Advertisement
1. ರಾಗಿ ಪಾಯಸಬೇಕಾಗುವ ಸಾಮಗ್ರಿ: ರಾಗಿ-2 ಕಪ್, ತೆಂಗಿನತುರಿ-1 ಕಪ್, ಗಸಗಸೆ-3 ಚಮಚ, ತುರಿದ ಬೆಲ್ಲ-2 ಕಪ್, ಹಾಲು-3 ಕಪ್, ಏಲಕ್ಕಿ ಪುಡಿ-1/2 ಚಮಚ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಬಾದಾಮಿ-10
ಅರೆದು, ಶೋಧಿಸಿ ಇರಿಸಿ. ಬಾಣಲೆಯಲ್ಲಿ 1/2 ಕಪ್ ನೀರು ಕಾಯಿಸಿ, ಬೆಲ್ಲದ ತುರಿ ಸೇರಿಸಿ ಕರಗಿಸಿ. ಬೆಲ್ಲ ಕರಗಿದ ಮೇಲೆ ಹಾಲು, ಅರೆದ ರಾಗಿ ಮಿಶ್ರಣ ಹಾಕಿ ಕುದಿಸಿ, ಒಲೆಯಿಂದ ಕೆಳಗಿರಿಸಿ. ತಣಿದ ಮೇಲೆ ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ, ಬಾದಾಮಿ ತುಣುಕುಗಳನ್ನು ಸೇರಿಸಿದರೆ, ಪೌಷ್ಟಿಕವಾದ ರಾಗಿ ಪಾಯಸ ರೆಡಿ. 2. ರಾಗಿ ಪಡ್ಡು
ಬೇಕಾಗುವ ಸಾಮಗ್ರಿ: ರಾಗಿ -1 ಕಪ್, ಅಕ್ಕಿ-2 ಕಪ್, ಉದ್ದಿನಬೇಳೆ-1ಕಪ್, ಕಡಲೆಬೇಳೆ-2 ಚಮಚ, ತೊಗರಿ ಬೇಳೆ-2 ಚಮಚ, ಹೆಸರುಬೇಳೆ-2 ಚಮಚ, ಮೆಂತ್ಯೆ-1 ಚಮಚ, ಅಕ್ಕಿ ಹಿಟ್ಟು-3 ಚಮಚ, ಜೀರಿಗೆ ಪುಡಿ-4 ಚಮಚ, ಕತ್ತರಿಸಿದ ಹಸಿಮೆಣಸು-6, ಕತ್ತರಿಸಿದ ಕೊತ್ತಂಬರಿ ಸೊಪ್ಪು-4 ಚಮಚ, ಕತ್ತರಿಸಿದ ಈರುಳ್ಳಿ-1/2 ಕಪ್,
Related Articles
ಮಾಡುವ ವಿಧಾನ: ಎರಡು ಚಮಚ ಎಣ್ಣೆಗೆ, ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ಹುರಿದಿಡಿ. ರಾಗಿ, ಅಕ್ಕಿ, ಮೆಂತ್ಯೆ ಹಾಗೂ ಬೇಳೆಯನ್ನು ಆರು ಗಂಟೆ ನೆನೆಸಿ, ಬಸಿದು, ಅರೆದಿಡಿ. ಅದು ಹುದುಗಿದ ಮೇಲೆ, ಅಕ್ಕಿ ಹಿಟ್ಟು ಸೇರಿಸಿ ಕಲಸಿ. ಈ ಮಿಶ್ರಣಕ್ಕೆ ಹುರಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಜೀರಿಗೆ ಪುಡಿ, ಉಪ್ಪು ಸೇರಿಸಿ ಕಲಕಿ, ದೋಸೆ ಹಿಟ್ಟಿನ ಹದಕ್ಕೆ ತನ್ನಿ. ನಂತರ ಕಾಯಿಸಿದ ಪಡ್ಡಿನ ತವಾದ ಮೇಲೆ ಎಣ್ಣೆ ಸವರಿ, ಬಟ್ಟಲುಗಳಿಗೆ ಹಿಟ್ಟು ಹಾಕಿ ಎರಡೂ ಬದಿ ಬೇಯಿಸಿದರೆ, ಗರಿಗರಿಯಾದ ರಾಗಿ ಪಡ್ಡು, ಕಾಯಿ ಚಟ್ನಿಯೊಂದಿಗೆ ತಿನ್ನಲು ರೆಡಿ.
