Advertisement

ಸುಂದರಿ ಮಿಮಿ ಚಕ್ರವರ್ತಿ ಜಾದವ್‌ಪುರ್‌ ಮತದಾರರ ಮನ ಗೆಲ್ತಾರಾ?

09:40 AM May 20, 2019 | Vishnu Das |

ಜಾದವ್‌ಪುರ್‌: ಲೋಕಸಭಾ ಚುನಾವಣೆಯ ಜಿದ್ದಾಜಿದ್ದಿನ ಕಣವಾಗಿರುವ ಪಶ್ಚಿಮ ಬಂಗಾಳದ ಜಾದವ್‌ಪುರ್‌ ಲೋಕಸಭಾ ಕ್ಷೇತ್ರ ಈ ಬಾರಿ ಭಾರೀ ರಂಗು ಪಡೆದುಕೊಂಡಿದೆ. ಈ ಕ್ಷೇತ್ರದಲ್ಲಿ ಯಾವುದೇ ಪಕ್ಷಕ್ಕೆ ನಿರಂತರ 3 ಬಾರಿ ಮತದಾರ ಒಲಿಯಲಿಲ್ಲ ಎನ್ನುವುದು ವಿಶೇಷ.

Advertisement

30 ರ ಹರೆಯದ ಮಿಮಿ ಚಕ್ರವರ್ತಿ ಅವರು ಅಭ್ಯರ್ಥಿಯಾಗಿ ಹಳೆಯ ದಾಖಲೆಯನ್ನುಮುರಿದು ಟಿಎಂಸಿ ಗೆ ಸತತ 3 ನೇ ಜಯ ತಂದಿಡುತ್ತಾರೆಯೇ ಎನ್ನುವ ಪ್ರಶ್ನೆ ಮೂಡಿದೆ.

1984 ರಲ್ಲಿ ಪ್ರಭಾವಿ ಕಮ್ಯುನಿಷ್ಟ್ ರಾಜಕಾರಣಿ ಸೋಮನಾಥ ಚಟರ್ಜಿ ಅವರ 3 ನೇ ಬಾರಿಯ ಗೆಲುವಿಗೆ ಮಮತಾ ಬ್ಯಾನರ್ಜಿ ತಡೆಯೊಡ್ಡಿದ್ದರು.

ಕೃಷ್ಣಾ ಬೋಸ್‌ ಅವರು 1996 ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಆ ಬಳಿಕ ಟಿಎಂಸಿಗೆ ಸೇರಿದ್ದ ಅವರು 1998 ರಲ್ಲಿ ಮತ್ತು 1999 ರಲ್ಲಿ ಆಯ್ಕೆಯಾಗಿದ್ದರು.

2014 ರಲ್ಲಿ ಸುಗತಾ ಬೋಸ್‌ ಅವರು ಟಿಎಂಸಿಯಿಂದ ಜಯಗಳಿಸಿದ್ದರು. ಹಾರ್ವರ್ಡ್‌ ವಿವಿಯ ಪ್ರಾಧ್ಯಾಪಕರಾಗಿರುವ ಬೋಸ್‌ ಅವರ ಸ್ಪರ್ಧೆಗೆ ಈ ಬಾರಿ ವಿವಿ ಅನುಮತಿ ನೀಡಿಲ್ಲ. ಹಾಗಾಗಿ ಮಿಮಿ ಅವರಿಗೆ ಟಿಎಂಸಿ ಟಿಕೆಟ್‌ ನೀಡಿದೆ.

Advertisement

ಬಿಜೆಪಿ ಅಭ್ಯರ್ಥಿಯಾಗಿ ಬೋಲ್‌ಪುರ್‌ ಕ್ಷೇತ್ರದಲ್ಲಿ ಸಂಸದನಾಗಿ , ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಅನುಪಮ್‌ ಹಜ್ರಾ ಅವರು ಕಣದಲ್ಲಿದ್ದಾರೆ

ಸಿಪಿಐ(ಎಂ) ಅಭ್ಯರ್ಥಿಯಾಗಿ ಕೋಲ್ಕತಾದ ಮಾಜಿ ಮೇಯರ್‌, ಖ್ಯಾತ ವಕೀಲ ಬಿಕಾಶ್‌ ರಂಜನ್‌ ಭಟ್ಟಾಚಾರ್ಯ ಅವರು ಕಣದಲ್ಲಿದ್ದಾರೆ.

ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ ಎದುರಾಗಿದ್ದು ಮತದಾರ ಯಾರಿಗೆ ಒಲಿಯುತ್ತಾನೆ ಎನ್ನುವ ಕುತೂಹಲ ಮೂಡಿದೆ.

ಭರ್ಜರಿ ಪ್ರಚಾರ, ರೋಡ್‌ ಶೋ ಮತ್ತು ಮಾಧ್ಯಮಗಳ ಸುದ್ದಿಯ ವಿಚಾರದಲ್ಲಿ ಗಮನಿಸುವುದಾದರೆ ಮಿಮಿ ಅವರೇ ಒಂದು ಹೆಜ್ಜೆ ಮುಂದಿದ್ದಾರೆ.

ಕ್ಷೇತ್ರದಲ್ಲಿ ನಾಳೆ ಮೇ 19 ರಂದು ಅಂತಿಮ ಹಂತದ ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next