Advertisement

ಪ್ಲಾಟ್ ಫಾರ್ಮ್ ಮೇಲೆ ಅಂಗಡಿ : ಸ್ಥಳಾಂತರಕ್ಕೆ ವ್ಯಾಪಾರಸ್ಥರ ಆಗ್ರಹ

08:05 PM Feb 23, 2022 | Team Udayavani |

ಭಟ್ಕಳ: ಬಸ್ ನಿಲ್ದಾಣದಲ್ಲಿ ಟೆಂಡರ್ ಮೂಲಕ ಅಂಗಡಿಗಳನ್ನು ಪಡೆದು ನಡೆಸುತ್ತಿರುವವರಿಗೆ ಏಕಾ ಏಕಿ ನಂದಿನಿ ಪಾರ್ಲರ್ ಎನ್ನುವ ಶೆಡ್ ಒಂದನ್ನು ತಮ್ಮ ಅಂಗಡಿಗಳ ಮುಂದೆಯೇ ಪ್ಲಾಟ್ ಫಾರ್ಮ ಮೇಲೆ ಇಟ್ಟಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ನಾವು ಸಾವಿರಾರು ರೂಪಾಯಿ ಬಾಡಿಗೆಗೆ ಟೆಂಡರ್ ಹಿಡಿದು ಅಂಗಡಿಗಳನ್ನು ಬಾಡಿಗೆಗೆ ಪಡೆದಿದ್ದೇವೆ. ಈಗಾಗಲೇ ಕರೊನಾದಿಂದ ಸಾಕಷ್ಟು ನಷ್ಟ ಅನುಭವಿಸಿದ ನಮಗೆ ನಮ್ಮ ಅಂಗಡಿಗಳ ಮುಂದೆ ದೊಡ್ಡ ಶೆಡ್ ತಂದಿಟ್ಟಿರುವುದು ಇನ್ನಷ್ಟು ತೊಂದರೆಗೆ ಕಾರಣವಾಗುತ್ತದೆ. ಸಾರಿಗೆ ಇಲಾಖೆಯು ನಮಗೆ ಅನುಕೂಲ ಮಾಡಿಕೊಡಬೇಕೇ ವಿನಹ ಅನನುಕೂಲ ಮಾಡಿಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸುವ ಅವರು ತಕ್ಷಣ ಇದನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅಂಗಡಿಕಾರ ರಾಘವೇಂದ್ರ ದೇವಡಿಗ ಬಸ್ ನಿಲ್ದಾಣದಲ್ಲಿ ಅಂಗಡಿಕಾರರು 30-40 ಸಾವಿರ ಬಾಡಿಗೆ ಪಡೆದು ಅಂಗಡಿ ನಡೆಸುತ್ತಿದ್ದೇವೆ. ಕೊರೋನಾ ಮತ್ತಿತರ ಕಾರಣದಿಂದ ಸಮರ್ಪಕ ವ್ಯಾಪಾರವಿಲ್ಲದೇ ಬಾಡಿಗೆ ಪಾವತಿಸುವುದೇ ಕಷ್ಟವಾಗಿದೆ. ಇಂತಹ ಸಂಕಷ್ಟಕರ ಪರಿಸ್ಥಿತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಬಸ್‍ನಿಲ್ದಾಣದ ಪ್ಲಾಟ್ ಪಾರ್ಮನಲ್ಲಿ ಶೆಡ್‍ವೊಂದನ್ನು ತಂದಿಡಲಾಗಿದೆ. ಇದನ್ನು ಪ್ಲಾಟ್‍ಫಾರ್ಮ ಮಧ್ಯಭಾಗದಲ್ಲಿಟ್ಟಿರುವುದರಿಂದ ಪ್ರಯಾಣಿಕರಿಗೆ ಓಡಾಡಲು ಕಷ್ಟವಾಗಿದೆ. ಅದಲ್ಲದೇ ಇದರ ಹಿಂದೆಯೇ ಶೌಚಾಲಯ, ಕಂಟ್ರೋಲ್ ರೂಮ್ ಇದೆ. ಇದನ್ನು ನಮ್ಮ ಅಂಗಡಿ ಮುಂದೆಯೇ ಇಟ್ಟಿರುವುದರಿಂದ ನಮ್ಮ ವ್ಯಾಪಾರಕ್ಕೂ ತೊಂದರೆಯಾಗಲಿದ್ದು, ಆದಷ್ಟು ಬೇಗ ಬಸ್ ನಿಲ್ದಾಣದ ಒಂದು ಬದಿಯಲ್ಲಿ ಇದನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ :  ರಷ್ಯಾ- ಉಕ್ರೇನ್ ಸಂಘರ್ಷ: ಗೋವಾದಲ್ಲಿ ಪ್ರತಿಕೂಲ ಪರಿಣಾಮ

ಇನ್ನೊರ್ವ ಅಂಗಡಿಕಾರ ಮೋಹನ ನಾಯ್ಕ ಮಾತನಾಡಿ ನಂದಿನಿ ಪಾರ್ಲರ್ ಮಾಡುವುದಕ್ಕೆ ನಮ್ಮ ವಿರೋದವಿಲ್ಲ. ಆದರೆ ಇದನ್ನು ನಿಲ್ದಾಣದ ಪ್ಲಾಟ್‍ಪಾರ್ಮನಲ್ಲಿ ಇಡುವುದಕ್ಕೆ ನಮ್ಮ ಆಕ್ಷೇಪವಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದರು. ಈ ಸಂದರ್ಭದಲ್ಲಿ ದಲಿತ ಮುಖಂಡ ಮಾರುತಿ ಪವಾಸ್ಕರ, ಅಂಗಡಿಕಾರರಾದ ಮನೋಜ ನಾಯ್ಕ, ನಾಗೇಶ ಸಾಲಿಗ್ರಾಮ, ರಾಘವೇಂದ್ರ ನಾಯ್ಕ ಮುಂತಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next