Advertisement

ಕಾಸರಗೋಡು ಜಿಲ್ಲೆಯಲ್ಲಿ ಮಿಲ್ಕ್ ಡೇ ಆಚರಣೆ

11:46 AM Jun 01, 2019 | keerthan |

ಬದಿಯಡ್ಕ: ಮಿಲ್ಕ್ ಡೇ ಇದರಂಗವಾಗಿ ಬದಿಯಡ್ಕ ಹಾಲು ಉತ್ಪಾದಕರ ಸಂಘದ ಆಶ್ರಯದಲ್ಲಿ ನಡೆದ ವಿಶೆಷ ಕಾರ್ಯಕ್ರಮವನ್ನು ಬದಿಯಡ್ಕ ಗ್ರಾ.ಪಂ. ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು.

Advertisement

ಬದಿಯಡ್ಕ ಹಾಲುತ್ಪಾದಕರ ಸಂಘದ ಅಧ್ಯಕ್ಷರಾದ ಕೆ.ಎ.ಶೆಟ್ಟಿ ಅದ್ಯಕ್ಷತೆ ವಹಿಸಿದರು. ಆಡಳಿತ ಮಂಡಳಿ ಸದಸ್ಯರಾದ ಸದಾನಂದ ರೈ ಶುಭಾಶಂಸನೆಗೈದರು. ಉಮಾನಾಥ ಕಾಮತ್‌ ಉಪಸ್ಥಿತರಿದ್ದರು. ಸುರೇಖ ಸ್ವಾಗತಿಸಿ ಆಶೋಕ ರೈ ವಂದಿಸಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಬೆಳಿಗ್ಗೆ ಡೈರಿಗೆ ಹಾಲು ತಂದವರಿಗೆ ಹಾಲಿನಿಂದ ತಯಾರಿಸಿದ ಸಿಹಿ ತಿಂಡಿಗಳನ್ನು ವಿತರಿಸಿ ಮಿಲ್ಕ್ ಡೇ ಯ ಶುಭ ಕೋರಲಾಯಿತು.

ಉತ್ತಮ ಗುಣಮಟ್ಟದ ಹಾಲಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹಾಲುತ್ಪಾದಕರು ಗುಣಮಟ್ಟ ಕಾಪಾಡುವತ್ತ ಹೆಚ್ಚಿನ ಗಮನ ಹರಿಸಬೇಕು. ಮನೆಮನೆಯಲ್ಲೂ ಗೋವುಗಳನ್ನು ಸಾಕಿ ಹಾಲುಮಾರಾಟ ಮಾಡುವ ಮೂಲಕ ಸ್ವಾವಲಂಬಿಗಳಾಗಳು ಸಾಧ್ಯ. ಕಲ್ಪವೃಕ್ಷದಂತೆ ಜನ ಸಾಮಾನ್ಯರ ಬದುಕಿಗೆ ವರದಾನವಾಗಿರುವ ಕಾಮದೇನುವಿನ ಹಾಲು ಮತ್ತು ಹಾಲುತ್ಪನ್ನಗಳಿಗೆ ಪ್ರಾಮುಖ್ಯತೆ ಇದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. ನಮ್ಮ ಸೊಸೈಟಿಯು ಹಾಲುತ್ಪಾದಕರಿಗೆ ಸೂಕ್ತ ಬೆಲೆ ನೀಡಿ ಹಾಲು ಖರೀದಿ ಮಾಡುವುದರಿಂದ ಹಾಗೂ ಜನರ ಪ್ರೋತ್ಸಾಹ ಉತ್ತಮ ರೀತಿಯಲ್ಲಿರುವುದರಿಂದ ಇಂದು ಈ ಮಟ್ಟಕ್ಕೆ ತಲುಪಲು ಸಾಧ್ಯವಾಗಿದೆ.
ಕೆ.ಎ.ಐತ್ತಪ್ಪ ಶೆಟ್ಟಿ , ಹಾಲುತ್ಪಾದಕರ ಸಂಘದ ಅಧ್ಯಕ್ಷ

ಹಾಲೆಂಬುದು ಅಮೃತ. ಹಾಲಿನ ಮಹತ್ವ ವಿಶ್ವಕ್ಕೆ ತಿಳಿಯಪಡಿಸಬೇಕು. ಕೃಷಿಕರಿಗೂ ಕೂಡ ಇಂದಿನ ದಿನ ಅವಿಸ್ಮರಣೀಯ. ಎಲ್ಲರೂ ಕೂಡ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಬೇಕು. ಬದಿಯಡ್ಕ ಹಾಲು ಘಟಕ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಬಾಲಕೃಷಂ ಶೆಟ್ಟಿ, ಬದಿಯಡ್ಕ ಪಂ. ಸದಸ್ಯರು.

Advertisement

Udayavani is now on Telegram. Click here to join our channel and stay updated with the latest news.

Next