ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಹಾಲುನಿರೀಕ್ಷಿತ ಮಟ್ಟದಲ್ಲಿ ಮಾರಾಟವಾಗುತ್ತಿಲ್ಲ. ಆದರೆ ಮುಂಗಾರು ಹಿನ್ನೆಲೆಯಲ್ಲಿ ಹಸುಗಳಿಗೆ ಹೇರಳವಾಗಿ ಹಸಿ ಮೇವು ದೊರೆಯುತ್ತಿದ್ದು ಹಾಲು ಸಂಗ್ರಹ ಅಧಿಕವಾಗಿದೆ.
ಈ ಕಾರಣಗಳಿಂದಾಗಿ ಬೆಂಗಳೂರು ಸಹಕಾರ ಹಾಲುಒಕ್ಕೂಟ ಮಂಡಳಿ(ಬಮೂಲ್)ಈಗ ರೈತರಿಗೆನೀಡುವ ಹಾಲಿನ ದರವನ್ನುಕಡಿತ ಮಾಡಲು ಮುಂದಾಗಿದೆ. ಪ್ರತಿ ಲೀಟರ್ ಹಾಲಿನ ಮೇಲೆ 1.50 ಪೈಸೆ ಕಡಿತಮಾಡಲು ಮುಂದಾಗಿದ್ದು ಜೂನ್ 1 ರಿಂದಲೇ ದರ ಕಡಿತ ಜಾರಿಗೆ ಬರುವ ಸಾಧ್ಯತೆ ಇದೆ.
ಬೆಂಗಳೂರು ಸಹಕಾರ ಹಾಲು ಒಕ್ಕೂಟ ಪ್ರತಿ ನಿತ್ಯಸರಾಸರಿ 10.5 ಲಕ್ಷದಿಂದ 11 ಲಕ್ಷ ಲೀಟರ್ ಹಾಲುಉತ್ಪಾದನೆ ಮಾಡುತ್ತದೆ. ಆದರೆ ಮೇ ಋತುವಿನಿಂದ ಡಿಸೆಂಬರ್ ವರೆಗೂ ಆಕಳುಗಳು ಹೇರಳವಾಗಿ ಹಾಲು ನೀಡಲಿವೆ. ಹಸಿ ಮೇವು ಹೇರಳವಾಗಿ ದೊರಕುವ ಜತೆಗೆ ಆಕಳುಗಳು ಕರು ಹಾಕುವ ಸೀಜನ್ ಕೂಡ ಆಗಿದೆ. ಹೀಗಾಗಿ ಇದೀಗ ಬೆಂಗಳೂರು ಸಹಕಾರ ಹಾಲು ಒಕ್ಕೂಟ ಪ್ರತಿ ನಿತ್ಯ ಸುಮಾರು 17 ಲಕ್ಷಲೀಟರ್ ಹಾಲನ್ನು ರೈತರಿಂದ ಖರೀದಿಸುತ್ತಿದೆ.
ಆದರೆ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಕರ್ಫ್ಯೂಜಾರಿ ಮಾಡಿದ್ದು ನೀರಿಕ್ಷಿತ ಮಟ್ಟದಲ್ಲಿ ಹಾಲುಮಾರಾಟವಾಗುತ್ತಿಲ್ಲ. ಕರ್ಫ್ಯೂ ಕಾರಣದ ಜತೆಗೆಕೋವಿಡ್ ಸೋಂಕಿಗೆ ಹೆದರಿ ಹಲವರು ನಗರ ಬಿಟ್ಟುಊರು ಸೇರಿದ್ದಾರೆ. ಹಾಗೆಯೇ ಹೋಟೆಲ್‌ಗಳು ಕೂಡ ಮುಚ್ಚಿವೆ. ಈ ಎಲ್ಲಾ ಕಾರಣದಿಂದಾಗಿಯೇ ಹಾಲು ಮಾರಾಟ 7.5 ಲಕ್ಷ ಲೀಟರ್‌ಗೆ ಇಳಿದಿದೆಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಕಷ್ಟದಲ್ಲಿ ಒಕ್ಕೂಟ: ಕಳೆದ ಬಾರಿ ಕೂಡ ಹೀಗೆಆಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಬೆಂಗ ಳೂರುಸಹಕಾರ ಹಾಲು ಒಕ್ಕೂಟ ಸಂಕಷ್ಟಕ್ಕೆ ಸಿಲುಕಿತ್ತು. ಈಗಲೂ ಮತ್ತದೆ ಸನ್ನಿವೇಶ ಎದುರಾಗಿದೆ ಎಂದುಒಕ್ಕೂಟದ ಅಧ್ಯಕ್ಷ ನರಸಿಂಹ ಮೂರ್ತಿ ಹೇಳಿದ್ದಾರೆ.
ಕಳೆದ ಒಂದೆರಡು ತಿಂಗಳ ಹಿಂದಷ್ಟೇ ಹಾಲುಉತ್ಪನ್ನಗಳ ಮಾರಾಟ ಪ್ರಕ್ರಿಯೆ ಸರಿದಾರಿಗೆ ಬಂದಿತ್ತು. ಹೀಗಾಗಿ ಆಗ ರೈತರಿಗೆ 1.50 ಪೈಸೆಯನ್ನು ಹೆಚ್ಚುವರಿಯಾಗಿ ಒಕ್ಕೂಟ ನೀಡಿತ್ತು. ಈಗ ಹಾಲುಹೆಚ್ಚಿನಸಂಖ್ಯೆಯಲ್ಲಿ ಮಾರಾಟ ಆಗುತ್ತಿಲ್ಲ. ಆ ಹಿನ್ನೆಲೆಯಲ್ಲಿರೈತರಿಗೆ ನೀಡುವ ಹಾಲಿನ ದರವನ್ನು 1.50 ರೂ. ಕಡಿತಮಾಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ದೇವೇಶ ಸೂರಗುಪ್ಪ