Advertisement

ಮಿಲ್ಖಾ ನೀನು ಓಡಲಿಲ್ಲ, ಅಕ್ಷರಶಃ ಹಾರಿದೆ!

12:40 AM Jun 20, 2021 | Team Udayavani |

1957ರ ವೇಳೆಗೆ, ಒಬ್ಬ ಕ್ರೀಡಾಪಟುವಾಗಿ ಒಳ್ಳೆಯ ಹೆಸರು ಸಂಪಾದಿಸಿದ್ದೆ. ಪ್ರತೀ ಕ್ರೀಡಾಕೂಟದಲ್ಲೂ ಮೊದಲಿಗನಾಗಿ ಗುರಿ ತಲುಪುತ್ತಿದ್ದೆ. ಹಿಂದಿನ ದಾಖಲೆಗಳನ್ನು ಮುರಿಯುತ್ತಿದ್ದೆ. ಮಿಲ್ಖಾ ಸಿಂಗ್‌ ಓಡುವುದಿಲ್ಲ, ಹಾರುತ್ತಾನೆ! ಎಂದು ಜನರು ಮೆಚ್ಚುಗೆಯಿಂದ ಮಾತಾಡತೊಡಗಿದರು. ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯಿತು. 400 ಮೀ. ಮತ್ತು 200 ಮೀ. ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ನಾನು ಆ ಎರಡೂ ವಿಭಾಗದಲ್ಲಿ ಕ್ರಮವಾಗಿ 47.5 ಸೆಕೆಂಡ್‌ ಹಾಗೂ 21.3 ಸೆಕೆಂಡ್‌ಗಳಲ್ಲಿ ಗುರಿಮುಟ್ಟುವ ಮೂಲಕ ಹೊಸ ದಾಖಲೆ ಬರೆದಿದ್ದೆ. 1958ರಲ್ಲಿ ಕಟಕ್‌ನಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯಿತು. ಈ ಸಂದರ್ಭದಲ್ಲಿ ಅಮೆರಿಕದ ಡಾ| ಹೊವಾರ್ಡ್‌ ನನ್ನ ಕೋಚ್‌ ಆಗಿದ್ದರು. 200 ಮೀ. ಮತ್ತು 400 ಮೀ. ಓಟದ ಸ್ಪರ್ಧೆಗಳಲ್ಲಿ ಪದಕ ಗೆಲ್ಲಲು ಯಾವ ಬಗೆಯ ಕಸರತ್ತು ಮಾಡಬೇಕು, ಓಡುವಾಗ ಅಂತಿಮ ಕ್ಷಣದಲ್ಲಿ ಮುನ್ನುಗ್ಗುವಾಗ ಯಾವ ತಂತ್ರ ಅನುಸರಿಸಬೇಕು ಎಂಬುದನ್ನು ಹೊವಾರ್ಡ್‌ ಹೇಳಿಕೊಟ್ಟರು. ಅದನ್ನು ಶ್ರದ್ಧೆಯಿಂದ ಪಾಲಿಸಿದೆ. ಪರಿಣಾಮ, ಕಟಕ್‌ನಲ್ಲಿ, 400ಮೀ. ಮತ್ತು 200 ಮೀ. ಓಟದ ಸ್ಪರ್ಧೆಯನ್ನು ಕ್ರಮವಾಗಿ 46. 2 ಹಾಗೂ 21.2 ಸೆಕೆಂಡ್‌ಗಳಲ್ಲಿ ಕ್ರಮಿಸಲು ಸಾಧ್ಯವಾಯಿತು.