Advertisement
3. ರಾಗಿ ಮುತಿಯಾಬೇಕಾಗುವ ಸಾಮಗ್ರಿ: ರಾಗಿ ಹಿಟ್ಟು-2 ಕಪ್, ಗೋದಿ ಹಿಟ್ಟು-2 ಕಪ್, ಕಡಲೆ ಹಿಟ್ಟು-1 ಕಪ್, ಕತ್ತರಿಸಿದ ಮೆಂತ್ಯೆ ಸೊಪ್ಪು-1 ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು-4 ಚಮಚ, ಹಸಿಮೆಣಸಿನಕಾಯಿ 3-4, ಶುಂಠಿ ತುರಿ-1 ಚಮಚ, ಅಚ್ಚ ಖಾರದ ಪುಡಿ-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಜೀರಿಗೆ ಪುಡಿ-3 ಚಮಚ, ಎಣ್ಣೆ-1/4 ಕಪ್. ಒಗ್ಗರಣೆಗೆ-ಎಣ್ಣೆ-4 ಚಮಚ, ಸಾಸಿವೆ, ಇಂಗು-1/4 ಚಮಚ, ಎಳ್ಳು-3 ಚಮಚ, ಕರಿಬೇವಿನ ಎಸಳು-8. ಮಾಡುವ ವಿಧಾನ: ಒಗ್ಗರಣೆಯ ಸಾಮಗ್ರಿಗಳನ್ನು ಬಿಟ್ಟು, ಮಿಕ್ಕೆಲ್ಲ ಸಾಮಗ್ರಿಗಳನ್ನು ಸೇರಿಸಿ, ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿ. ಈ ಮಿಶ್ರಣದಿಂದ ಮೊಟ್ಟೆಯಾಕಾರದ ಉಂಡೆಗಳನ್ನು ಮಾಡಿ, ಹಬೆಯಲ್ಲಿ ಹತ್ತು ನಿಮಿಷ ಬೇಯಿಸಿ. ತಣಿದ ಮೇಲೆ, ಬಿಲ್ಲೆಯಾಕಾರದಲ್ಲಿ ಒಂದು ಇಂಚಿನ ಅಳತೆಯ ತುಂಡುಗಳನ್ನು ಮಾಡಿ ಇಡಿ.ನಂತರ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ-ಇಂಗು-ಎಳ್ಳು-ಕರಿಬೇವು ಹಾಕಿ ಒಗ್ಗರಣೆ ಮಾಡಿ, ಬೇಯಿಸಿದ ಬಿಲ್ಲೆಗಳ ಮೇಲೆ ಹಾಕಿ ಕೈಯಾಡಿದರೆ ರುಚಿಯಾದ ರಾಗಿ ಮುತಿಯಾ ತಯಾರು. 4. ರಾಗಿ ಹಿಟ್ಟಿನ ತಾಲಿಪಟ್ಟು
ಬೇಕಾಗುವ ಸಾಮಗ್ರಿ: ರಾಗಿ ಹಿಟ್ಟು-3 ಕಪ್, ಅಕ್ಕಿ ಹಿಟ್ಟು-2 ಕಪ್, ಕತ್ತರಿಸಿದ ಈರುಳ್ಳಿ-1/2 ಕಪ್, ಕತ್ತರಿಸಿದ ಹಸಿಮೆಣಸು-5, ತೆಂಗಿನತುರಿ-1/2 ಕಪ್, ಕತ್ತರಿಸಿದ ಕರಿಬೇವಿನ ಸೊಪ್ಪು-2 ಚಮಚ, ಕತ್ತರಿಸಿದ ಪುದಿನಾ ಸೊಪ್ಪು-1 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು-3 ಚಮಚ, ಜೀರಿಗೆ ಪುಡಿ-4 ಚಮಚ, ತುಪ್ಪ-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-4 