ದೋಟಿಹಾಳ: ಕೆ.ಬೆಂಚಮಟ್ಟಿ ಶಾಲಾ ಮಕ್ಕಳಿಗೆ ಹಾಲು ಮೊಟ್ಟೆ ವಿತರಣೆ ಮಾಡುತ್ತಿಲ್ಲ ಎಂದು ಸೋಮವಾರ ಉದಯವಾಣಿ ಆನ್ ಲೈನ್ ನಲ್ಲಿ ಮತ್ತು ಬುಧವಾರ ಪತ್ರಿಕೆಯಲ್ಲಿ ಸುದ್ದಿ ಪ್ರಸಾರ ಮಾಡಿದ ಕಾರಣ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳಿಗೆ ಹಾಲು, ಮೊಟ್ಟೆಗಳನ್ನು ಬುಧವಾರ ವಿತರಣೆ ಮಾಡಿದರು.
ಈ ಶಾಲೆಯಲ್ಲಿ ಕಳೆದ ಒಂದುವರೆ ತಿಂಗಳಿಂದ ಮುಖ್ಯೋಪಾಧ್ಯಯರು ಬಾರದ ಕಾರಣ ಹಲವಾರು ಸಮಸ್ಯೆಗಳಿಂದ ಈ ಶಾಲೆಯಲ್ಲಿ ಬಿಸಿ ಊಟಕ್ಕೆ ಪದಾರ್ಥಗಳು ಇಲ್ಲದಂತಾಗಿತ್ತು ಗ್ರಾಮಸ್ಥರು ತಮ್ಮ ಮನೆಯಿಂದಲೇ ಅಕ್ಕಿಯನ್ನು ನೀಡಿ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ನೀಡುತ್ತಿದ್ದರು ಹಾಗೂ ಈ ಶಾಲಾ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಹಾಲು ಮತ್ತು ಮೊಟ್ಟೆ ಸಿಗುತ್ತಿರಲಿಲ್ಲ ಇದರ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ಮಕ್ಕಳಿಗಿಲ್ಲ ಹಾಲು ಮೊಟ್ಟೆ ಎಂಬ ಎಂಬ ಶೀರ್ಷಿಕೆಯಡಿ ಬುಧವಾರ ಸುದ್ದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ತಾಲೂಕು ಅಕ್ಷರ ದಾಸೋಹಧಿಕಾರಿ ಕೆ. ಶರಣಪ್ಪ ಹಾಗೂ ಸಿಆರ್ ಪಿ ಸೋಮಲಿಂಗಪ್ಪ ಗುರಿಕಾರ ಅವರು ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಹಾಲು, ಮೊಟ್ಟೆಗಳನ್ನು ವಿತರಣೆ ಮಾಡಿ. ಇನ್ನೂ ಮುಂದೆ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಹಾಲು, ಮೊಟ್ಟೆ ವಿತರಣೆ ಮಾಡಬೇಕೆಂದು ಸೂಚನೆ ನೀಡಿದರು.
ಕಳೆದ ಒಂದುವರೆ ತಿಂಗಳಿಂದ ಶಾಲೆಯಲ್ಲಿ ಮುಖ್ಯ ಶಿಕ್ಷಕ ಇಲ್ಲದ ಕಾರಣ ಪದಾರ್ಥಗಳ ಬೇಡಿಕೆ ಪಟ್ಟಿಯನ್ನು ನೀಡಿರಲಿಲ್ಲ ಹೀಗಾಗಿ ಬಿಸಿ ಊಟದ ಆಹಾರ ಪದಾರ್ಥದ ಕೊರತೆ ಕಂಡುಬಂದಿದೆ. ಶಾಲಾ ಮಕ್ಕಳಿಗೆ ಹಾಲು ಮಟ್ಟೆ ವಿತರಣೆ ಮಾಡದಿರುವ ಬಗ್ಗೆ ಉದಯವಾಣಿ ಆನ್ ಲೈನ್ ಮತ್ತು ಪತ್ರಿಕೆಯಲ್ಲಿ ಪ್ರಸಾರಗೊಂಡ ಮೇಲೆ ಶಾಲೆಗೆ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡು ಮಕ್ಕಳಿಗೆ ಹಾಲು ಮೊಟ್ಟೆ ವಿತರಣೆ ಮಾಡಲು ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದು ತಾಲೂಕು ಅಕ್ಷರದಾಸೋಹಧಿಕಾರಿ ಕೆ. ಶರಣಪ್ಪ ಅವರು ಹೇಳಿದರು.
ಇದನ್ನೂ ಓದಿ : ಹುಣಸೂರು : ಭೀಕರ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಬ್ಬರ ಸಾವು
ಇಂದು ನಮ್ಮ ಶಾಲೆಗೆ ಹಾಲು, ಮೊಟ್ಟೆ ವಿತರಣೆ ಮಾಡಿದ್ದಾರೆ ಧನ್ಯವಾದಗಳು ಉದಯವಾಣಿಗೆ
– ಕೆ.ಬೆಂಚಮಟ್ಟಿ ಶಾಲಾ ಮಕ್ಕಳು.