Advertisement
ರಾಜಸ್ಥಾನ ಮೂಲದ ರಾಮ್ ರಾಯ್ (21) ಹಾಗೂ ಪ್ರವೀಣ್ ಕುಮಾರ್ (25) ಬಂಧಿತರು. ಬಂಧಿತರಿಂದ 10 ಲಕ್ಷ ರೂ. ಮೌಲ್ಯದ 175 ಗ್ರಾಂ. ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೊಹಮ್ಮದ್ ಶಾಹಬುದ್ದಿನ್ ಮಾಲಕತ್ವದ ಹಾಜಿ ಗೋಲ್ಡ್ ಆ್ಯಂಡ್ ಡೈಮಂಡ್ ಜುವೆಲರಿಯ ಮಾರ್ಕೆ ಟಿಂಗ್ ಎಕ್ಸಿಕ್ಯೂಟಿವ್ ರಮೇಶ್ ಕುಮಾರ್ ಅವರು ಚಿನ್ನಾ ಭರಣ ಮಾರಾಟಕ್ಕೆಂದು 2023ರ ಜೂ. 10ರಂದು ಕುಂದಾಪುರ ಕಡೆಗೆ ಬಂದಿದ್ದರು. ಉಪ್ಪುಂದಕ್ಕೆ ತೆರಳಿ, ಅಲ್ಲಿಂದ ಸಂಜೆ ವಾಪಸಾಗಿ, ರಾತ್ರಿ ಯಾಯಿ ತೆಂದು ಕುಂದಾಪುರದ ಖಾಸಗಿ ಹೊಟೇಲೊಂದರಲ್ಲಿ ಸ್ನೇಹಿತ ರಾಜಸ್ಥಾನ ಮೂಲದ ರಾಮ್ ಎಂಬಾತನ ಜತೆ 421 ಗ್ರಾಂ. ತೂಕದ ಚಿನ್ನಾಭರಣವನ್ನು ಮಂಚದ ಕೆಳಗಿಟ್ಟು ಮಲಗಿದ್ದರು. ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಎದ್ದು ನೋಡಿದಾಗ ರಾಮ್ ನಾಪತ್ತೆಯಾಗಿದ್ದು, ಚಿನ್ನಾಭರಣದ ಬ್ಯಾಗ್ ಕೂಡ ಇರಲಿಲ್ಲ. ಹೊರಗಿನಿಂದ ಬಾಗಿಲು ಹಾಕಲಾಗಿತ್ತು.
ಚಿನ್ನದ ಸಾನಿಯಾ ಬಾಲಿ 43 ಜತೆ (52 ಗ್ರಾಂ.), ಚಿನ್ನದ ಮೂಗುತಿ 153 ಫೀಸ್ (61 ಗ್ರಾಂ.), ಚಿನ್ನದ ಜೆ ಬಾಲಿ 44 ಫೀಸ್ (61 ಗ್ರಾಂ.), ಚಿನ್ನದ ಕಿವಿಯೋಲೆ-158 ಜತೆ (150 ಗ್ರಾಂ.), ಕಿವಿಯ ಚಿನ್ನದ ಟಾಪ್ಸ್ 60 ಜತೆ (81 ಗ್ರಾಂ.), 14 ಗ್ರಾಂ ಚಿನ್ನದ ಗಟ್ಟಿ ಸಹಿತ ಒಟ್ಟು 420 ಗ್ರಾಂ. ಚಿನ್ನಾಭರಣ ಕಳವಾಗಿತ್ತು.ಈ ಸಂಬಂಧ ಕುಂದಾಪುರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು. 8 ತಿಂಗಳಿನಿಂದ ನಿರಂತರ ಪ್ರಯತ್ನ
ಪ್ರಕರಣ ಸಂಬಂಧ 8 ತಿಂಗಳು ಗಳಿಂದ ಕಳ್ಳರನ್ನು ಪತ್ತೆಹಚ್ಚಲು ಕುಂದಾ ಪುರ ಡಿವೈಎಸ್‌ಪಿ ಬೆಳ್ಳಿಯಪ್ಪ ನಿರ್ದೇ ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಯು.ಬಿ.ನಂದಕುಮಾರ್ ಮಾರ್ಗದರ್ಶನದಲ್ಲಿ ಎಸ್‌ಐಗಳಾದ ವಿನಯ ಎಂ. ಕೊರ್ಲಹಳ್ಳಿ, ಪ್ರಸಾದ ಕುಮಾರ್ ಕೆ., ಸಿಬಂದಿ ವರ್ಗದ ಸಂತೋಷ ಕುಮಾರ್, ಶ್ರೀಧರ್, ರಾಮ ಪೂಜಾರಿಯವರ ತಂಡ ನಿರಂತರ ಶ್ರಮಿಸಿದೆ. ತಾಂತ್ರಿಕ ಮಾಹಿತಿ ಮೂಲಕ ಆರೋಪಿಗಳು ಮುಂಬಯಿಯಲ್ಲಿರುವುದಾಗಿ ಪತ್ತೆ ಹಚ್ಚಿ, ಅವರಲ್ಲಿದ್ದ 10 ಲಕ್ಷ ರೂ. ಮೌಲ್ಯದ 175 ಗ್ರಾಂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
Related Articles
Advertisement