Advertisement

ಕೋವಿಡ್ ವಾರಿಯರ್ಸ್ ಗೆ ಹಾಲು ಒಕ್ಕೂಟ ಪ್ರೋತ್ಸಾಹ

06:39 AM Jun 14, 2020 | Suhan S |

ರಾಯಬಾಗ: ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಕೋವಿಡ್ ವಾರಿಯರ್ಸ್‌ ಹಾಗೂ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹಧನ ಚೆಕ್‌ ವಿತರಣಾ ಕಾರ್ಯಕ್ರಮ ಪಟ್ಟಣದ ವಸಂತರಾವ್‌ ಪಾಟೀಲ ಸಭಾಭವನದಲ್ಲಿ ಶನಿವಾರ ನಡೆಯಿತು.

Advertisement

ವಿಧಾನ ಪರಿಷತ್‌ ಸದಸ್ಯ ಹಾಗೂ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ವಿವೇಕರಾವ್‌ ಪಾಟೀಲ ಅವರು ಚೆಕ್‌ ವಿತರಿಸಿ ಮಾತನಾಡಿ, ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿ ಎಲ್ಲರೂ ಮೆಚ್ಚುವಂಥ ಕಾರ್ಯ ಮಾಡಿದ್ದಾರೆ. ಅವರಿಗೆ ಜಿಲ್ಲಾ ಹಾಲು ಒಕ್ಕೂಟದಿಂದ 25 ಲಕ್ಷ ರೂ. ಪ್ರೋತ್ಸಾಹ ಧನ ವಿತರಿಸಲಾಗಿದೆ. ಜಿಲ್ಲೆಯ ಪ್ರತಿಯೊಬ್ಬ ಆಶಾ ಕಾರ್ಯಕರ್ತರಿಗೆ ಮೂರು ಸಾವಿರ ರೂ. ಧನಸಹಾಯ ನೀಡಲಾಗುತ್ತಿದೆ. ಅಲ್ಲದೆ ಮುಖ್ಯಮಂತ್ರಿಗಳ ಕೋವಿಡ್‌-19 ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದ್ದೇವೆ ಎಂದು ಹೇಳಿದರು.

ತಹಶೀಲ್ದಾರ್‌ ಚಂದ್ರಕಾಂತ ಭಜಂತ್ರಿ, ಸಹಕಾರಿ ಸಂಘಗಳ ಉಪನಿರ್ದೇಶಕ ಕೆ.ಎಲ್‌. ಶ್ರೀನಿವಾಸ ಮಾತನಾಡಿದರು. ತಾಲೂಕಿನ 65 ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನದ ಚೆಕ್‌ ವಿತರಿಸಲಾಯಿತು.

ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಉಬೇದುಲ್ಲಾಖಾನ, ಡಾ| ವಿ.ಕೆ. ಜೋಷಿ, ಪಿಎಸ್‌ಐ ಗಜಾನನ ಮಾಂಗ, ಡಾ| ಆರ್‌.ಎಚ್‌. ರಂಗನ್ನವರ, ಕೆಎಂಎಫ್‌ ನಿರ್ದೇಶಕರಾದ ಎಸ್‌.ಎಸ್‌. ಮುಗಳಿ, ಬಿ.ಬಿ. ಕಟ್ಟಿ, ಉದಯಸಿಂಹ ಶಿಂಧೆ, ಡಾ| ಬಿ.ಎಂ. ಪರವಣ್ಣವರ, ಬಿ.ಎಸ್‌. ವಾಗ್ಮೊಡೆ, ವಿ.ಬಿ. ಈಟಿ, ಆರ್‌.ಬಿ. ಡೂಗ, ಪಿ.ವೈ. ಅಂಬೋಜಿ, ಸುನೀತಾ ಖಾನಪ್ಪಗೋಳ, ಎಸ್‌.ಎಸ್‌. ಪಾಟೀಲ, ಆರ್‌.ಕೆ. ಬಂಡಿ ಉಪಸ್ಥಿರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next