಗ್ರಾಮ ನಿರ್ಮಾ ಣಕ್ಕೆ ಸಹಕಾರಿ ಸಂಘ ಕೆಲಸ ಮಾಡುತ್ತಿದೆ. ಶಿಬಿರಾರ್ಥಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್‌ನಿಂದ ಸಾಲ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ.ಕೃಷ್ಣ ಭಟ್ ಕೊಂಕೋಡಿ, ಇಡ್ಕಿದು ಗ್ರಾ.ಪಂ. ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಂ., ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ, ಅಮೃತ ಸಿಂಚನ ರೈತ ಸೇವಾ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಕೆ. ಎಸ್. ಉರಿಮಜಲು ಉಪಸ್ಥಿತರಿದ್ದರು.
ಕೋಟ ಶ್ರೀನಿವಾಸ ಪೂಜಾರಿ ಪ್ರಮಾಣ ಪತ್ರ ವಿತರಿಸಿದರು. ಸಂಪನ್ಮೂಲ ವ್ಯಕ್ತಿಗಳು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರನ್ನು ಗೌರವಿಸಲಾಯಿತು. ಇಡ್ಕಿದು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಎನ್. ರಾಮ್ ಭಟ್ ಸ್ವಾಗತಿಸಿದರು. ಇಡ್ಕಿದು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ನಾಯ್ಕ ವಂದಿಸಿದರು. ಸಿಬಂದಿ ಈಶ್ವರ ಕುಲಾಲ್ ನಿರೂಪಿಸಿದರು.
ಉತ್ತಮ ಸಹಕಾರ
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಮಾತನಾಡಿ, ಮೋದಿಯವರ ಕನಸನ್ನು ನನಸು ಮಾಡುವಲ್ಲಿ ಉದ್ಯೋಗ ನೈಪುಣ್ಯ ಶಿಬಿರ ಸಹಕಾರಿ. ಸರಕಾರ, ಸಹಕಾರಿ ಸಂಘಗಳು ಸಹಕಾರ, ಪ್ರೋತ್ಸಾಹ ನೀಡುತ್ತದೆ ಎಂದರು.