ಮಂಡ್ಯ: ಮನ್‌ಮುಲ್‌ನಲ್ಲಿ ನಡೆದಿರುವಹಾಲು-ನೀರು ಹಗರಣವನ್ನು ರಾಷ್ಟ್ರೀಯ ಡೇರಿಅಭಿವೃದ್ಧಿ ಮಂಡಳಿಯ ತನಿಖೆಗೆ ವಹಿಸಬೇಕುಎಂದು ಮನ್‌ಮುಲ್ ಸಂಸ್ಥಾಪಕ ಅಧ್ಯಕ್ಷನರಸಿಂಹೇಗೌಡ ಒತ್ತಾಯಿಸಿದರು.
ಹಾಲು-ನೀರು ಬೆರೆಸಿ ಹಾಲು ಸರಬರಾಜುಮಾಡಿದ್ದರಿಂದ ಒಕ್ಕೂಟಕ್ಕೆ ಹಾಗೂ ಗ್ರಾಹಕರಿಗೆ ನಷ್ಟಉಂಟಾಗಿದೆ. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಅಲ್ಲದೆ, ಇದರ ಬಗ್ಗೆ ದೊಡ್ಡ ಮಟ್ಟದಹೋರಾಟ ಮಾಡಲು ಎಲ್ಲ ಹಿರಿಯ ಸಹಕಾರಿಗಳುಒಗ್ಗೂಡಲಿದ್ದೇವೆ. ಇದರ ಜತೆಗೆ ಹಾಲು ಉತ್ಪಾದಕರನ್ನು ಕರೆದು ಹೋರಾಟ ರೂಪಿಸಲಾಗುವುದುಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಲು-ನೀರು ಬೆರೆಸಿದ ಮೊದಲ ದಿನವೇಇದನ್ನು ಅ ಧಿಕಾರಿಗಳು ಕಂಡು ಹಿಡಿಯಬಹುದಾಗಿತ್ತು. ಆದರೆ ಇದರಲ್ಲಿ ಆಡಳಿತ ಮಂಡಳಿ ಹಾಗೂಅ ಧಿಕಾರಿಗಳು ವಿಫಲರಾ ಗಿದ್ದಾರೆ. ಹಾಲಿನ ಘನಾಂಶಶೇ.8.5ರಷ್ಟು ಕಡಿಮೆ ಬಂದರೆ ಹಾಲಿನ ದರಕಡಿತಗೊಳಿಸಲಾ ಗುತ್ತದೆ. ಆದರೆ ಇದು ಯಾವುದೂಇಲ್ಲಿ ಪಾಲನೆ ಯಾಗಿಲ್ಲ. ಬಿಎಂಸಿಯಿಂದ ಪರೀಕ್ಷೆಮಾಡಿ ಕಳುಹಿ ಸುತ್ತಿದ್ದ ಅಧಿ ಕಾರಿಗಳು, ಲಾರಿ ವಾಹನಚಾಲ ಕರು, ವ್ಯವಸ್ಥಾಪಕರು, ಆಡಳಿತ ಮಂಡಳಿಸಂಪೂ ರ್ಣವಾಗಿ ವಿಫಲವಾಗಿದೆ ಎಂದರು.ಮೆಗಾಡೇರಿ ಸ್ಥಾಪಿಸಲು ಪ್ರಾರಂಭ ಮಾಡಿದ್ದು,ನಿಗದಿತ ಅವ ಧಿಯಲ್ಲಿ ಪೂರ್ಣಗೊಂಡಿಲ್ಲ.ನಿಯಮಾವಳಿ ಪ್ರಕಾರ ಒಂದೂವರೆ ವರ್ಷದೊಳಗೆಪೂರ್ಣಗೊಳಿಸಬೇಕು. ಇದರಿಂದ ಒಕ್ಕೂಟಕ್ಕೆತುಂಬಲಾರದ ನಷ್ಟವುಂಟಾಗಿದೆ. ಇದರಿಂದ ಅವರುವಿ ಧಿಸಿದ ದಂಡದ ಹಣ ಕಟ್ಟಿಕೊಡಬೇಕು.
ಒಕ್ಕೂಟದಲ್ಲಿ ದಾಸ್ತಾನಿರುವ ಬೆಣ್ಣೆ ಮತ್ತು ಹಾಲಿನಪುಡಿ ಮೇಲಿನ ದರ ನಿಗದಿ ಮಾಡುವಾಗಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ದರದಲ್ಲಿಯಾವುದು ಕಡಿಮೆಯೋ ಅದರಂತೆ ದಾಸ್ತಾನಿನಮೌಲ್ಯ ನಿರ್ಧರಿಸಬೇಕಾಗುತ್ತದೆ. ಆದರೆ ಅದೂಪಾಲನೆಯಾಗದೆ ಒಕ್ಕೂಟಕ್ಕೆ ನಷ್ಟ ಉಂಟಾಗುತ್ತದೆ.ಇದರಿಂದ ಜಿಲ್ಲೆಯ ಲಕ್ಷಾಂತರ ಜನರ ಆರ್ಥಿಕ ಸ್ಥಿತಿದುರ್ಬಲವಾಗುತ್ತದೆ ಎಂದು ಹೇಳಿದರು.ಹಗರಣಕ್ಕೆ ಸಂಬಂ ಧಿಸಿದಂತೆ ಪಿ ಅಂಡ್ ಐನೌಕರರನ್ನು ಅಮಾನತುಗೊಳಿಸಲಾ ಗಿದೆ. ಆದರೆ,ಪ್ರತಿದಿನ ಹಾಲಿನ ಗುಣ ಮಟ್ಟ ಕಂಡು ಹಿಡಿಯಲುಅ ಧಿಕಾರಿಗಳು ಇದ್ದು, ಅವರು ಇದರ ಬಗ್ಗೆತಿಳಿಸಿದ್ದಾರೆಯೇ, ಇದಕ್ಕೆ ಯಾವ ಕ್ರಮಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದರು.