Advertisement

ಹಾಲಿನ ದರ ಇಳಿಕೆಯಿಂದ ರೈತರಿಗೆ ತೀವ್ರ ನಷ್ಟ

12:22 PM Jul 10, 2018 | Team Udayavani |

ಬಂಗಾರಪೇಟೆ: ಕೋಲಾರ ಜಿಲ್ಲೆಯಲ್ಲಿ ಹೈನೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿರುವ ರೈತಾಪಿ ವರ್ಗಕ್ಕೆ ಹಾಲಿನ ಬೆಲೆ 2 ರೂ ಕಡಿಮೆ ಮಾಡಿರುವುದರಿಂದ ತೀವ್ರ ನಷ್ಟ ಅನುಭವಿಸುವಂತಾಗಿದೆ. ರಾಜ್ಯ ಸರ್ಕಾರವು ಈ ಕೂಡಲೇ ಹಾಲಿನ ಬೆಲೆಯನ್ನು ಕಡಿಮೆ ಮಾಡದಂತೆ ಕ್ರಮವಹಿಸಬೇಕಾಗಿದೆ ಎಂದು ಕರ್ನಾಟಕ ರೈತ ಸೇನೆಯ ತಾಲೂಕು ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್‌ ಒತ್ತಾಯಿಸಿದ್ದಾರೆ.

Advertisement

ಬಂಗಾರಪೇಟೆ ಪಟ್ಟಣದ ಕೋಚಿಮುಲ್‌ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ.ವೆಂಕಟರಮಣರಿಗೆ ಮನವಿ ನೀಡಿ ಮಾತನಾಡಿದ ಅವರು, ಬಂಗಾರಪೇಟೆ ತಾಲೂಕಿನಲ್ಲಿ ಕಳೆದ 10 ವರ್ಷಗಳ ಬರಗಾಲದ ನಡುವೆಯೂ ಹೈನೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ರಾಜ್ಯಸರ್ಕಾರದ ನಡೆಯಿಂದ ರೈತರಿಗೆ ತೊಂದರೆಯಾಗಲಿದೆ ಎಂದು ಹೇಳಿದರು.

ಪ್ರತಿಯೊಬ್ಬ ರೈತರು ಹಸುಗಳ ಸಾಕಾಣಿಕೆಗೆ ಮುಖ್ಯವಾಗಿ ಮೇವು ಜೊತೆಗೆ ಹಿಂಡಿ, ಬೂಸಾ ಮತ್ತು ಡೈರಿಯಿಂದ ಸಿಗುವ ಹಿಂಡಿ ಪದಾರ್ಥಗಳ ಬೆಲೆ ಕಡಿಮೆಯಾಗದೆಯೇ ಏಕಾಎಕಿಯಾಗಿ ರೈತರಿಗೆ ಅನ್ಯಾಯ ಮಾಡುವ ದುರುದ್ದೇಶದಿಂದ ಹಾಲಿನ ದರ ಕಡಿಮೆ ಮಾಡಿ ರೈತರಿಗೆ ಹೆಚ್ಚಿನ ಹೊರೆಯಾಗಿರುವುದರಿಂದ ನಷ್ಟಕ್ಕೆ ತುತ್ತಾಗುತ್ತಿರುವುದನ್ನು ತಪ್ಪಿಸದೇ ಸರ್ಕಾರವು ಕೈಗೊಂಡಿರುವ ಹಾಲಿನ ದರ ಇಳಿಕೆ ಮಾಡುವ ನಿರ್ಧಾರವನ್ನು ವಾಪಸ್ಸು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿರುವ ಕೋಲಾರ ಜಿಲ್ಲೆಯ ರೈತರಿಗೆ ಹಾಲಿನ ದರ 2 ರೂಗಳನ್ನು ಕಡಿಮೆ ಮಾಡಿರುವುದರಿಂದ ಕೇವಲ ಹಸುಗಳನ್ನು ಮಾತ್ರ ಪೋಷಣೆ ಮಾಡುಬಹುದಾಗಿದೆ. ಆದರೆ, ಹೈನೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿರುವ ಬಡ ರೈತ ಕುಟುಂಬಗಳ ಪೋಷಣೆ ಸಾಧ್ಯವಾಗದೇ ಬೀದಿಪಾಲಾಗುವ ಸಾಧ್ಯತೆಯಿದೆ ಎಂದು ಬೇಸರ ವ್ಯಕ್ತಪಿಡಿಸಿದರು.

ರೈತರಿಗೆ ತೀವ್ರ ಅನ್ಯಾಯ ಮಾಡುವಂತಹ ಹಾಲಿನ ಬೆಲೆ ಕಡಿತಗೊಳಿಸಿರುವುದರಿಂದ ರಾಜ್ಯ ಸರ್ಕಾರವು ವಾಪಸ್ಸು ಪಡೆದು ರೈತರ ಹಿತವನ್ನು ಕಾಪಾಡಬೇಕಾಗಿದೆ. ಹಾಲಿನ ಬೆಲೆ ಕಡಿಮೆ ಮಾಡಿದ್ದೇ ಆದಲ್ಲಿ ಕರ್ನಾಟಕ ರೈತ ಸೇನೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಿ ವಿಧಾನಸೌಧ ಚಲೋ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.

Advertisement

ರೈತರ ಮನವಿ ಸ್ವೀಕರಿಸಿದ ಬಂಗಾರಪೇಟೆ ಶಿಬಿರದ ಉಪವ್ಯವಸ್ಥಾಪಕ ಡಾ.ವೆಂಕಟರಮಣ ಮಾತನಾಡಿ, ರೈತರ ಸಮಸ್ಯೆಗಳ ಬಗ್ಗೆ ಕೋಚಿಮುಲ್‌ ಅಡಳಿತ ಮಂಡಳಿಗೆ ಮನವಿ ಕಳುಹಿಸಿಕೊಟ್ಟು, ವ್ಯವಸ್ಥಾಪಕ ನಿರ್ದೇಶಕರ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದೆಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ರೈತ ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಸಿ.ವಿ.ಪ್ರಭಾಕರಗೌಡ, ಪ್ರಧಾನ ಕಾರ್ಯದರ್ಶಿ ತುಳಸಿರಾಂಸಿಂಗ್‌, ನಗರ ಮಹಿಳಾ ಘಟಕ ಅಧ್ಯಕ್ಷೆ ಸಿ.ಎಸ್‌.ಅಂಬಿಕಾ, ಮುಖಂಡರಾದ ಆನಂದಗೌಡ, ಐತಾಂಡಹಳ್ಳಿ ಉದಯಕುಮಾರ್‌, ಸೌಭಾಗ್ಯಲಕ್ಷ್ಮಿ, ಆರ್‌.ಜಾನಕಿ, ಸರಸ್ವತಿ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next