ಮಧುಗಿರಿ: ರಾಜ್ಯಾದ್ಯಂತ ಲಾಕ್‌ಡೌನ್, ಲಾಕ್‌ಡೌನ್ ಆದರೆ, ಬಡತನ ರೇಖೆಗಿಂತ ಕೆಳಗಿರುವ, ಕೂಲಿ ಕಾರ್ಮಿಕರು, ಶ್ರಮಿಕ ವರ್ಗಕ್ಕೆ ಯಾವುದೇ ಆಧಾರವಿಲ್ಲದೆ 15 ದಿನ ಲಾಕ್‌ಡೌನ್ ಘೋಷಿಸಿದಸರ್ಕಾರ ಈಗ ಅವರಿಗೆ ತಿನ್ನಲು ರೈತರಿಂದ ಬೆಂಬಲ ಬೆಲೆಗೆ ಖರೀದಿಸಿದ ರಾಗಿಯನ್ನು ಕೊಟ್ಟುಅಕ್ಕಿಯನ್ನು ತಡೆಹಿಡಿದಿದೆ.
ಇದೊಂದು ರೀತಿಯಲ್ಲಿ ಒಂದು ತಲೆಯಿಂದ 3ಕೆ.ಜಿ ಅಕ್ಕಿಯನ್ನು ಕಿತ್ತುಕೊಂಡು ರಾಗಿಕೊಟ್ಟಂತಾಗಿದೆ. ಆದರೂ ಬಡವರ 3 ಕೆ.ಜಿ.ಅಕ್ಕಿ ಮಾತ್ರ ಖೋತಾ ಆಗಿರುವುದು ಸ್ಪಷ್ಟ. ತಾಲೂಕಿನಲ್ಲಿ ರಾಗಿ ಖರೀದಿ ಕೇಂದ್ರ ಆರಂಭವಾಗಿ 2 ವರ್ಷ ಕಳೆದಿದ್ದು, ಈಬಾರಿಯೂ ರಾಗಿ ಖರೀದಿ ನಡೆದಿತ್ತು.ಇದರಲ್ಲಿ ಖರೀದಿ ಅವಧಿಯಲ್ಲಿ 8,600ಕ್ವಿಂಟಲ್ ರಾಗಿಯನ್ನು 526 ರೈತರಿಂದ ಪಡೆದಆಹಾರ ಇಲಾಖೆಯು ಮತ್ತೆ ಪಡಿತರ ಗ್ರಾಹಕರಿಗಾಗಿಹಂಚಲು ಇದೇ ರಾಗಿಯನ್ನು ಬಳಸಲು ಮುಂದಾಗಿದೆ.
ಸಿಎಂ ಮನೆ ಮುಂದೆ ಧರಣಿ ಎಚ್ಚರಿಕೆ: ಖರೀದಿಯಲ್ಲಿ139 ರೈತರಿಗೆ ಹಣ ಮಂಜೂರಾಗಿದ್ದು, ಉಳಿದ 344ರೈತರ ಹಣವನ್ನು ಇನ್ನೂ ಬಾಕಿಉಳಿಸಿಕೊಂಡಿದೆ. ಇದು ರೈತರಿಗೆ ಮಾಡಿದನ್ಯಾಯವಂತೂ ಅಲ್ಲ. ಇದನ್ನು ಬೇಗ ಬಿಡುಗಡೆಮಾಡಬೇಕೆಂದು ಶಾಸಕ ಎಂ.ವಿ.ವೀರಭದ್ರಯ್ಯಸರ್ಕಾರವನ್ನು ಒತ್ತಾಯಿಸಿದ್ದು, ಅರಸೀಕೆರೆ ಶಾಸಕಶಿವಲಿಂಗೇಗೌಡರು ರೈತರ ರಾಗಿ ಹಣ ಕೊಡದಿದ್ದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರುವುದಾಗಿಎಚ್ಚರಿಸಿದ್ದಾರೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲಾಕ್‌ಡೌನ್‌ದಿಂದ ಕೆಲಸ ತೊರೆದು ಸ್ವಗ್ರಾಮಗಳಿಗೆ ಬಂದಿರುವಬಡವರಿಗೆ 2 ಕೆ.ಜಿ. ಅಕ್ಕಿ ಮಾತ್ರ ಎಂದಿದ್ದು, ಬರಸಿಡಿಲುಬಡಿದಂತಾಗಿದೆ. ಇದು ಯಾವ ನ್ಯಾಯ? ನಮ್ಮಹಣದಿಂದ ನಮಗೆ ಅಕ್ಕಿ ಕೊಡಲು ಆಗಲ್ಲವೆಂದರೆ ಸರ್ಕಾರವೇಕೆ ಎಂಬ ನೋವಿನ ಆಕ್ರೋಶದ ನುಡಿಗಳು ಸರ್ಕಾರವನ್ನು ಕೇಳುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ವೈ.ವಿ.ರವಿ, ಸರ್ಕಾರದ ಕೆಲಸ ಮಾಡಲು ನಾವಿಲ್ಲಿದ್ದು, ಆದೇಶಗಳನ್ನು ಪಾಲಿಸುವುದಷ್ಟೆ ನಮ್ಮಕೆಲಸ. ಮುಂದಿನ ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಯುವವಿಶ್ವಾವಿದೆ ಎಂದಿದ್ದಾರೆ.
ರಾಜ್ಯ ಸರ್ಕಾರದ ಕೆಲವು ನೀತಿಗಳುನಿಜಕ್ಕೂ ಆಶ್ಚರ್ಯ ತಂದಿದೆ.ಯಾರು ಇವರಿಗೆಲ್ಲಕಾನೂನು ಹೇಳುತ್ತಾರೋ ತಿಳಿಯದು.ಒಬ್ಬ ಮನುಷ್ಯ 2ಕೆ.ಜಿ. ಅಕ್ಕಿಯಲ್ಲಿತಿಂಗಳು ಬದುಕಬೇಕೆಂದರೆ ಹೇಗೆ ಸಾದ್ಯ. ಇಂತಹ ತಲೆಕೆಟ್ಟನಿರ್ಧಾರಗಳಿಂದ ಸರ್ಕಾರ ಹಿಂದೆ ಸರಿಯಬೇಕು. ಹಸಿದ ಬಡವನಿಗೆ ಹೊಟ್ಟೆ ತುಂಬಾಅನ್ನ ನೀಡದ ಸರ್ಕಾರ ಸರ್ಕಾರವೇ ಅಲ್ಲ.
– ಎಂ.ವಿ.ವೀರಭದ್ರಯ್ಯ, ಶಾಸಕ
ಮಧುಗಿರಿ ಸತೀಶ್.