ಚಮಚ. ಮಾಡುವ ವಿಧಾನ: ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಈರುಳ್ಳಿ, ಹಸಿಮೆಣಸು. ತೆಂಗಿನತುರಿ, ಕರಿಬೇವು, ಪುದೀನಾ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ತುಪ್ಪ, ಉಪ್ಪು ಬೆರೆಸಿ, ನೀರು ಹಾಕಿ ರೊಟ್ಟಿಯ ಹದಕ್ಕೆ ಕಲಸಿ. ಆ ಮಿಶ್ರಣದಿಂದ ಲಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂದು ಎಣ್ಣೆ ಸವರಿದ ತವಾದ ಮೇಲೆ, ರೊಟ್ಟಿಯ ಆಕಾರದಲ್ಲಿ ತಟ್ಟಿ. ತವಾ ಕಾಯಲಿರಿಸಿ, ಸ್ವಲ್ಪ ಎಣ್ಣೆ ಹಾಕಿ, ಎರಡೂ ಬದಿಯನ್ನು ಹದವಾಗಿ ಬೇಯಿಸಿ. ಗರಿಗರಿಯಾದ ರಾಗಿ ತಾಲಿಪಟ್ಟನ್ನು ಕಾಯಿ ಚಟ್ನಿಯೊಂದಿಗೆ ಸವಿಯಬಹುದು. 5. ರಾಗಿ ನಿಪ್ಪಟ್ಟು
ಬೇಕಾಗುವ ಸಾಮಗ್ರಿ: ರಾಗಿ ಹಿಟ್ಟು-2 ಕಪ್, ಅಕ್ಕಿ ಹಿಟ್ಟು-2 ಕಪ್, ಮೈದಾ ಹಿಟ್ಟು.-1 ಕಪ್, ಚಿರೋಟಿ ರವೆ-1/2 ಕಪ್, ತರಿಯಾಗಿ ಪುಡಿ ಮಾಡಿದ ಹುರಿಗಡಲೆ-2 ಚಮಚ, ತರಿಯಾಗಿ ಪುಡಿ ಮಾಡಿದ ಕಡಲೆಕಾಯಿ ಬೀಜ-3 ಚಮಚ, ಕತ್ತರಿಸಿದ ಈರುಳ್ಳಿ-2 ಚಮಚ, ಅಚ್ಚ ಖಾರದ ಪುಡಿ-2 ಚಮಚ, ಇಂಗು-1/2 ಚಮಚ, ತರಿಯಾಗಿ ಪುಡಿ ಮಾಡಿದ ಎಳ್ಳು-1/2 ಚಮಚ, ಉಪ್ಪು, ವನಸ್ಪತಿ ಅಥವಾ ತುಪ್ಪ-3 ಚಮಚ, ಕರಿಬೇವಿನ ಎಲೆ-10. ಮಾಡುವ ವಿಧಾನ: ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ, ಹುರಿಗಡಲೆ, ಕಡಲೆಕಾಯಿ ಬೀಜದ ಪುಡಿಗಳನ್ನು ಸೇರಿಸಿ. ಈ ಮಿಶ್ರಣಕ್ಕೆ ಇಂಗು, ಖಾರದ ಪುಡಿ, ಎಳ್ಳು, ವನಸ್ಪತಿ, ಈರುಳ್ಳಿ, ಕರಿಬೇವು, ಉಪ್ಪು ಬೆರೆಸಿ, ನೀರಿನೊಂದಿಗೆ ವಡೆಯ ಹಿಟ್ಟಿನ ಹದಕ್ಕೆ ಗಟ್ಟಿಯಗಿ ಕಲಸಿ, ವಡೆಯಾಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಕರಿದರೆ ರಾಗಿ ನಿಪ್ಪಟ್ಟು ರೆಡಿ. -ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು