ಮಾಸ್ತಿ: ತೀವ್ರ ಬರಗಾಲಕ್ಕೆ ತುತ್ತಾಗಿದ್ದರಿಂದ ಹೊಲ ಗಳಲ್ಲಿ ರಾಗಿ ಬೆಳೆ ಸಿರಿಧಾನ್ಯ ಬೆಳೆಗಳಿಲ್ಲದೆ,ಕಂಗಾಲಾಗಿದ್ದ ರೈತರ ಪಾಲಿಗೆ ವರದಾನವಾಗಿ ಈ ಬಾರಿ ಸುರಿದ ಮಳೆಯಿಂದಾಗಿ ಉತ್ತಮ ಇಳುವರಿ ರಾಗಿ ಬೆಳೆದಿದೆ. ಆದರೆ, ಕಟಾವು ಮಾಡಲು ಸೂಕ್ತ ವಾತಾವರಣ ಹಾಗೂ ಕೂಲಿ ಕಾರ್ಮಿಕರ ಕೊರತೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರುವಂತಿಲ್ಲ ಎಂಬಂತಾಗುತ್ತಿದೆ.
ರಾಗಿ ಬೆಳೆ ಕಟಾವು ಮಾಡಲು ಸೂಕ್ತ ವಾತಾವರಣ ಹಾಗೂ ಕೂಲಿ ಕಾರ್ಮಿಕರ ಕೊರತೆ ಸತತ ಬರಗಾಲದಿಂದಾಗಿ ರಾಗಿ, ಅವರೆ, ಅಲಸಂಧಿ, ನವಣೆಸೇರಿದಂತೆ ಸಿರಿಧಾನ್ಯಗಳ ಬೆಳೆಗಳಿಲ್ಲದೇ ರೈತರು ಆತಂಕಕ್ಕೆ ಒಳಗಾಗಿದ್ದರು. ಜಾನುವಾರುಗಳ ಮೇವಿಗಾಗಿ ರೈತರು ಪರದಾಡುವಂತಾಗಿತ್ತು.
ನಿಟ್ಟುಸಿರು ಬಿಟ್ಟಿದ್ದರು: ಕೋಲಾರ ಜಿಲ್ಲೆಯ ಹಲವು ಬೆಳೆಗಳಲ್ಲಿ ಒಂದಾದ ರಾಗಿ ಬೆಳೆಯು ಪ್ರಮುಖ ವಾಗಿದ್ದು, ಈ ಬಾರಿ ವರುಣನ ಕೃಪೆಯಿಂದ ಉತ್ತಮಮಳೆ ಸುರಿದಿದೆಯಾದರೂ ಕೆರೆ-ಕುಂಟೆಗಳು ತುಂಬುವಷ್ಟು ಮಳೆಯಾಗಿಲ್ಲ. ಆದರೂ ಈ ಬಾರಿ ಸುರಿದ ಉತ್ತಮ ಮಳೆಯಿಂದ ರಾಗಿ ಬೆಳೆಯಿಂದಸಮಾಧಾನದಿಂದ ನಿಟ್ಟುಸಿರು ಬಿಟ್ಟಿದ್ದರು. ಕಾರ್ಮಿಕರು ಸಿಗುತ್ತಿಲ್ಲ: ಈ ಬಾರಿ ರಾಗಿ ಬೆಳೆಯು ಹುಲುಸಾಗಿ ಬೆಳೆದಿದ್ದು, ಕಟಾವಿಗೆ ಬಂದಿದೆ. ಎಲ್ಲಾ ಕಡೆ ರಾಗಿ ಬೆಳೆ ಕಟಾವು ಮಾಡುವುದು ಒಂದೇಸಮಯವಾದ್ದರಿಂದ ಕೂಲಿ ಕಾರ್ಮಿಕರ ಕೊರತೆ ಹಾಗೂ ಕಾರ್ಮಿಕರಕೂಲಿಯೂ ಹೆಚ್ಚಾಗಿದೆ. ಒಬ್ಬರಿಗೆದಿನಕ್ಕೆ 350 ರಿಂದ 500 ರೂ.ವರೆಗೂ ನೀಡಬೇಕಾಗಿದೆ.
