Advertisement

ಹಾಲು ಖರೀದಿ ದರದಲಿ 2 ರೂ.ಹೆಚ್ಚಳ

05:24 PM Feb 05, 2021 | Team Udayavani |

ಬೆಂಗಳೂರು:ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್‌)ರೈತರಿಂದ ಹಾಲು ಖರೀದಿ ಮಾಡುವ ದರವನ್ನು ಪ್ರತಿ  ಲೀಟರ್‌ ಗೆ 2ರೂ.ಹೆಚ್ಚಿಸಲು ತೀರ್ಮಾನಿಸಿದೆ.ಫೆ.6ರಿಂದ ಇದು ಜಾರಿಗೆ ಬರಲಿದೆ ಎಂದು ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದ್ದಾರೆ.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಸಹಕಾರ ಹಾಲು ಒಕ್ಕೂಟ ವ್ಯಾಪ್ತಿಗೆ ಸಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳು ಸೇರಿವೆ. ಈ ಭಾಗದಲ್ಲಿ ಸುಮಾರು 1.5ಲಕ್ಷ ರೈತರಿದ್ದು ಅವೆರೆಲ್ಲರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.

ಹೈನುಗಾರಿಕೆ ಉತ್ತೇಜಿಸುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಮೂಲ್‌ ಹಾಲು ಉತ್ಪಾದಕರಿಂದ ಪ್ರತಿ ಲೀಟರ್‌ಗೆ 25 ರೂ.40 ಪೈಸೆಗಳಂತೆ ಹಾಲು ಖರೀದಿ ಮಾಡುತ್ತಿದೆ. ಈಗ 2 ರೂ.ಹೆಚ್ಚಳದಿಂದ ಪ್ರತಿ ಲೀಟರ್‌ಗೆ 27 ರೂ. 40ಪೈಸೆ ರೈತರಿಗೆ ದೊರೆಯಲಿದೆ ಎಂದು ಹೇಳಿದರು.

ಚೇತರಿಕೆ ಪ್ರಮಾಣ ಹೆಚ್ಚಳ: ಕೋವಿಡ್‌ ಸಂದರ್ಭದಲ್ಲಿ ಬಮೂಲ್‌ ಸ್ವಲ್ಪಮಟ್ಟಿನ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು.ಆ ವೇಳೆ ಸರ್ಕಾರ ಕೂಡ ಬಮೂಲ್‌ ನೆರವಿಗೆ ಬಂದು ಹಾಲು ಖರೀದಿ ಮಾಡಿ ಕೋವಿಡ್‌ ಸಂಕಷ್ಟದಲ್ಲಿದ್ದ ಜನರಿಗೆ ಹಂಚಿಕೆ ಮಾಡಿತು. ಆದರೆ  ಈಗ ಒಕ್ಕೂಟ ಚೇತರಿಕೆಯತ್ತ ಮರಳಿದೆ. ಹಾಲಿ ಪೌಂಡರ್‌,ಗಿಣ್ಣು ,ಬೆಣ್ಣೆ ಸೇರಿದಂತೆ ಹಾಲಿನ ಉಪ ಉತ್ಪನ್ನಗಳು ಕೂಡ ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ. ಅದರ ಲಾಭವನ್ನು ರೈತರಿಗೆ ನೀಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಸಹಕಾರ ಹಾಲು ಒಕ್ಕೂಟ ಪ್ರತಿ ದಿನ ಸುಮಾರು 16ಲಕ್ಷ ಲೀಟರ್‌ ಹಾಲು ಉತ್ಪಾದಿಸುತ್ತದೆ. ಇದರಲ್ಲಿ ಸುಮಾರು 10 ಲಕ್ಷ ಲೀಟರ್‌ ನಿತ್ಯ ಮಾರಾಟವಾಗುತ್ತದೆ. ಉಳಿದ ಹಾಲನ್ನು ಮೊಸರು, ಬೆಣ್ಣೆ, ಗಿಣ್ಣು ಮತ್ತು ಹಾಲಿನ ಪೌಂಡರ್‌ ಸೇರಿದಂತೆ  ಇನ್ನಿತರ ನಂದಿನ ಉತ್ಪನ್ನಗಳ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ ಎಂದರು.

Advertisement

ಕನಕಪುರ ಘಟಕದಿಂದ ವಿದೇಶಕ್ಕೆ ರಪು:ವಿದೇಶಗಳಿಗೆ ನಂದಿ ಹಾಲು ಉತ್ಪನ್ನಗಳನ್ನು ರಫ್ತು ಮಾಡಲು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಕನಕಪುರ ಹಾಲು ಉತ್ಪಾದಕ ಘಟಕಕ್ಕೆ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಅಧಿಕೃತ ರಫ್ತು ಪರವಾನಿಗೆ ನೀಡಿದೆ. ಇದು ಹೆಮ್ಮೆಯ ವಿಚಾರವಾಗಿದೆ ಎಂದು ಬಮೂಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ. ಸ್ವಾಮಿ ಹೇಳಿದರು.

ಇದನ್ನೂ ಓದಿ :ಮಾದರಿ ಕ್ಷೇತ್ರವನ್ನಾಗಿಸಲು ಶ್ರಮ: ಶಾಸಕ ತಮ್ಮಣ್ಣ

ಕನಕಪುರ ಹಾಲು ಉತ್ಪಾಧಕ ಘಟಕದಿಂದ ಗಿಣ್ಣು,ಬೆಣ್ಣೆ, ತುಪ್ಪ, ಹಾಲಿನ ಪುಡಿ ಸೇರಿದಂತೆ ಇನ್ನಿತರ ನಂದಿನಿ ಉತ್ಪನ್ನಗಳನ್ನು ಬೇಡಿಕೆಗೆ ಇರುವ ದೇಶಗಳಿಗೆ ರಫ್ತು ಮಾಡಲಾಗುವುದು. ಪ್ರಸಕ್ತ ಕನಕಪುರ ಹಾಲಿನ ಘಟಕದಲ್ಲಿ ಪ್ರತಿ ದಿನ 6 ಲಕ್ಷ ಲೀಟರ್‌ ಹಾಲನ್ನು ಪರಿವರ್ತಿಸಿ, ಗುಣಮಟ್ಟದ ಹಾಲಿನ ಪುಡಿ ತಯಾರು ಮಾಡುವ ಘಟಕನ್ನು 220 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಆಲೋಚನೆಯಿದೆ.ಹಾಗೆಯೇ 20 ಕೋಟಿ ರೂ .ವೆಚ್ಚದಲ್ಲಿ ಗೋದಾಮು ನಿರ್ಮಿಸಲಾಗುವುದು ಎಂದರು. ಬಮೂಲ್‌ ಮಾಜಿ ಅಧ್ಯಕ್ಷ ಆಂಜನಪ್ಪ ,ಹರೀಶ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next