Advertisement

ಅವತ್ತಿನ ಕಾಲಕ್ಕೆ ಇದು ಮತ್ತೂಂದು ಹೊಸ ದಾಖಲೆ. ಅರೆ, ನಾನು ಇಷ್ಟು ವೇಗವಾಗಿ ಓಡಿದೆನಾ ಎಂಬ ಅನುಮಾನ ನನಗೇ ಬಂದದ್ದೂ ನಿಜ. ಅದನ್ನು ಕ್ರೀಡಾಕೂಟದ ಆಯೋಜಕರಿಗೂ ಹೇಳಿದೆ. ಅವರು ಮತ್ತೂಮ್ಮೆ ಟ್ರ್ಯಾಕ್‌ ರೆಕಾರ್ಡ್‌ ಚೆಕ್‌ ಮಾಡಿ, ನೀವು ಚಿರತೆಯಂತೆ ಓಡಿರುವುದು ನಿಜ, ಎಂದು ನಕ್ಕರು. ನನ್ನ ಈ ಹೊಸ ದಾಖಲೆಯ ಸಂಗತಿ, ಏಷ್ಯಾ ಖಂಡದ ಎಲ್ಲ ದೇಶಗಳಲ್ಲಿಯೂ ಸುದ್ದಿಯಾಯಿತು. ಅದೇ ಸಂದರ್ಭಕ್ಕೆ ಜಪಾನಿನ ಟೋಕಿಯೊದಲ್ಲಿ ಏಷ್ಯನ್‌ ಗೇಮ್ಸ… ಕ್ರೀಡಾಕೂಟ ಆರಂಭವಾಯಿತು. 400 ಮತ್ತು 200 ಮೀ. ಓಟದ ಸ್ಪರ್ಧಿಯಾಗಿ ನಾನೂ ಭಾಗವಹಿಸಿದೆ. ಟೋಕಿಯೊದ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ವರದಿಗಾರರು ಮತ್ತು ಛಾಯಾಗ್ರಾಹಕರ ಗುಂಪು ನಮ್ಮನ್ನು ಸುತ್ತುವರಿಯಿತು. ಎಲ್ಲರದೂ ಒಂದೇ ಪ್ರಶ್ನೆ: “ಯಾರವರು ಮಿಲ್ಖಾ ಸಿಂಗ್‌? ಅವರಿಗೆ ರನ್‌ ಮಷಿನ್‌ ಅಂತಾನೇ ಹೆಸರಿದೆಯಂತೆ?’ ನಮ್ಮ ಯೋಗಕ್ಷೇಮದ ಹೊಣೆ ಹೊತ್ತಿದ್ದ ಅಶ್ವಿ‌ನಿ ಕುಮಾರ್‌ ತತ್‌ಕ್ಷಣವೇ ನನ್ನತ್ತ ಕೈ ತೋರಿಸಿ, ಅವರೇ ಮಿಲ್ಖಾ ಅನ್ನುತ್ತಿದ್ದಂತೆಯೇ, ಕೆಮರಾಮನ್‌ಗಳು ಸ್ಪರ್ಧೆಗೆ ಬಿದ್ದಂತೆ ಫ್ಲಾಶ್‌ಲೈಟ್‌ ಕ್ಲಿಕ್ಕಿಸಿದರು. ಅಲ್ಲಿ ನಾನು ಚಿಗರೆಯಂತೆ ಓಡಿದೆ. 400 ಮೀ. ಓಟವನ್ನು ಕೇವಲ 45.6 ಸೆಕೆಂಡ್‌ಗಳಲ್ಲಿ ಕ್ರಮಿಸಿ ಹೊಸದೊಂದು ದಾಖಲೆ ಬರೆದೆ. ಚಿನ್ನದ ಪದಕಕ್ಕೆ ಕೊರಳೊಡ್ಡುವಾಗಲೇ ಅಮ್ಮನ ಜೋಗುಳದಂತೆ ಜನಗಣಮನ… ಕೇಳಿಸಿತು.

ಉಹೂಂ, ಈ ಗೆಲುವಿನಿಂದ ಮೈಮರೆಯುವಂತಿರಲಿಲ್ಲ. ಕಾರಣ, ಮರುದಿನವೇ 200 ಮೀ. ಓಟದ ಸ್ಪರ್ಧೆಯಿತ್ತು. ಈ ಸ್ಪರ್ಧೆಯಲ್ಲಿ ಪಾಕಿಸ್ಥಾನದ ಅಬ್ದುಲ್‌ ಖಲೀಕ್‌ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದರು. ಅವರಿಗೆ ನನ್ನನ್ನು ಪರಿಚಯಿಸಿದ ವ್ಯಕ್ತಿ; “ಖಲೀಕ್‌, ಈ ಮಿಲ್ಖಾರಿಂದ ನಿಮಗೆ ತೀವ್ರ ಸ್ಪರ್ಧೆ ಎದುರಾಗಬಹುದು, ಹುಷಾರು’ ಎಂದರು. ಖಲೀಕ್‌ ತತ್‌ಕ್ಷಣವೇ- ‘ಇಂಥಾ ಚಿಲ್ಲರೆ ಓಟಗಾರರು ನನಗ್ಯಾವ ಲೆಕ್ಕ? ಇಂಥಾ ಕಾಟೂìನ್‌ಗಳನ್ನು ಬೇಕಾದಷ್ಟು ನೋಡಿದ್ದೀನಿ’ ಅಂದರು! 200 ಮೀ. ಓಟದಲ್ಲಿ ಪಾಲ್ಗೊಂಡಾಗ ಮಿಲ್ಖಾ ಚಿರತೆಯಂಥ ಓಟಗಾರ, ಚಿಲ್ಲರೆ ಓಟಗಾರನಲ್ಲ ಎಂದು ಖಲೀಕ್‌ಗೆ ತೋರಿಸಬೇಕು ಎಂದುಕೊಂಡೆ. ಹೆಚ್ಚು ಕಡಿಮೆ, ಖಲೀಕ್‌ ಮತ್ತು ನಾನು ಒಂದೇ ಸಮಯಕ್ಕೆ ಗುರಿ ತಲುಪಿದೆವು. “ನಾಲ್ಕು ಸೆಕೆಂಡ್‌ ಮೊದಲು ಗುರಿ ತಲುಪಿರುವ ಮಿಲ್ಖಾಗೆ ಚಿನ್ನದ ಪದಕ’ ಎಂದು ಘೋಷಿಸಲಾಯಿತು. ಮುಂದೊಮ್ಮೆ ಪಾಕಿಸ್ಥಾನದಲ್ಲೇ ನಡೆದ ಇಂಡೋ-ಪಾಕ್‌ ಕ್ರೀಡಾಕೂಟದಲ್ಲಿ ಖಲೀಕ್‌ನ ಎದುರು ಮತ್ತೆ ಗೆದ್ದೆ. ಅವತ್ತು ನನ್ನ ಓಟ ನೋಡಿದ ಪಾಕ್‌ನ ರಾಷ್ಟ್ರಾಧ್ಯಕ್ಷರಾಗಿದ್ದ ಅಯೂಬ್‌ ಖಾನ್‌; ಮಿಲ್ಖಾ, ನೀನಿವತ್ತು ಓಡಲಿಲ್ಲ. ಅಕ್ಷರಶಃ ಹಾರಿಬಿಟ್ಟೆ ಎಂದು ಅಭಿನಂದಿಸಿದರು. ನನ್ನ ಹೆಸರಿನೊಂದಿಗೆ’ ಫ್ಲೈಯಿಂಗ್‌ ಸಿಕ್ಖ್’ ಎಂಬ ವಿಶೇಷಣ ಅಂಟಿಕೊಂಡಿದ್ದೇ ಆಗ…

(ಮಿಲ್ಖಾ ಸಿಂಗ್‌ ಅವರ The Race of My Life ಪುಸ್ತಕದಿಂದ ಆಯ್ದುಕೊಂಡ ಬರಹ)

Advertisement

Udayavani is now on Telegram. Click here to join our channel and stay updated with the latest news.

Next