ಕೆಲವು ಕಡೆ ಕೂಲಿ ಕಾರ್ಮಿಕರು ಒಪ್ಪಂದವೂ ಸಹ ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಇತ್ತೀಚೆಗೆ ಕಾರ್ಖಾನೆಗಳು ಹೆಚ್ಚಾಗಿರುವುದರಿಂದ ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಕಾರ್ಖಾನೆಗಳತ್ತ ಮುಖ ಮಾಡುತ್ತಿರು ವುದರಿಂದಕೃಷಿಚಟುವಟಿಕೆಗಳಿಗೆಕೂಲಿಕಾರ್ಮಿಕರೇ ಸಿಗುತ್ತಿಲ್ಲ. ಇದರಿಂದ ಕೂಲಿ ಕಾರ್ಮಿಕರ ಕೊರತೆಯುಂಟಾಗಿದೆ.
ರೈತರ ಪರದಾಟ: ಮಾಸ್ತಿ ಭಾಗವು ತಮಿಳುನಾಡು ಗಡಿಗೆ ಹೊಂದಿಕೊಂಡಿರುವುದರಿಂದ ರಾಗಿ ಬೆಳೆ ಕಟಾವು ಮಾಡಲು ತಮಿಳುನಾಡು ಕಡೆಯಿಂದ ಅಥವಾ ಬಂಗಾರಪೇಟೆ ತಾಲೂಕಿನ ಬೂದಿಕೊಟೆ, ಕಾಮಸಮುದ್ರ ಸೇರಿದಂತೆ ಬೇರೆ ಕಡೆಯಿಂದ ಕೂಲಿ ಕಾರ್ಮಿಕರನ್ನು ಕರೆತಂದು ಹೆಚ್ಚಿನ ಕೂಲಿ ನೀಡಿ ಕಟಾವು ಮಾಡಿಸಿಕೊಳ್ಳುವ ಅನಿವಾರ್ಯತೆ ಬಂದೊದಗಿದೆ. ಆಧುನಿಕ ತಂತ್ರಜ್ಞಾನ ಹೆಚ್ಚಾದಂತೆಲ್ಲಾ ಕೃಷಿಯಂತ್ರೋಪಕರಣಗಳುಬಂದಿದ್ದರೂಸಮಯಕ್ಕೆ ಸರಿಯಾಗಿ ಸಿಗದ ಕಾರಣ ರೈತರು ಪರದಾಡುವಂತಾಗಿದೆ.
ಗುರುವಾರದಿಂದ ಹಲವು ಕಡೆ ಶುರುವಾಗಿರುವ ಮೋಡ ಕವಿದ ವಾತಾವರಣ ಹಾಗೂ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಕಟಾವಿಗೆ ಬಂದಿರುವ ರಾಗಿ ಬೆಳೆಯನ್ನು ಕಟಾವು ಮಾಡಲ ಸಮಯ ಸಿಗದ ಕಾರಣ ರಾಗಿ ಬೆಳೆ ಹೊಲಗಳಲ್ಲೇನೆಲಕ್ಕುರುಳುತ್ತಿದೆ. ಕೆಲವು ಕಡೆ ಕಟಾವು ಮಾಡಿಶೇಖರಣೆ ಮಾಡಿದ್ದಾರೆ. ಇದೇ ರೀತಿಯಾಗಿ ಮಳೆಮುಂದುವರಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತೆ ಈ ಬಾರಿ ರಾಗಿ ಬೆಳೆ.
ರಾಗಿ ಬೆಳೆಯನ್ನೇ ಪ್ರಮುಖಬೆಳೆಯ ನ್ನಾಗಿಸಿಕೊಂಡು ಬೆಳೆಯುತ್ತಿರುವ ರೈತರಿಗೆ ಬೆಳೆಕಟಾವು ಮಾಡಲು ಯಂತ್ರೋಪಕರಣಗಳನ್ನುಕೃಷಿ ಇಲಾಖೆ ಒದಗಿಸುತ್ತಿಲ್ಲ.ಖಾಸಗಿಯವರು ಹೇಳಿದಷ್ಟು ಹಣ ಕೊಟ್ಟುಕಟಾವು ಮಾಡಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಕೃಷಿ ಇಲಾಖೆ ಬೆಳೆಕಟಾವಿಗೆಯಂತ್ರಗಳನ್ನು ಒದಗಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು.
–ಹರೀಶ್, ರಾಗಿ ಬೆಳೆದು ನಷ್ಟಕ್ಕೊಳಗಾಗಿರುವ ತಿಪ್ಪಸಂದ್ರದ ರೈತ